ಅನಾಮಧೆಯ ಮಹಿಳೆಯ ಶವ ಪತ್ತೆ| ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಟ್ಲಹಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು|
ಹರಪನಹಳ್ಳಿ(ಅ.15): ಅನಾಮಧೆಯ ಮಹಿಳೆಯ ಶವ ತಾಲೂಕಿನ ವಟ್ಲಹಳ್ಳಿ ಗ್ರಾಮದ ದೊಡ್ಡ ಹಳ್ಳದ ಹತ್ತಿರ ಬುಧವಾರ ಬೆಳಗ್ಗೆ ಕಂಡು ಬಂದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ರಸ್ತೆ ಪಕ್ಕದಲ್ಲಿ ದೊಡ್ಡ ಹಳ್ಳದ ಬಳಿ ಅಂದಾಜು 30-35 ವರ್ಷದ ಮಹಿಳೆಯನ್ನು ಯಾರೋ ಕೊಲೆ ಮಾಡಿ ಬೆಂಕಿ ಹಚ್ಚಿ ಅರ್ಧಂಬರ್ಧ ಸುಟ್ಟು ಹಾಕಿದ್ದಾರೆ. ಈ ಮಹಿಳೆಯ ಹೆಸರು ವಿಳಾಸ ತಿಳಿದು ಬಂದಿಲ್ಲ, ಮೇಲ್ನೋಟಕ್ಕೆ ಬಂಜಾರ ಜನಾಂಗದ ಮಹಿಳೆ ಇರಬಹುದು ಎಂದು ಪೊಲೀಸರು ಊಹಿಸಿದ್ದಾರೆ.
ಬೆಳಗಾವಿ: ಆಸ್ತಿಗಾಗಿ ಮಗನ ಮೇಲೆ ಕಲ್ಲು ಎತ್ತಿಹಾಕಿ ಕೊಂದ ತಂದೆ..!
ಶವವನ್ನು ದಾವಣಗೆರೆ ನಗರದ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ, ಆಕೆಯ ವಿಳಾಸ ತಿಳಿದು ಬಂದಲ್ಲಿ ಹಲುವಾಗಲು ಪೊಲೀಸ್ ಠಾಣೆಗೆ ಅಥವಾ ಹರಪನಹಳ್ಳಿ ಸಿಪಿಐ ಅವರಿಗೆ ತಿಳಿಸಲು ಸ್ಥಳೀಯ ಪೊಲೀಸರು ಕೋರಿದ್ದಾರೆ.
ಇದನ್ನೂ ನೋಡಿ | ಗದಗ; ಗೋವಾಕ್ಕೆ ಹೋದ ಆಂಟಿಗೆ ಬ್ರಹ್ಮಚಾರಿ ಸಹವಾಸ.. ಗಂಡ ಸತ್ತು ಬಿದ್ದ!