ಹೊನ್ನಾವರ: ಗಂಡನ ಮನೆಯವರ ಕಿರುಕುಳ ತಾಳದೆ ವಿವಾಹಿತ ಮಹಿಳೆ ಆತ್ಮಹತ್ಯೆ

Kannadaprabha News   | Asianet News
Published : Jul 20, 2020, 12:58 PM IST
ಹೊನ್ನಾವರ: ಗಂಡನ ಮನೆಯವರ ಕಿರುಕುಳ ತಾಳದೆ ವಿವಾಹಿತ ಮಹಿಳೆ ಆತ್ಮಹತ್ಯೆ

ಸಾರಾಂಶ

ವಿವಾಹಿತ ಮಹಿಳೆ ಆತ್ಮಹತ್ಯೆ; ಗಂಡನ ಮನೆಯ ಕಿರುಕುಳ ಆರೋಪ| ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ನಡೆದ ಘಟನೆ| ಕಳೆದೊಂದು ವರ್ಷದಿಂದಲೂ ದೀಪಾಳಿಗೆ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ|

ಹೊನ್ನಾವರ(ಜು.20): ಕಾಸರಕೋಡ ಟೀಚರ್‌ ಕಾಲೋನಿಯ 32 ವರ್ಷದ ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿಯೇ ಫ್ಯಾನ್‌ಗೆ ವೇಲ್‌ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ದೀಪಾ ಪ್ರವೀಣ ನಾಯ್ಕ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಮೃತ ಮಹಿಳೆಯ ತಾಯಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದು ಆತ್ಮಹತ್ಯೆಗೆ ದೀಪಾಳ ಮಾವ ಹರಿಯಪ್ಪ ನಾಯ್ಕ ಹಾಗೂ ಆಕೆಯ ಪತಿ ಪ್ರವೀಣ ಹರಿಯಪ್ಪ ನಾಯ್ಕ ಎಂಬವರೇ ಕಾರಣ ಎಂದು ಆರೋಪಿಸಿದ್ದಾರೆ.

ಪಿಯುಸಿಯಲ್ಲಿ ಫೇಲ್: ಮನನೊಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನ

ಕಳೆದೊಂದು ವರ್ಷದಿಂದಲೂ ದೀಪಾಳಿಗೆ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎನ್ನುವ ಅಂಶವನ್ನು ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ಪಷ್ಟಪಡಿಸಿರುವ ಮೃತಳ ಸಹೋದರ ಮಾರುತಿ ನಾಯ್ಕ ಈ ಹಿಂದೆಯೇ ಕುಟುಂಬದ ಹಿರಿಯರು ದೀಪಾಳ ಗಂಡನ ಮನೆಗೆ ಹೋಗಿ ಮಾತುಕತೆ ಮಾಡಿದಾಗಲೂ ಆಕೆಯ ಮಾವ ಮತ್ತು ಗಂಡ ನೀನು ನಮಗೆ ಬೇಡ ಎಲ್ಲಾದರೂ ಹೋಗಿ ಸಾಯಿ, ನೀನೊಂದು ದೊಡ್ಡ ಪೀಡೆ ಎಂದೆಲ್ಲಾ ಬೈದಿದ್ದರು. ಇದೇ ರೀತಿಯ ಕಿರುಕುಳ ಮುಂದುವರೆದ ಕಾರಣ ಮನನೊಂದು ಆಕೆ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು