ಮಾಜಿ ಗೆಳೆಯನ ಕೃತ್ಯ/ ನರ್ಸ್ ಗೆ ಬೆಂಕಿ ಹಚ್ಚಿದ/ ಯುವತಿಯ ಜತೆ ತಾನು ಸುಟ್ಟು ಹೋದ/ ವಿಜಯವಾಡದಲ್ಲಿನ ಘಟನೆ
ವಿಜಯವಾಡ(ಅ. 14) ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಿಂದ ಪೈಶಾಚಿಕ ಪ್ರಕರಣವೊಂದು ವರದಿಯಾಗಿದೆ. ಹನುಮಾನ್‌ಪೇಟೆ ಪ್ರದೇಶದಲ್ಲಿ ಸೋಮವಾರ ರಾತ್ರಿ 25 ವರ್ಷದ ಯುವತಿಗೆ ಆಕೆಯ ಮಾಜಿ ಗೆಳೆಯ ಬೆಂಕಿ ಹಚ್ಚಿದ್ದಾನೆ. ಗೆಳೆಯನ ಕೃತ್ಯಕ್ಕೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಚಿನ್ನಾರಿ ಬಲಿಯಾಗಿದ್ದಾರೆ.
ತನಗೆ ಬೆಂಕಿ ಹಬ್ಬ್ಇದ್ದ ಮಾಜಿ ಗೆಳೆಯನನ್ನು ಹಿಡಿದಿದ್ದಾಳೆ. ಆರೋಪಿಗೂ ಸುಟ್ಟ ಗಾಯಗಳಾಗಿದ್ದವು. ಶೇ. 80 ಸುಟ್ಟ ಗಾಯಗಳಾಗಿದ್ದ ಗೆಳೆಯನೂ ಗುಂಟೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ
25 ವರ್ಷದ ಜಿ ನಾಗಭೂಷಣಂ ತಾನು ಪ್ರಾಣ ಕಳೆದುಕೊಂಡಿದ್ದು ಅಲ್ಲದೆ ಗೆಳತಿಯನ್ನು ಸಾಯಿಸಿದ್ದಾನೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ನರ್ಸ್ ನ್ನು ಅಡ್ಡ ಹಾಕಲಾಗಿದೆ. ಇಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದೆ.
ಚಿನ್ನಾರಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯಲ್ಲಿ ಯುವತಿ ಸುಡುತ್ತಿರುವಾಗ ಬೆಂಕಿ ಹಚ್ಚಿದ್ದ ಮಾಜಿ ಗೆಳೆಯನನ್ನು ಎಳೆದಿದ್ದಾಳೆ. ಕೋಪಕ್ಕೆ ಬುದ್ಧಿ ಕೊಟ್ಟ ಕಾರಣಕ್ಕೆ ಎರಡು ಜೀವಗಳು ಬಲಿಯಾಗಿವೆ.