ಗಂಡನನ್ನು ಕೊಂದು ದೂರು ಕೊಟ್ಟ ಪತ್ನಿ ಸೇರಿ ನಾಲ್ವರು ಆರೆಸ್ಟ್..!

By Kannadaprabha News  |  First Published Jul 20, 2020, 10:01 AM IST

ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಬಸವರಾಜಪ್ಪ (38) ಜು.14ರಂದು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಮೃತನ ಪತ್ನಿ ರೂಪಾ ತನ್ನ ಪತಿ ಸಾವಿನ ಕುರಿತಂತೆ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು. ಈಗ ಪತ್ನಿ ಸೇರಿ ನಾಲ್ವರು ಆರೆಸ್ಟ್ ಆಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ದಾವಣಗೆರೆ(ಜು.20): ಪತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪೊಲೀಸ್‌ ಠಾಣೆಗೆ ದೂರು ನೀಡಿದ್ದ ವ್ಯಕ್ತಿಯ ಪತ್ನಿಯೂ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಹರಿಹರ ಪೊಲೀಸರು ಯಶಸ್ವಿಯಾಗಿದ್ದಾರೆ.

ರೂಪಾ, ಅರುಣಕುಮಾರ, ಕಿರಣ್‌ ಹಾಗೂ ಸಂತೋಷ ಬಂಧಿತರು. ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಬಸವರಾಜಪ್ಪ (38) ಜು.14ರಂದು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಮೃತನ ಪತ್ನಿ ರೂಪಾ ತನ್ನ ಪತಿ ಸಾವಿನ ಕುರಿತಂತೆ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು.

Tap to resize

Latest Videos

ಮೃತನ ಮರಣೋತ್ತರ ಪರೀಕ್ಷೆಯ ವರದಿ ಜು.17ರಂದು ಪೊಲೀಸರ ಕೈ ಸೇರಿತ್ತು. ನಿಟ್ಟೂರು ಗ್ರಾಮದ ಬಸವರಾಜಪ್ಪ ಅವರ ಸಾವಿನ ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರು ಗ್ರಾಮಾಂತರ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಶಿವಪ್ರಸಾದ, ಮಲೇಬೆನ್ನೂರು ಎಸ್‌ಐ ವೀರಬಸಪ್ಪ ಕುಸಲಾಪುರ ಒಳಗೊಂಡ ತಂಡವನ್ನು ರಚಿಸಿದ್ದರು.

ಪೋಸ್ಟ್‌ಮಾರ್ಟಂ ವರದಿ ಕೈ ಸೇರುತ್ತಿದ್ದಂತೆಯೇ ಕಾರ್ಯೋನ್ಮುಖರಾದ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೃತನ ಪತ್ನಿ ರೂಪಾ, ಅರುಣಕುಮಾರ, ಕಿರಣ್‌ ಹಾಗೂ ಸಂತೋಷನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದಾಗ ಬಸವರಾಜಪ್ಪ ಅವರ ಕೊಲೆ ರಹಸ್ಯ ಬಯಲಾಗಿದೆ.

ಕೊರೋನಾ ಕಾಲದಲ್ಲಿ 'ಮನೆ' ಬಿಟ್ಟು ಬಂದ ಡ್ರೋಣ್ ಪ್ರತಾಪ್‌ಗೆ ಮತ್ತೊಂದು ಸಂಕಷ್ಟ!

ಬಸವರಾಜಪ್ಪ ಅಲಿಯಾಸ್‌ ಬಸಪ್ಪ ನಿತ್ಯ ಕುಡಿದು ಬಂದು, ಗಲಾಟೆ ಮಾಡುವುದು, ಬಾಯಿಗೆ ಬಂದಂತೆ ಬೈಯ್ಯುತ್ತಿದ್ದ ಎಂದು ಆರೋಪಿ ರೂಪಾ ಬಾಯಿಬಿಟ್ಟಿದ್ದಾಳೆ. ಕುಡುಕ ಪತಿಯ ವರ್ತನೆಯಿಂದ ರೋಸಿ ಹೋಗಿ, ಆತನನ್ನು ಕೊಲೆಗೈದು, ನೇಣು ಹಾಕಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಲೆ ಪ್ರಕರಣ ಬೇಧಿಸಿದ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಎಸ್‌ಪಿ ಹನುಮಂತರಾಯ, ಎಎಸ್‌ಪಿ ಎಂ.ರಾಜೀವ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

click me!