25 ವರ್ಷದ ಮುಂಬೈ ಮೂಲದ ಮಹಿಳೆಯೊಬ್ಬರು ಸೈಬರ್ ವಂಚನೆಯಿಂದ ₹ 3.63 ಲಕ್ಷ ಕಳೆದುಕೊಂಡಿದ್ದಾರೆ ಮತ್ತು ಬ್ಯಾಂಕ್ ಅಧಿಕಾರಿಯಂತೆ ಸೋಗು ಹಾಕಿದ ವಂಚಕನೊಂದಿಗೆ ಒಟಿಪಿ ಹಂಚಿಕೊಳ್ಳಲಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಮುಂಬೈ (ಏ.1): ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವಹಿವಾಟಿಗೆ (Bank Transaction) ತೀರಾ ಅಗತ್ಯವಾಗಿರುವ ಒನ್ ಟೈಮ್ ಪಾಸ್ ವರ್ಡ್ (One Time Password ) ಇಲ್ಲದ ನಡುವೆಯೂ ಸೈಬರ್ ವಂಚಕರು (cyber fraudster) ಹಣ ಲಪಟಾಯಿಸಿರುವ ಬಗ್ಗೆ ವರದಿಯಾಗಿದೆ. ಸೈಬರ್ ವಂಚನೆಯಿಂದ 3.63 ಲಕ್ಷ ರೂಪಾಯಿ ಕಳೆದುಕೊಂಡಿರುವ 25 ವರ್ಷದ ಮಹಿಳೆಯೊಬ್ಬರು, ಬ್ಯಾಂಕ್ ಅಧಿಕಾರಿಯಂತೆ ನಟಿಸಿ ವಂಚಕ ನನಗೆ ಕರೆ ಮಾಡಿದ್ದ, ಈ ವೇಳೆ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಕೇಳಿದ್ದಾನೆ. ಆದರೆ, ಆತನೊಂದಿಗೆ ನಾನು ಒಟಿಪಿ (OTP) ಹಂಚಿಕೊಳ್ಳದ ಹೊರತಾಗಿಯೂ ಅಕೌಂಟ್ ನಿಂದ ಹಣ ವಿತ್ ಡ್ರಾ ಆಗಿದೆ ಎಂದು ಹೇಳಿದ್ದಾರೆ.
ಈಕುರಿತಂತೆ ಮಾರ್ಚ್ 30 ರಂದು ಬೊರಿವಲಿ ಪೊಲೀಸ್ ಠಾಣೆಯಲ್ಲಿ (Borivali Police Station) ಎಫ್‌ಐಆರ್ (FIR) ದಾಖಲಾಗಿದೆ. ಮಹಿಳೆ ತಾನು ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ತಂದೆ ಗಾರ್ಮೆಂಟ್ ವ್ಯಾಪಾರಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಹಣ ಕಳೆದುಕೊಂಡ ಮಹಿಳೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ (PNB) ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಆಕೆಯ ಏರ್‌ಟೆಲ್ ಸಂಖ್ಯೆಯು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆ ಎಂದು ಹೇಳಿದ್ದಾರೆ. ಮಾರ್ಚ್ 29 ರಂದು ಸಂಜೆ 4 ಗಂಟೆ ಸುಮಾರಿಗೆ ಆಕೆಗೆ ಎರಡು ವಿಭಿನ್ನ ಮೊಬೈಲ್ ಸಂಖ್ಯೆಗಳಿಂದ ಫೋನ್ ಕರೆಗಳು ಬಂದವು. ತಾನು ಬ್ಯಾಂಕಿನಿಂದ ಮಾತನಾಡುತ್ತಿದ್ದೇನೆ ಮತ್ತು ಆಕೆಯ ಬ್ಯಾಂಕ್ ಖಾತೆ ಸಂಖ್ಯೆಯಂತಹ ಎಲ್ಲಾ ಬ್ಯಾಂಕಿಂಗ್ ಸಂಬಂಧಿತ ವಿವರಗಳನ್ನು ಹೊಂದಿರುವುದಾಗಿ ಆ ವ್ಯಕ್ತಿ ಹೇಳಿದ್ದಾನೆ.
ನಂತರ ಈ ವ್ಯಕ್ತಿ ಒಟಿಪಿ ಕೇಳಿದ್ದಾನೆ. ಆದರೆ ಮಹಿಳೆಗೆ ಅನುಮಾನ ಬಂದು ಕಾಲ್ ಕಟ್ ಮಾಡಿದ್ದು, ಬಳಿಕ ಆ ವ್ಯಕ್ತಿ ಆಕೆಗೆ ಹಲವು ಬಾರಿ ಕರೆ ಮಾಡಿದ್ದಾನೆ. ನಂತರ ಆಕೆಗೆ ವಾಟ್ಸಾಪ್‌ನಲ್ಲಿ ಬೇರೆ ನಂಬರ್‌ಗೆ ಕರೆ ಮಾಡಿ ಆಕೆಯ ನೆಟ್ ಬ್ಯಾಂಕಿಂಗ್ ಖಾತೆಗೆ ಆಕೆಯ ನಂಬರ್ ಲಿಂಕ್ ಆಗಿದೆಯೇ ಎಂದು ಕೇಳಿದ್ದಾನೆ. ಮಹಿಳೆ ಖಚಿತಪಡಿಸಿದಾಗ, ಅವರು ಮತ್ತೆ OTP ಕೇಳಿದರು. ಈ ಬಾರಿಯೂ ಆಕೆ ಕಾಲ್ ಅನ್ನು ಕಟ್ ಮಾಡಿದ್ದರು.
ಆ ದಿನ ರಾತ್ರಿ 8 ಗಂಟೆ ಸುಮಾರಿಗೆ ಆಕೆಯ ಬ್ಯಾಂಕ್‌ನಿಂದ ಎರಡು ಸಂದೇಶಗಳು ಬಂದಿದ್ದು, ಎರಡು ವಹಿವಾಟಿನಲ್ಲಿ ತನ್ನ ಖಾತೆಯಿಂದ 3.63 ಲಕ್ಷ ರೂಪಾಯಿ ವಿತ್ ಡ್ರಾ ಆಗಿರುವ ಮಾಹಿತಿ ಬಂದಿತ್ತು. ಮರುದಿನ ಮಹಿಳೆ ತನ್ನ ಬ್ಯಾಂಕ್‌ಗೆ ದೂರು ನೀಡಿ ನಂತರ ಪೊಲೀಸರನ್ನು ದೂರು ನೀಡಿದ್ದಾಳೆ.
Cybrer Crime ವೈನ್ ಡೆಲಿವರಿಗೆ 10 ರೂ ನೀಡಲು ಹೇಳಿ ಯುವತಿಯ ಅಕೌಂಟ್‌ನಿಂದ 50 ಸಾವಿರ ಧೋಖಾ!
ಇದಕ್ಕೂ ಮುನ್ನ ಬೆಂಗಳೂರಿನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ವೈನ್ ಹೋಂ ಡೆಲಿವರಿ ವೆಬ್‌ಸೈಟ್‌ನಲ್ಲಿ ಮಾರ್ಚ್ 22ರಂದು ವೈನ್ ಬುಕ್ ಮಾಡಿ 540 ರೂಪಾಯಿ ಯುವತಿ ಪಾವತಿಸಿದ್ದಾರೆ. ಸ್ವಲ್ಪ ಹೊತ್ತಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ವೈನ್ ಡೆಲಿವರಿ ಕೊಡಲು ಬರುತ್ತಿದ್ದೇನೆ. ಅದಕ್ಕೂ ಮೊದಲು ಡೆಲಿವರಿ ಶುಲ್ಕವೆಂದು 10 ರೂಪಾಯಿ ಭರಿಸುವಂತೆ ಸೂಚಿಸಿದ್ದಾನೆ. ಈ ಮಾತಿಗೆ ಒಪ್ಪಿದಾಗ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಂಬರ್ ಹೇಳಿದರೆ ಸಾಕು ಎಂದಿದ್ದಾನೆ. ಆಗ ಒಟಿಪಿ ಪಡೆದು ಯುವತಿಯ ಬ್ಯಾಂಕ್ ಖಾತೆಯಿಂದ .49,326 ಅನ್ನು ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Cyber Fraud: ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ಸ್ ಸರ್ಚ್ ಮಾಡ್ತೀರಾ? ಹಾಗಿದ್ರೆ ಹುಷಾರ್!
ಖರೀದಿಗೆ ನೆಪದಲ್ಲಿ ಕ್ಯೂಆರ್ ಕೋಡ್ ಕಳುಹಿಸಿ ವಂಚನೆ
ಹಳೇ ಹಾಸಿಗೆಗಳನ್ನು ಆನ್‌ಲೈನ್ ಮಾರ್ಕೆಟ್‌ನಲ್ಲಿ ಮಾರಾಟಕ್ಕೆ ಮುಂದಾಗಿದ್ದ ಯುವತಿಯರ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು ಒಂದು ಲಕ್ಷ ರು.ಕನ್ನ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.ಕಸವನಹಳ್ಳಿ ನಿವಾಸಿ ತೇಜಸ್ವಿ ಸಿಂಗ್ ಮತ್ತು ಸಪ್ನಾ ವಂಚನೆಗೊಳಗಾಗಿದ್ದು, ಈ ಸಂಬಂಧ ಕನ್ಹಯ್ಯ ಕುಮಾರ್ ಮತ್ತು ಉದಯ್‌ಭಾನ್ ಸಿಂಗ್ ಎಂಬುವರ ವಿರುದ್ಧ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.ತೇಜಸ್ವಿ ಸಿಂಗ್ ಹಾಗೂ ಸಪ್ನಾ ಅವರು ಹಳೇ ಹಾಸಿಗೆಗಳನ್ನು ಮಾರಾಟ ಮಾಡಲು ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿ ಕರೆ ಮಾಡಿದ್ದ ಅಪರಿಚಿತರು, ಹಾಸಿಗೆಗಳನ್ನು ಖರೀದಿಸುತ್ತೇವೆ. ಆನ್‌ಲೈನ್ ಮೂಲಕ ಹಣ ಸಂದಾಯ ಮಾಡುವುದಾಗಿ ಹೇಳಿ, ಮೊಬೈಲ್‌ಗೆ ಕ್ಯೂಆರ್ ಕೋಡ್ ಕಳುಹಿಸಿದ್ದರು.