ಅಣ್ಣನನ್ನು ಕೊಂದ ತಮ್ಮ| ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ| ನಿತ್ಯವೂ ಕುಡಿದ ಮತ್ತಿನಲ್ಲಿ ತಂದೆ- ತಾಯಿ ಹಾಗೂ ಸಹೋದರರ ಜತೆ ಜಗಳಕ್ಕಿಳಿಯುತ್ತಿದ್ದ ಕೊಲೆಯಾದ ವ್ಯಕ್ತಿ|
ಬ್ಯಾಡಗಿ(ಅ.15): ಕೌಟುಂಬಿಕ ಕಲಹದ ಹಿನ್ನೆಲೆ ತಮ್ಮನೇ ಅಣ್ಣನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ನಾಗರಾಜ ಗೊರವರ(22) ಕೊಲೆಯಾದ ವ್ಯಕ್ತಿ. ಬುಡಪನಹಳ್ಳಿ ಗ್ರಾಮದ ನಿವಾಸಿಗಳಾದ ನಾಗಾರಾಜ ಗೊರವರ ಹಾಗೂ ದಿಳ್ಳೆಪ್ಪ ಗೊರವರ ಅಣ್ಣ ತಂಮ್ಮಂದಿರು. ಮೃತ ನಾಗರಾಜ ಕಳೆದ ಹಲವಾರು ವರ್ಷಗಳಿಂದ ಮದ್ಯವಸನಿಯಾಗಿದ್ದು, ನಿತ್ಯವೂ ಕುಡಿದ ಮತ್ತಿನಲ್ಲಿ ತಂದೆ- ತಾಯಿ ಹಾಗೂ ಸಹೋದರರ ಜತೆ ಜಗಳ ಕ್ಕಿಳಿಯುತ್ತಿದ್ದ. ಅಲ್ಲದೆ ಎಲ್ಲರನ್ನೂ ಕೊಲ್ಲುವ ಬೆದರಿಕೆ ಹಾಕುತ್ತಾ ಬಂದಿದ್ದ ಎನ್ನಲಾಗಿದೆ.
ಮನೆಗೆ ಬರ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ಸುರಿಮಳೆ
ಹಿರಿಯ ಸಹೋದರನ ವರ್ತನೆಯಿಂದ ಬೇಸತ್ತಿದ್ದ ತಮ್ಮ ದಿಳ್ಳೆಪ್ಪ ಇವರಿಬ್ಬರ ನಡುವೆ ಹಲವಾರು ಬಾರಿ ಜಗಳವೂ ನಡೆದಿತ್ತು. ಆದರೆ ಮಂಗಳವಾರ ದಿಳ್ಳೆಪ್ಪ ಮನೆಯಲ್ಲಿದ್ದ ಕೊಡಲಿಯಿಂದ ಹಿರಿಯ ಸಹೋದರ ನಾಗರಾಜನನ್ನು ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.
ಕಳೆದ 2018ರಲ್ಲಿ ತನ್ನ ಕೊಲೆಯಾದ ನಾಗರಾಜ ಪೋಕ್ಸೊ ಕಾಯಿದೆಯಡಿಯಲ್ಲಿ ಶಿಕ್ಷೆ ಕೂಡ ಅನುಭವಿಸಿ ಬಂದಿದ್ದಾಗಿ ತಿಳಿದುಬಂದಿದೆ. ಹತ್ಯೆಯ ಬಳಿಕ ಆರೋಪಿ ದಿಳ್ಳೆಪ್ಪ ಗೊರವರ ಖುದ್ದಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ದೇವರಾಜ್, ಅಡಿಶನಲ್ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಪರೀಶಿಲನೆ ನಡೆಸಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.