
ಹುಬ್ಬಳ್ಳಿ (ಮೇ.22): ಶೆಡ್‌ನಲ್ಲಿ ಮೊಬೈಲ್ ಚಾರ್ಜ್ ಹಾಕಬೇಡ ಎಂದ ಮೇಸ್ತ್ರಿಯನ್ನೇ ಕಟ್ಟಡ ಕಾರ್ಮಿಕ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ತಡರಾತ್ರಿ ತಾಲೂಕಿನ ರೇವಡಿಹಾಳದಲ್ಲಿ ನಡೆದಿದೆ. ಛಬ್ಬಿ ಗ್ರಾಮದ ದಾದಾಪೀರ ಕೋಲಕಾರ (38) ಹ*ತ್ಯೆಗೀಡಾದ ವ್ಯಕ್ತಿ. ಈತನ ಅಳಿಯ ಹಾಗೂ ಕಾರ್ಮಿಕ ಅಜೀಂ ಜಮಾಖಾನೆ ಹತ್ಯೆ ಮಾಡಿದ್ದು ಇದೀಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ದಾದಾಪೀರ ಹಾಗೂ ಅಜೀಂ ಛಬ್ಬಿ ಗ್ರಾಮದವರಾಗಿದ್ದು, ಇಬ್ಬರೂ ಸಂಬಂಧಿಕರೇ (ಮಾವ-ಅಳಿಯ) ಆಗಿದ್ದಾರೆ. ಮಾವ ಸೆಂಟ್ರಿಂಗ್ ಮಾಡಿದರೆ, ಅಳಿಯ ಸಹಾಯಕನಾಗಿದ್ದ. ದಾದಾಪೀರ ಅಜೀಂನಿಗೆ ಮುಂಗಡವಾಗಿ ಹಣ ನೀಡಿದ್ದ. ಈ ಕುರಿತು ಸಣ್ಣ ಜಗಳವಾಗಿತ್ತು. ಬಳಿಕ ಶೆಡ್‌ನಲ್ಲಿ ಮೊಬೈಲ್ ಚಾರ್ಜ್ ಹಾಕಲು ಅಜೀಂ ತೆರಳಿದಾಗ ದಾದಾಪೀರ ಇಲ್ಲಿ ಚಾರ್ಜ್ ಹಾಕಬೇಡ. ಅಲ್ಲಿ ಬೆಲೆಬಾಳುವ ವಸ್ತುಗಳಿರುತ್ತವೆ. ಏನಾದರೂ ಆದರೆ ಸಮಸ್ಯೆ ಎಂದು ಆಕ್ಷೇಪಿಸಿದ್ದಾನೆ. ಇದಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.
ಮಾತಿಗೆ ಮಾತು ಬೆಳೆದು ನಾನು ಕೊಟ್ಟಿರುವ ಮುಂಗಡ ಹಣ ಕೊಡು. ಕೆಲಸಕ್ಕೆ ಬರಬೇಡ ಎಂದು ದಾದಾಪೀರ ಹೇಳಿದನಂತೆ. ಇದರಿಂದ ಕುಪಿತಗೊಂಡ ಅಜೀಂ ತಕ್ಷಣವೇ ಅಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ದಾದಾಪೀರನ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಆತ ಅಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಉಳಿದ ಕಾರ್ಮಿಕರು ಕೆಎಂಸಿಆರ್‌ಐಗೆ ತೆಗೆದುಕೊಂಡು ಬಂದಿದ್ದಾರೆ. ಆದರೆ, ಅಷ್ಟರೊಳಗೆ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ನಡುವೆ ಪರಾರಿಯಾಗಿದ್ದ ಆರೋಪಿ ಅಜೀಂನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ