
ಶಿವಮೊಗ್ಗ (ಸೆ.1) : ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಗೆ ಮತ್ತೊಬ್ಬನನ್ನು ಜೊತೆಗೆ ಮದುವೆ ನಿಗಿದಿಯಾಗಿದ್ದು, ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಿಯಕರನ ಬಾಡಿಗೆ ಮನೆಯನ್ನು ಯುವತಿಯ ಸಂಬಂಧಿಕರು ಧ್ವಂಸ ಮಾಡಿದ್ದು. ಕುಪಿತಗೊಂಡ ಕುಪಿತಗೊಂಡ ಪ್ರೇಮಿಯಿಂದ ಆಕೆಗೆ ಕಪಾಳಮೋಕ್ಷ ಮಾಡಿದ ಘಟನೆ ನಗರದ ದೊಡ್ಡ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೇರಿಗೆ ಸವಾಸೇರು ಎನ್ನುವಂತೆ, ಅವರ ಮೇಲೆ ಇವರು, ಇವರ ಮೇಲೆ ಅವರು ಹರಿ ಹಾಯ್ದಿದ್ದು, ಶಿವಮೊಗ್ಗ ಮಾರ್ನಮಿಬೈಲ್‌ನಲ್ಲಿರುವ ಬಾಡಿಗೆ ಮನೆ ಧ್ವಂಸಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡಸಲಾಗುತ್ತಿದೆ. ಶಿವಮೊಗ್ಗದ ದೊಡ್ಡ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಘಟನೆ ಹಿನ್ನೆಲೆ: ಮಾರ್ನಮಿಬೈಲ್‌ನ ಯುವಕ ಭದ್ರಾವತಿಯ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ. ಹಲವು ವರ್ಷ ಇಬ್ಬರ ನಡುವೆ ಪರಸ್ಪರ ಪ್ರೀತಿ ಇತ್ತು. ಆದರೆ ಇತ್ತೀಚೆಗೆ ಯುವತಿ ಮನೆಯವರು ಆಕೆಗೆ ತಮ್ಮದೇ ಧರ್ಮದ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಯುವಕ ಆಕೆ ಮೇಲೆ ಹಲ್ಲೆ ಮಾಡಿದ್ದ. ಈ ಬಗ್ಗೆ ಭದ್ರಾವತಿ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. FIR ದಾಖಲಾದ ಬಳಿಕ ಯುವತಿ ಮನೆಯವರು ಮಾರ್ನಮಿಬೈಲ್ ನ ಯುವಕನಿದ್ದ ಬಾಡಿಗೆ ಮನೆಯಲ್ಲಿದ್ದ ವಸ್ತುಗಳನ್ನು ಪುಡಿಗಟ್ಟಿದ್ದಾರೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ