* ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಬ್ಳಿ ಗ್ರಾಮದಲ್ಲಿ ನಡೆದ ಘಟನೆ
* ಅಂತರ್ ಜಾತಿ ವಿವಾಹಕ್ಕೆ ಮನೆಯವರ ವಿರೋಧ
* ನಮಗೆ ಜೀವ ರಕ್ಷಣೆ ಬೇಕು ಅಂತಾ ಚಿಕ್ಕಮಗಳೂರು ಎಸ್ಪಿಗೆ ಮನವಿ
ವರದಿ ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಏ.01): ಪ್ರೀತಿಸಿ(Love) ಪೋಷಕರ ವಿರೋಧದ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟಿರುವ ಜೋಡಿಗೆ ಹುಡುಗಿಯ ಪೋಷಕರಿಂದ ಜೀವ ಬೆದರಿಕೆಯಿದ್ದು(Life Threatening), ರಕ್ಷಣೆ ಕೋರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ನಡೆದಿದೆ.
ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಇಬ್ಬರಲ್ಲೂ ಪ್ರೇಮಾಂಕುರ
ಚಿಕ್ಕಮಗಳೂರು ಜಿಲ್ಲೆ ಕಡೂರು(Kadur) ತಾಲೂಕಿನ ಕಬ್ಳಿ ಗ್ರಾಮದ ಯುವಕ ಯೋಗನಾಂದ್, ಕಬ್ಳಿ ಪಕ್ಕದ ಜಿ ಕೊಪ್ಪಲು ಗ್ರಾಮದ ಯುವತಿ ರೇವತಿ(ಹೆಸರು ಬದಲಾಯಿಸಲಾಗಿದೆ). ಇಬ್ಬರು ಕಡೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ಈ ಸಂದರ್ಭದಲ್ಲಿ ಯೋಗಾನಂದ್, ಯುವತಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
Indigo Website Hack: ಬ್ಯಾಗ್ ಬದಲಾಗಿದ್ದಕ್ಕೆ ಇಂಡಿಗೋ ಏರ್‌ವೇಸ್‌ನ ವೆಬ್‌ಸೈಟ್ ಹ್ಯಾಕ್?
ಕಳೆದ ಎರಡು ವರ್ಷದ ಹಿಂದೆ ಯುವಕ ಯೋಗನಾಂದ್ ಪದವಿ ಮುಗಿಸಿಕೊಂಡು ಪ್ರಸ್ತುತ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು. ಅದೇ ಕಾಲೇಜಿನಲ್ಲಿ(College) ಫೈನಲ್ ಇಯರ್ ಬಿಕಾಂನಲ್ಲಿ ರೇವತಿ ಓದುತ್ತಿದ್ದಳು. ಆದ್ರೂ ಇಬ್ಬರ ನಡುವಿನ ಪ್ರೀತಿ ಮಾಸಿರಲಿಲ್ಲ, ಆ ಪ್ರೇಮ ಮತ್ತಷ್ಟು ಗಟ್ಟಿಯಾಗಿದೆ. ಹೇಗೋ ಈ ವಿಚಾರ ಹುಡುಗಿಯ ಮನೆಯವರಿಗೆ ತಿಳಿದಿದೆ. ಅಷ್ಟರಾಗಲೇ ಬೇರೊಬ್ಬ ಹುಡುಗನ ಜೊತೆ ಮದುವೆ(Marriage) ಮಾಡಲು ಸಿದ್ದತೆ ನಡೆಸಿದ್ದರು.
ಒತ್ತಾಯ ಪೂರ್ವಕವಾಗಿ ಮದುವೆ ಮಾಡಲು ರೇವತಿಳನ್ನು ನಿಗೂಢವಾದ ಸ್ಥಳದಲ್ಲಿ ಇಟ್ಟಿದ್ದ ವಿಚಾರವನ್ನು ಹೇಗೂ ಅರಿತ ಯುವ ಯೋಗಾನಂದ ಆ ಸ್ಥಳಕ್ಕೆ ಹೋಗಿ ಯುವತಿಯನ್ನು ಮನವೊಲಿಸಿ ಕರೆತಂದಿದ್ದರು.
ಅಂತರ್ ಜಾತಿ ವಿವಾಹಕ್ಕೆ ಮನೆಯವರ ವಿರೋಧ
ಇಬ್ಬರೂ ಕಡೂರು ತಾಲೂಕಿನ ಅಕ್ಕಪಕ್ಕದ ನಿವಾಸಿಗಳು ಇಬ್ಬರಲ್ಲೂ ಗಾಢವಾದ ಪ್ರೀತಿ ಇತ್ತು. ಈ ಪ್ರೀತಿಗೆ ಮನೆಯವರ ವಿರೋಧವಿತ್ತು, ಇಬ್ಬರೂ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದು ಹುಡುಗಿಯ ಮನೆಯವರಿಂದ ತೀವ್ರ ವಿರೋಧವಿತ್ತು.ವಿರೋಧ ನಡುವೆಯೂ ಯೋಗನಾಂದ್ ದೇವಸ್ಥಾನದಲ್ಲಿ ರೇವತಿಯನ್ನ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದನು.
ಇವರಿಬ್ಬರು ಮದುವೆಯ ವಿಚಾರ ಕೇಳಿ ಸಹಜವಾಗಿಯೇ ಹುಡುಗಿ ಮನೆಯವರು ಜೋಡಿಯ ಹುಡುಕಾಟ ನಡೆಸಿದ್ದಾರೆ. ಜೊತೆಗೆ ವಧು-ವರರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಹೊಸದಾಗಿ ದಾಂಪತ್ಯಕ್ಕೆ ಕಾಲಿಟ್ಟಿರೋ ಜೋಡಿ ಆರೋಪಿಸಿದ್ದಾರೆ. ಹೀಗಾಗಿ ನಮಗೆ ಜೀವ ರಕ್ಷಣೆ ಬೇಕು ಅಂತಾ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರಲ್ಲಿ ಮನವಿ ಮಾಡಿದ್ದಾರೆ. ಸಖರಾಯಪಟ್ಟಣ ಪೊಲೀಸ್(Police) ಠಾಣೆಯಲ್ಲಿ ದೂರು ದಾಖಲಿಸಿರೋ ಜೋಡಿ, ಸೂಕ್ತ ರಕ್ಷಣೆ ನೀಡುವಂತೆ ಕೋರಿಕೊಂಡಿದೆ.
ಓರ್ವನ ಹತ್ಯೆ, 6 ಜನರಿಗೆ ಗಾಯ: ಬೆಳಗಾವಿಯ ಗ್ಯಾಂಗ್‌ವಾರ್ ಭೀಕರತೆ ಬಿಚ್ಚಿಟ್ಟ ಬೊಲೆರೋ ವಾಹನ
ನಾವಿಬ್ಬರು ಪರಸ್ಪರ ಪ್ರೀತಿಸಿ, ಯಾವುದೇ ಒತ್ತಡವಿಲ್ಲದೇ ಇಷ್ಟಪಟ್ಟು ಮದ್ವೆಯಾಗಿದ್ದೇವೆ ನಮಗೇನಾದ್ರೂ ಹೆಚ್ಚು ಕಡಿಮೆ ಆದ್ರೆ ನಮ್ಮ ಮಾವಂದಿರೇ ಕಾರಣ ಅಂತಾ ರೇವತಿ ಆರೋಪಿಸಿದ್ದಾರೆ.ಹೀಗಾಗಿ ನಮಗೆ ಜೀವ ರಕ್ಷಣೆ ಬೇಕು ಅಂತಾ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರಲ್ಲಿ ಮನವಿ ಮಾಡಿದ್ದಾರೆ. ನಾವಿಬ್ಬರು ಪರಸ್ಪರ ಪ್ರೀತಿಸಿ, ಯಾವುದೇ ಒತ್ತಡವಿಲ್ಲದೇ ಇಷ್ಟಪಟ್ಟು ಮದ್ವೆಯಾಗಿದ್ದೇವೆ ನಮಗೇನಾದ್ರೂ ಹೆಚ್ಚು ಕಡಿಮೆ ಆದ್ರೆ ನಮ್ಮ ಮಾವಂದಿರೇ ಕಾರಣ ಅಂತ ದೂರಿದ್ದಾರೆ.
ಪ್ರಾಣ ಭಯದಿಂದ ಕಂಗಾಲಾದ ಜೋಡಿ ಹಕ್ಕಿ: ಪೊಲೀಸರಿಗೆ ಮೊರೆ ಇಟ್ಟ ನವದಂಪತಿ
ಚಾಮರಾಜನಗರ: ಪ್ರೀತಿಸಿ ಓಡಿ ಹೋಗಿ ಮನೆಯವರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು. ಆದರೀಗ ಹುಡುಗಿಯ ಪೋಷಕರಿಂದ ಈಗ ಈ ವಿವಾಹಿತ ಪ್ರೇಮಿಗಳಿಗೆ ಜೀವ ಬೆದರಿಕೆ(Life Threatening) ಇದೆ. ಸ್ವಚ್ಚಂದವಾಗಿ ಓಡಾಡಿಕೊಂಡಿರಬೇಕಾದ ಈ ಜೋಡಿ ಹಕ್ಕಿ ಸದಾ ಭಯದಲ್ಲೇ ಅಡ್ಡಾಡುತ್ತಾ ಕಂಗಾಲಾಗಿದೆ.ವ ಈ ರಕ್ಷಣೆಗಾಗಿ ಅಲೆದಾಡುತ್ತಿರುವ ಈ ವಿವಾಹಿತ ಪ್ರೇಮಿಗಳು ಇದೀಗ ಪೊಲೀಸರ(Police) ಮೊರೆ ಹೋಗಿದ್ದ ಘಟನೆ ಮಾ.25 ರಂದು ನಡೆದಿತ್ತು.