ಪ್ರೀತಿ ನಿರಾಕರಿಸಿದ್ದಕ್ಕೆ 15 ಮಂದಿಯಿಂದ ಮಹಿಳೆಯ ಕಿಡ್ನ್ಯಾಪ್‌: ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

By BK Ashwin  |  First Published Aug 3, 2022, 3:38 PM IST

ತಮಿಳುನಾಡಿನಲ್ಲಿ ಮಹಿಳೆಯನ್ನು ವ್ಯಕ್ತಿಯೊಬ್ಬ ತನ್ನ 14 ಜನ ಸಹವರ್ತಿಗಳೊಂದಿಗೆ ಸೇರಿಕೊಂಡು ಆಕೆಯ ಮನೆಗೇ ನುಗ್ಗಿ ಆಪಹರಣ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸದ್ಯ. ಮಹಿಳೆಯನ್ನು ರಕ್ಷಿಸಲಾಗಿದ್ದು ಹಲವು ಆರೋಪಿಗಳನ್ನು ಬಂಧಿಸಲಾಗಿದೆ. 


ಮಹಿಳೆಯೊಬ್ಬರನ್ನು 15 ಮಂದಿ ಆರೋಪಿಗಳು ಅಪಹರಣ ಮಾಡಿರುವ ಭೀಕರ ಘಟನೆ ತಮಿಳುನಾಡಿನ ಮಯಿಲಾಡುಥಾರೈನಲ್ಲಿ ನಡೆದಿದೆ. ಅವರ ಮನೆಯಿಂದಲೇ ಆಕೆಯನ್ನು ಮಂಗಳವಾರ ರಾತ್ರಿ ಅಪಹರಿಸಲಾಗಿದ್ದು, ಈ ದೃಶ್ಯಾವಳಿಗಳು ಅವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ವರದಿಯಾಗಿದೆ.  

ಮಹಿಳೆಯ ಮನೆಗೆ ನುಗ್ಗಿದ 15 ಮಂದಿ ಪುರುಷರು ಆಕೆಯ ಮನೆಯ ಮುಂದಿನ ಗೇಟ್‌ನಿಂದಲೇ ಮನೆಯೊಳಗೆ ನುಗ್ಗಿದ್ದಾರೆ. ಇನ್ನು, ಅಪಹರಣದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಘಟನೆ ಸಂಬಂಧ ದೂರು ಸ್ವೀಕರಿಸುತ್ತಿದ್ದಂತೆ ಎಚ್ಚೆತ್ತುಕೊಂಡ ತಮಿಳುನಾಡು ಪೊಲೀಸರು ಹಲವು ಆರೋಪಿಗಳನ್ನು ವಶಪಡಿಸಿಕೊಂಡಿದ್ದು, ಮಂಗಳವಾರ ರಾತ್ರಿಯೇ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Tap to resize

Latest Videos

ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾದ ಎದುರು ಮನೆಯ ಆಂಟಿ!

ಪದೇ ಪದೇ ಮಹಿಳೆಗೆ ಪೀಡಿಸುತ್ತಿದ್ದ ಪ್ರಮುಖ ಆರೋಪಿ..!

ವಿಘ್ನೇಶ್ವರನ್‌ ಎಂಬ 34 ವರ್ಷದ ವ್ಯಕ್ತಿ ಆ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ, ಅಲ್ಲದೆ, ಆತ ಆಕೆಯನ್ನು ಪ್ರೀತಿ ಮಾಡುತ್ತಿದ್ದ, ಹಾಗೂ ಆಕೆಯನ್ನು ಹಿಂಬಾಲಿಸುತ್ತಿದ್ದ ಎಂದು ತಿಳಿದುಬಂದಿದೆ. ಅವರಿಬ್ಬರೂ ಕೆಲ ಕಾಲ ಡೇಟಿಂಗ್‌ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ನಂತರ ಆತನ ವರ್ತನೆಗೆ ಬೇಸತ್ತ ಮಹಿಳೆ ಆತನ ಗೆಳೆತನವನ್ನು ನಿರಾಕರಿಸಿದ್ದರು. ಆದರೆ, ಮಹಿಳೆಯ ಮನೆಗೆ ಹೋಗಿ ಪದೇ ಪದೇ ವಾಗ್ವಾದ ನಡೆಸುತ್ತಿದ್ದ ಹಾಗೂ ನಿನ್ನನ್ನು ಪ್ರೀತಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಮಹಿಳೆ 2 ಬಾರಿ ವಿಘ್ನೇಶ್ವರನ್‌ ವಿರುದ್ಧ ಮಯಿಲಾದುಥುರಾಯ್‌ ಪೊಲೀಸರಿಗೆ ದೂರು ನೀಡಿದ್ದರು, ಹಾಗೂ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿದ್ದರು ಎಂದು ತಿಳಿದುಬಂದಿದೆ. 

ಆ ವೇಳೆ ಮಹಿಳೆ ಹಾಗೂ ವಿಘ್ನೇಶ್ವರನ್‌ ಇಬ್ಬರ ಕುಟುಂಬದವರನ್ನೂ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು, ನಂತರ ಆತನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿದ್ದರು, ಹಾಗೂ ಆ ಮಹಿಳೆಗೆ ಮತ್ತೊಮ್ಮೆ ತೊಂದರೆ ಕೊಡಬೇಡ ಎಂದೂ ಪೊಲೀಸರು ವಾರ್ನ್‌ ಮಾಡಿದ್ದರು ಎನ್ನಲಾಗಿದೆ. ಆದರೂ, ತನ್ನ ಪಟ್ಟು ಬಿಡದ ವಿಘ್ನೇಶ್ವರನ್‌ ಪೊಲೀಸರ ಬೆದರಿಕೆಗೂ ಜಗ್ಗದೆ ಆಕೆಯ ಸುತ್ತಲೇ ಸುತ್ತಲು ಪ್ರಯತ್ನಿಸುತ್ತಿದ್ದ ಹಾಗೂ ಈ ಹಿಂದೆಯೇ ಒಮ್ಮೆ ಅಪಹರಣ ಮಾಡಲು ಯತ್ನಿಸಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ.

Vijayanagara News: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಕಿಡ್ನಾಪ್: ಸಿನಿಮೀಯ ಶೈಲಿಯಲ್ಲಿ ಅಪಹರಣಕಾರರ ಬಂಧನ

ಜುಲೈ 12 ರಂದೇ ಅಪಹರಣಕ್ಕೆ ಯತ್ನ..!
ಪೊಲೀಸರ ಎಚ್ಚರಿಕೆಗೆ ತಲೆ ಕೆಡಿಸಿಕೊಳ್ಳದ ಆತ ಜುಲೈ 1 ರಂದೇ ಮಹಿಳೆಯ ಅಪಹರಣಕ್ಕೆ ಯತ್ನಿಸಿದ್ದ, ಆದರೆ ಆ ವೇಳೆ ತಪ್ಪಿಸಿಕೊಂಡಿದ್ದ ಮಹಿಳೆ ಪೊಲೀಸರಿಗೆ ಮತ್ತೆ ದೂರು ನೀಡಿದ್ದರು, ಬಳಿಕ ಪೊಲೀಸರು ಆತನ ಹುಡುಕಾಟದಲ್ಲಿದ್ದರು ಎಂದು ತಿಳಿದುಬಂದಿದೆ. 

ಆದರೆ, ತಮಿಳುನಾಡು ಪೊಲಿಸರಿಗೆ ಸಿಗದ ಆತ ತನ್ನ 14 ಜನ ಸಹವರ್ತಿಗಳೊಂದಿಗೆ ಮಹಿಳೆಯ ಮನೆಗೆ ನುಗ್ಗಿ ಮಂಗಳವಾರ ಅಪಹರಣ ಮಾಡಿದ್ದಾನೆ. ಅಲ್ಲದೆ, ಮಹಿಳೆಯ ಕುಟುಂಬಕ್ಕೆ ಚಾಕು ಹಾಗೂ ಇತರೆ ಚೂಪಾದ ವಸ್ತುಗಳಿಂದ ಬೆದರಿಕೆ ಹಾಕಿದ್ದಾರೆ ಎಂದೂ ತಿಳಿದುಬಂದಿದೆ. 

ಮಹಿಳೆಯ ಅಪಹರಣದ ಬಗ್ಗೆ ದೂರು ಸ್ವೀಕರಿಸಿದ ನಂತರ ಕೊನೆಗೂ ಎಚ್ಚೆತ್ತುಕೊಂಡ ಪೊಲೀಸರು, ಆರೋಪಿಗಳಿಗಾಗಿ ತನಿಖಾ ತಂಡವನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದರು. ಎಲ್ಲ ಪೊಲೀಸ್‌ ಠಾಣಗೆಗಳಿಗೂ ಹಾಗೂ ಟೋಲ್‌ಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಅಪಹರಣ ಮಾಡಿದ ಸ್ಕಾರ್ಪಿಯೋ ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆ ಹಚ್ಚಿದ್ದಾರೆ. 
ನಂತರ ಆ ತನಿಖಾ ತಂಡ ವಿಘ್ನೇಶ್ವರನ್‌ ಹಾಗೂ ಆತನ ಸಹವರ್ತಿಗಳನ್ನು ಬಂಧಿಸಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿಘ್ನೇಶ್ವರನ್‌ನ ಕೆಲ ಸಹವರ್ತಿಗಳಿಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ ಎಂದೂ ತಿಳಿದುಬಂದಿದೆ. 

click me!