Be Alert: ಕಾಕ್ರೋಚ್​ ಜನತಾ ಪಾರ್ಟಿ ಹೆಸ್ರಲ್ಲಿ ಲಕ್ಷ ಲಕ್ಷ ಲೂಟಿ - ಲಿಂಕ್​ ಕ್ಲಿಕ್​ ಮಾಡಿದ್ರೆ ಬ್ಯಾಂಕ್​ ಖಾತೆ ದಿವಾಳಿ

Published : May 22, 2026, 01:30 PM IST
Cockroach Janata Party

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕಾಕ್ರೋಚ್ ಜನತಾ ಪಾರ್ಟಿ, ಜೆನ್ Z ಯುವಕರನ್ನು ಆಕರ್ಷಿಸುತ್ತಿದೆ. ಆದರೆ, ಈ ಪಕ್ಷಕ್ಕೆ ಸೇರಲು ಕಳುಹಿಸಲಾಗುವ ವಾಟ್ಸ್​ಆ್ಯಪ್​ ಲಿಂಕ್‌ಗಳ ಮೂಲಕ ಸೈಬರ್ ವಂಚಕರು ಬ್ಯಾಂಕ್ ಖಾತೆಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದು, ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸೂಚಿಸಿದೆ.

ಸದ್ಯ ಜೆನ್​ Z ಗಳ ಕಾಕ್ರೋಚ್​ ಜನತಾ ಪಾರ್ಟಿ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಹವಾ ಸೃಷ್ಟಿಸಿದೆ. ಕಾಂಗ್ರೆಸ್​, ಬಿಜೆಪಿ ಎಲ್ಲಾ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ ಅನ್ನೂ ಮೀರಿ 2 ಕೋಟಿಗೂ ಅಧಿಕ ಫಾಲೋವರ್ಸ್​ ಹೊಂದಿದೆ ಈ ಪಕ್ಷ. ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ ತಮ್ಮ ಪಕ್ಷದ ಆರಂಭದಲ್ಲಿ ಮಾಡಿರುವ ಘೋಷಣೆಗಳೇ ಯಥಾವತ್ತಾಗಿ ಈ ಪಕ್ಷದಲ್ಲಿಯೂ ಇದೆ. ಭ್ರಷ್ಟಾಚಾರಮುಕ್ತ ಭಾರತ ಮಾಡುವುದು ತಮ್ಮ ಗುರಿ ಎನ್ನು ಘೋಷಣೆಯೊಂದಿಗೆ ಬಂದಿದ್ದ ಅರವಿಂದ ಕೇಜ್ರಿವಾಲಾ ಅವರು ಆರಂಭದಲ್ಲಿ ಮಾಡಿರುವ ಘೋಷಣೆಗಳ ಬಗ್ಗೆ ಎಲ್ಲರಿಗೂ ತಿಳಿದದ್ದೇ. ಅದೇ ಮಾದರಿಯನ್ನು ಇಟ್ಟುಕೊಂಡು ಭಾರತವನ್ನು ಬದಲಾಯಿಸಲು ಕೆಲವು ವಿದೇಶಿಗರೂ ಕೈಜೋಡಿಸಿದ್ದಾರೆ. ಭಾರತ ಬದಲಾಗಬೇಕಿದೆ ಎಂದು ಜೆನ್​ ಜೀಗಳು ಉತ್ಸುಕರಾಗಿದ್ದಾರೆ ಎನ್ನುವುದು ಈ ಪ್ರಮಾಣದಲ್ಲಿ ಜನರು ಪಕ್ಷಕ್ಕೆ ಬೆಂಬಲ ನೀಡುತ್ತಿರುವುದನ್ನು ನೋಡಿದರೆ ತಿಳಿಯುತ್ತದೆ.

ಸೈಬರ್​ ಕ್ರಿಮಿನಲ್ಸ್​ ಚುರುಕು

ಇದರ ನಡುವೆಯೆ, ಸೈಬರ್​ ಕ್ರೈಮ್​ ತಂಡ ಎಲರ್ಟ್​ ಆಗಿದೆ. ಜನರನ್ನು ಮರುಳು ಮಾಡಲು, ಅವರ ಬ್ಯಾಂಕ್​ ಖಾತೆಯನ್ನು ಲೂಟಿ ಮಾಡಲು ಹೊಸ ಹೊಸ ಪ್ರಯೋಗ ಮಾಡುತ್ತಲೇ ಬಂದಿದೆ. ಸೋ ಕಾಲ್ಡ್​ ವೆಲ್​ ಎಜುಕೇಟೆಡ್​ ಅರ್ಥಾತ್​ ಸುಶಿಕ್ಷಿತರು ಎನ್ನಿಸಿಕೊಂಡಿರುವ ಜನರೇ ಇವರ ಮೋಸಕ್ಕೆ ಬಲಿಯಾಗಿ ಲಕ್ಷ ಲಕ್ಷ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು, ಮಾಧ್ಯಮಗಳಲ್ಲಿ ಎಷ್ಟೇ ಎಚ್ಚರಿಕೆ ಬಂದರೂ, ತಮಗೆ ಆಮಿಷ ತೋರಿ ಬಂದಿರುವ ಲಿಂಕ್​ ನೋಡಿದ ತಕ್ಷಣ ಎಲ್ಲಾ ಎಚ್ಚರಿಕೆಯೂ ಮರೆತು ಹೋಗಿ ಲಿಂಕ್​ ಕ್ಲಿಕ್​ ಮಾಡಿ ದುಡ್ಡು ಕಳೆದುಕೊಂಡಿರುವವರೇ ಲಕ್ಷ ಲಕ್ಷ ಮಂದಿ ಇದ್ದಾರೆ. ಹೀಗೆ ಕಳೆದುಕೊಂಡ ದುಡ್ಡು ಸಿಗುವುದು ಕೂಡ ಅತ್ಯಂತ ವಿರಳ. ಏಕೆಂದರೆ ಸೈಬರ್​ ಕ್ರಿಮಿನಲ್ಸ್​ ನೆಟ್​ವರ್ಕ್​ ಅಷ್ಟೊಂದು ಸ್ಟ್ರಾಂಗ್​ ಆಗಿದೆ.

ಹವಾ ನೋಡಿ ಹುಮ್ಮಸ್ಸು

ಇದೀಗ, ಇವರ ಲಕ್ಷ ಕಾಕ್ರೋಚ್​ ಜನತಾ ಪಾರ್ಟಿಯ ಕಡೆಗೆ ಹೋಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಇದರ ಹವಾ ನೋಡಿದವರು ತಾವೂ ಪಕ್ಷವನ್ನು ಸೇರಲು ಉತ್ಸುಕರಾಗಿರುತ್ತಾರೆ. ಅದರಲ್ಲಿಯೂ ಹೇಳಿಕೇಳಿ ಜೆನ್​ ಜೀಗಳು. ಮೊಬೈಲ್​ ಇಲ್ಲದೇ ಜೀವನವೇ ಇಲ್ಲ ಎನ್ನುವವರು. ಆದರೆ ಈ ಉತ್ಸಾಹ ನಿಮ್ಮ ಬ್ಯಾಂಕ್​ ಖಾತೆಯನ್ನೇ ಗುಳುಂ ಮಾಡಬಹುದು. ಹಣ ಎಲ್ಲವೂ ಲೂಟಿ ಆಗಬಹುದು ಎನ್ನುವ ಎಚ್ಚರಿಕೆ ಕೊಟ್ಟಿದೆ ಪೊಲೀಸ್​ ಇಲಾಖೆ.

ವಾಟ್ಸ್​ಆ್ಯಪ್​ ಸಂದೇಶ

ಕಾಕ್ರೋಚ್​ ಜನತಾ ಪಕ್ಷಕ್ಕೆ ನೀವೂ ಜಾಯಿನ್​ ಆಗಿ ಎಂದು ನಿಮ್ಮ ವಾಟ್ಸ್​ಆ್ಯಪ್​ಗೆ ಲಿಂಕ್​ ಬರುತ್ತದೆ. ಸೋಷಿಯಲ್​ ಮೀಡಿಯಾದಲ್ಲಿ ಇದರ ಹವಾ ನೋಡಿ ನೀವೂ ಭಾರತವನ್ನು ಬದಲಾಯಿಸಿಯೇ ಬಿಡೋಣ, ನಾನೂ ಈ ಪಕ್ಷವನ್ನು ಜಾಯಿನ್ ಆಗೋಣ ಎಂದು ಹಿಂದೆ ಮುಂದೆ ನೋಡದೇ ಲಿಂಕ್​ ಕ್ಲಿಕ್​ ಮಾಡಿದರೆ ನಿಮಗೆ ಅರಿವೇ ಇಲ್ಲದೇ, ನಿಮ್ಮ ಅಕೌಂಟ್​ ಹ್ಯಾಕ್​ ಆಗಿರುತ್ತದೆ. ಬ್ಯಾಂಕ್​ ಲೂಟಿಯಾಗಿರುತ್ತದೆ. ಇದಾಗಲೇ ಕೆಲವು ಕೇಸ್​​ಗಳು ಹೀಗೆಯೇ ಆಗಿದ್ದು, ತಮ್ಮ ಬ್ಯಾಂಕ್​ನಲ್ಲಿ ಏನಾಗ್ತಿದೆ ಎನ್ನುವುದೇ ತಿಳಿಯದೇ ಜೆನ್​ ಜೀಗಳು ಕಂಗಾಲಾಗಿರುವುದಾಗಿ ಈ ಪೊಲೀಸ್​ ಅಧಿಕಾರಿ ಎಚ್ಚರಿಸಿದ್ದಾರೆ ನೋಡಿ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶೀತಲ್‌ ದೇವಿ ಕೋಚ್‌ ಕುಲ್ದೀಪ್‌ಗೆ ಪೋಕ್ಸೋ ಕೇಸಲ್ಲಿ 5 ವರ್ಷ ಜೈಲು!
ದರ್ಶನ್‌ ಜೊತೆ ಟೀ ಹೀರಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಿಂಡಲಗಾ ಜೈಲಿಂದ ಬಿಡುಗಡೆ!