ಡ್ರೊಣ್ ಪ್ರತಾಪ್ ಗೆ ಒಂದಾದ ಮೇಲೆ ಒಂದು ಸಂಕಷ್ಟ/ ಪ್ರತಾಪ್ ಮೇಲೆ ಮತ್ತೊಂದು ದೂರು/ ಡ್ರೋನ್ ಪ್ರತಾಪ್ ವಿರುದ್ದ ಎಫ್ಐಆರ್ ದಾಖಲು/ ಹೋಂ ಕ್ವಾರಂಟೇನ್ ನಿಯಮ ಉಲ್ಲಂಘನೆ ಆರೋಪದ ಅಡಿ ಎಫ್ಐಆರ್/ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
ಬೆಂಗಳೂರು(ಜು. 19) ಸೋಶಿಯಮ್ ಮೀಡಿಯಾದಲ್ಲಿ ಟ್ರೋಲ್ ಆದ ಮೇಲೆ ಡ್ರೋಣ್ ಪ್ರತಾಪ್ ಗೆ ಒಂದಾದ ಮೇಲೆ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಪ್ರತಾಪ್ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿದೆ.
ಪ್ರತಾಪ್ ಹೋಂ ಕ್ವಾರಂಟೇನ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಂಪ್ಲೆಂಟ್ ದಾಖಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೋಂಕಿತ ವ್ಯಕ್ತಿಯೊಬ್ಬರ ಪ್ರಾಥಮಿಕ ಸಂಪರ್ಕಿತನಾಗಿದ್ದ ಡ್ರೋನ್ ಪ್ರತಾಪ್ ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಆರೋಪಿಸಲಾಗಿದೆ
ತಮ್ಮ ಮೇಲಿನ ಆರೋಪಕ್ಕೆ ಪ್ರತಾಪ್ ಹೇಳುವುದೇನು?
ಡಾ.ಪ್ರಯಾಗ್ ಎರಂಬುವರು ದೂರು ನೀಡಿದ್ದಾರೆ. ಸಿವಿಲ್ ಡಿಫೆನ್ಸ ಸಿಬ್ಬಂದಿಯಿಂದ ಪರಿಶೀಲನೆ ನಡೆಸಿ ವೈದ್ಯರಿಗೆ ಮಾಹಿತಿಯನ್ನು ಸಹ ನೀಡಲಾಗಿದೆ. ಡ್ರೋಣ್ ಪ್ರತಾಪ್ ಸುಳ್ಳು ಹೇಳಿಕೊಂಡು ತಿರುಗಾಡಿದ್ದು ಚಂದಾ ಹಣ ಪಡೆದು ಜನರಿಗೆ ವಂಚನೆ ಮಾಡಿದ್ದಾರೆ ಎಂಬ ದೂರು ದಾಖಲಾಗಿತ್ತು. ಜೇಕಬ್ ಜಾರ್ಜ್ ಎಂಬುವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ನನ್ನ ಬಳಿ ಪ್ರತಾಪ್ ವಿರುದ್ಧ ದಾಖಲೆಗಳು ಇವೆ ಎಂದು ಹೇಳಿದ್ದರು.