Mangaluru: ಸುಳ್ಯದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ: 9 ವಿದ್ಯಾರ್ಥಿಗಳ ಬಂಧನ

By Govindaraj SFirst Published Sep 1, 2022, 4:01 AM IST
Highlights

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನ್ಯಕೋಮಿನ ಜೋಡಿಗೆ ಹಿಗ್ಗಾಮುಗ್ಗ ಥಳಿಸಿದ 9 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. 

ಮಂಗಳೂರು (ಸೆ.01): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನ್ಯಕೋಮಿನ ಜೋಡಿಗೆ ಹಿಗ್ಗಾಮುಗ್ಗ ಥಳಿಸಿದ 9 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಾದ ದೀಕ್ಷಿತ್, ಧನುಷ್, ಪ್ರಜ್ವಲ್, ತನುಜ್, ಅಕ್ಷಯ್,  ಮೋಕ್ಷಿತ್, ಚರಣ್, ನಿಶ್ಚಯ್ ಮತ್ತು ಪವನ್‌ರನ್ನು ಬಂಧಿಸಲಾಗಿದ್ದು, ಆರೋಪಿಗಳೂ ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ‌ ನಡೆಸಿದ್ದರು.

ತನುಜ್, ಮೋಕ್ಷಿತ್, ದೀಕ್ಷಿತ್, ಅಕ್ಷಯ್ ಮತ್ತು ಪ್ರಜ್ವಲ್ ಹಲ್ಲೆ ನಡೆಸಿದ್ದು, ಚರಣ್, ಧನುಷ್, ನಿಶ್ಚಯ್ ಮತ್ತು ಪವನ್ ಹಲ್ಲೆಗೆ ಸಹಕರಿಸಿದವರಾಗಿದ್ದಾರೆ. ಘಟನೆ‌ಯು  ಸುಳ್ಯದ ಕಾಲೇಜು ಗ್ರೌಂಡ್‌ನಲ್ಲಿ ನಿನ್ನೆ ನಡೆದಿತ್ತು. ಅನ್ಯಕೋಮಿನ ಜೋಡಿ ಮೇಲೆ ಆರೋಪಿಗಳು ವಿದ್ಯಾರ್ಥಿಗಳು ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಥಳಿತಕ್ಕೊಳಗಾದ ಯುವಕ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್‌ ದಾಖಲಾಗಿತ್ತು. ಹುಡುಗನ ಬೆನ್ನ ತುಂಬಾ ಬಾಸುಂಡೆ ಬರೋ ಹಾಗೆ ಥಳಿಸಿದ್ದು, ಪರಸ್ಪರ ಅನ್ಯಕೋಮಿನ ಜೋಡಿಯು ಪ್ರೀತಿಸುತ್ತಿದ್ದರು. ಸದ್ಯ ಸುಳ್ಯ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಳೆ ಬರುವ ಟೈಮ್‌ನಲ್ಲಿ ಅಂಡರ್​ಪಾಸ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ: ರವಿಕಾಂತೇಗೌಡ

ಇನ್ನು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಕರಣಗಳು ಕಂಡುಬಂದಿವೆ. ಈ ವರ್ಷದ ಎಪ್ರಿಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿರಿಬಾಗಿಲು ಗ್ರಾಮದಲ್ಲಿ ಹಿಂದೂ ಮಹಿಳೆಯ ಜೊತೆ ಸವಾರಿ ಮಾಡಿದ್ದಕ್ಕೆ ಆಟೋ ರಿಕ್ಷಾ ಚಲಾಯಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಬಲಪಂಥೀಯ ಗುಂಪು ಹಲ್ಲೆ ನಡೆಸಿತ್ತು. ಈ ವರ್ಷದ ಜುಲೈನಲ್ಲಿ ಮತ್ತೊಂದು ಬಲಪಂಥೀಯ ಗುಂಪು ಮಂಗಳೂರಿನ ಪಬ್‌ಗೆ ನುಗ್ಗಿ ವಿದ್ಯಾರ್ಥಿನಿಯರು ತಡರಾತ್ರಿ ಪಾರ್ಟಿ ಮಾಡುವುದನ್ನು ಆಕ್ಷೇಪಿಸಿತ್ತು. ವಿದ್ಯಾರ್ಥಿಗಳು ಪಬ್ ತೊರೆಯುವಂತೆ ಒತ್ತಾಯಿಸಲಾಗಿತ್ತು.

ರಾಜ್ಯದಲ್ಲಿ ಹಿಜಾಬ್ ಸಮಸ್ಯೆ ಮತ್ತು ಹುಬ್ಬಳ್ಳಿ-ಧಾರವಾಡ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆ ಸೇರಿದಂತೆ ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯದ ಹಲವಾರು ಘಟನೆಗಳು ರಾಜ್ಯದಲ್ಲಿ ವರದಿಯಾಗಿರುವ ನಡುವೆ ಈ ಪ್ರಕರಣ ನಡೆದಿರುವುದು ಸುದ್ದಿಯಾಗಿದೆ. ಹುಬ್ಬಳ್ಳಿ-ಧಾರವಾಡ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿದ್ದ ಪಾಲಿಕೆ ಆಯುಕ್ತರ ಆದೇಶವನ್ನು ಅಂಜುಮನ್-ಎ-ಇಸ್ಲಾಂ ಸಂಸ್ಥೆ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಪ್ರಶ್ನಾರ್ಹ ಆಸ್ತಿಯನ್ನು 1991 ರ ಪೂಜಾ ಸ್ಥಳಗಳ ಕಾಯ್ದೆಯ ಅಡಿಯಲ್ಲಿ ರಕ್ಷಿಸಲಾಗಿದೆ ಎಂದು ಅಂಜುಮನ್-ಎ-ಇಸ್ಲಾಂ ಹೇಳಿಕೊಂಡಿದೆ, ಅದು ಯಾವುದೇ ಧಾರ್ಮಿಕ ಪೂಜಾ ಸ್ಥಳವನ್ನು ಪರಿವರ್ತಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ.

ಸಿಲಿಕಾನ್ ಸಿಟಿಯಲ್ಲಿ ಚಾಲಕನಿಂದ ಅಡ್ಡಾದಿಡ್ಡಿ ಆಂಬ್ಯುಲೆನ್ಸ್ ಚಾಲನೆ: ಬಂಧನ

ಆದರೆ ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿರುವ ಆಸ್ತಿಯ ಪ್ರಕರಣವು ಧಾರ್ಮಿಕ ಪೂಜಾ ಸ್ಥಳವಲ್ಲ ಎಂದು ಹೇಳಿದೆ ಮತ್ತು ಪುರಸಭೆಯ ಆಯುಕ್ತರ ಆದೇಶವನ್ನು ಎತ್ತಿಹಿಡಿದ ನಂತರ ಸ್ಥಳದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಬುಧವಾರ ಬೆಳಗ್ಗೆ ಪೂಜಾ ಕಾರ್ಯವನ್ನು ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಈದ್ಗಾ ಮೈದಾನದ ಆಸ್ತಿ ಧಾರವಾಡ ನಗರಸಭೆಗೆ ಸೇರಿದ್ದು, ಅಂಜುಮನ್-ಎ-ಇಸ್ಲಾಂ ಗುತ್ತಿಗೆದಾರ ಮಾತ್ರ ಎಂದು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅಭಿಪ್ರಾಯಪಟ್ಟಿದ್ದರು.

click me!