Woman Murder: ವರಾತ ತೆಗೆದ ಅತ್ತೆಯನ್ನು ಸ್ಕ್ರೂಡ್ರೈವರ್‌ನಿಂದ ಇರಿದು ಕೊಲೆಗೈದ ಸೊಸೆ!

By Suvarna News  |  First Published Jan 3, 2022, 12:14 AM IST

* ಕೊಲೆಯಲ್ಲಿ ಅಂತ್ಯವಾದ ಅತ್ತೆ-ಸೊಸೆ ಜಗಳ
* ಮಾತಿಗೆ ಮಾತು ಬೆಳೆದು ಅತ್ತೆ ಮೇಲೆ ದಾಳಿ
* ಸ್ಕ್ರೂಡ್ರೈವರ್‌ನಿಂದ ಇರಿದು ಕೊಲೆ ಮಾಡಿದ ಸೊಸೆ
* ಅಗ್ನಿ ಅವಘಡ  ಎಂದು ನಂಬಿಸುವ ಯತ್ನ


ಚೆನ್ನೈ(ಜ. 02) ಅತ್ತೆ-ಸೊಸೆ ಜಗಳ ಎಲ್ಲಿಯವರೆಗೆ ಎಂದರೆ ಕೊಲೆಯಾಗುವವರೆಗೆ (Murder) ಎನ್ನುವಂತೆ ಆಗಿದೆ ಈ ಸ್ಟೋರಿ. 27 ವರ್ಷದ ಮಹಿಳೆಯೊಬ್ಬರು (Woman) ತಮ್ಮ 46 ವರ್ಷದ ಅತ್ತೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಕೊಂದ ನಂತರ ಅತ್ತೆಯ ದೇಹವನ್ನು ಸುಟ್ಟು (Fire)ಹಾಕಿದ್ದಾರೆ.

ತಿರುಚ್ಚಿ ವಿಶ್ವಾಸ್ ನಗರದ ನಿವಾಸವೊಂದರಲ್ಲಿ  ಬೆಂಕಿ ಅವಘಡದಿಂದಾಗಿ  ಮಹಿಳೆ ಸಾವನ್ನಪ್ಪಿದಳು ಎಂದು ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ವೇಳೆ ಒಂದೊಂದೇ ವಿಚಾರಗಳು ಬಹಿರಂಗವಾದವು. 

Tap to resize

Latest Videos

undefined

ಡಿಸೆಂಬರ್ 30 ರಂದು, ಎಸ್ ಶಕಿಂಶಾ (74) ಎಂಬುವರು ಪೊಲೀಸ್   ತಮ್ಮ ಮಗಳು ನವೀನಾ ಮೇಲೆ ದಾಳಿ ಮಾಡಲಾಗಿದೆ ಎಂದು ದೂರು ನೀಡುತ್ತಾರೆ. ಆಕೆ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದು ತನಿಖೆ ಆಗಬೇಕು ಎಂದು ಆಗ್ರಹಿಸುತ್ತಾರೆ. . ಮೃತ ಮಗಳ ತಲೆಯ ಮೇಲೆ ಗಾಯಗಳಾಗಿವೆ ಎಂದು ಶಕಿಂಶಾ ಆರೋಪಿಸುತ್ತಾರೆ.

Delhi Crime: ತಡ ರಾತ್ರಿ ಬಂದು ಊಟ ಕೇಳಿದವರು ಮಾಡಿದ ದಾರುಣ ಕೆಲಸ!

ಬೆಂಕಿ ಅವಘಡದ ಎಂದು ಹೇಳುತ್ತಿರುವ ಸಮಯದಲ್ಲಿ ನವೀನಾ ಸೊಸೆ ರೇಷ್ಮಾ ಮತ್ತು ಆಕೆಯ ಎರಡು ವರ್ಷದ ಪುತ್ರ ಮನೆಯಲ್ಲೇ ಇದ್ದರು. ಅವರು ಹೇಗೆ ಬಚಾವಾದರು ಎಂದು ಪ್ರಶ್ನೆ ಮಾಡುತ್ತಾರೆ. 

ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಏತನ್ಮಧ್ಯೆ, ಸಂತ್ರಸ್ತೆಯ ತಲೆಯ ಮೇಲಿನ ಗಾಯದ ಬಗ್ಗೆ ಪೊಲೀಸರು ರೇಷ್ಮಾಳನ್ನು ವಿಚಾರಣೆ ನಡೆಸಿದ್ದಾರೆ. ನಂತರ ಸೊಸೆ ರೇಷ್ಮಾ ನವೀನ್‌ನನ್ನು ಸ್ಕ್ರೂಡ್ರೈವರ್‌ನಿಂದ ಇರಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ, ಅವಳು ಬಲಿಪಶುವಿನ ದೇಹವನ್ನು ಸೀಮೆಎಣ್ಣೆಯಿಂದ ಸುಟ್ಟಿದ್ದು ಅಗ್ನಿ ಅನಾಹುತದ ನಾಟಕ ಮಾಡಿದ್ದಾರೆ.

ಅತ್ತೆ ಸೊಸೆ ಜಗಳ: ಕೆಲಸ ಮಾಡುತ್ತಿದ್ಗದ ಅತ್ತೆ ಅಡುಗೆ ಮನೆಯ ನೆಲದ ಮೇಲೆ ಜಾರಿ ಬಿದ್ದಿದ್ದಾರೆ. ಈ ವೇಳೆ ಸಹಾಯಕ್ಕೆಂದು ಸೊಸೆಯನ್ನು ಕರೆದಿದ್ದಾರೆ. ಸೊಸೆ ಬರುವುದು ತಡವಾಗಿದೆ ಎಂದು ಅತ್ತೆ ದೂರಿದ್ದಾರೆ.  ಈ ವೇಳೆ ಕೋಪಗೊಂಡ ಸೊಸೆ ರೇಷ್ಮಾ ಸ್ಕ್ರೂಡ್ರೈವರ್ ಬಳಸಿ ಅತ್ತೆಗೆ ಅನೇಕ ಬಾರಿ ಇರಿದಿದ್ದಾಳ. ಅತ್ತೆ ಸ್ಥಳದಲ್ಲೇ ಸಾವು ಕಂಡಿದ್ದಾರೆ.  ರೇಷ್ಮಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಊಟ ಕೊಡದವನ ಕೊಲೆ:    ಆನ್ ಲೈನ್ (Online) ಆಧಾರದಲ್ಲಿ  ಆಹಾರ (Food) ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಕ್ಷುಲ್ಲಕ ಕಾರಣಕ್ಕೆ ಗುಂಡಿಟ್ಟು ಹತ್ಯೆ Murder)ಮಾಡಲಾಗಿತ್ತು. ಆಹಾರ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಆಗಂತುಕರು ಶೂಟ್ ಮಾಡಿದ್ದಾರೆ.  ಆದರೆ ಆರೋಪಿಗಳನ್ನು ಘಟನೆ ನಡೆದು ಎರಡು ಗಂಟೆ ಅವಧಿಯಲ್ಲಿ ಬಂಧಿಸಲಾಗಿತ್ತು.

27 ವರ್ಷದ ಕಪಿಲ್ ಹಾಪುರ್ ನಿವಾಸಿಯಾಗಿದ್ದರು. ಕಪಿಲ್ ಎಸ್‌ಆರ್ ಫುಡ್ಸ್ ಎಂಬ ಆನ್‌ಲೈನ್ ಉಪಾಹಾರ ಗೃಹವನ್ನು ನಡೆಸುತ್ತಿದ್ದರು. ರೆಸ್ಟೋರೆಂಟ್ ಮುಚ್ಚಿದ ನಂತರ  ಬಂದ ಇಬ್ಬರು ಆಹಾರ ಕೊಡುವಂತೆ ಕೇಳಿದ್ದಾರೆ. ಸಾಧ್ಯುವಿಲ್ಲ ಎಂದು ಹೇಳಿದ್ದಕ್ಕೆ ಗುಂಡಿನ ದಾಳಿ ಮಾಡಿದ್ದಾರೆ.

ಗ್ರೆಟರ್ ನೋಯ್ಡಾ ಡಿಸಿಪಿ  ಅಮಿತ್ ಕುಮಾರ್  ಹೇಳುವಂತೆ, ಪ್ಯಾರಿ ಚೌಕ್ ಬಳಿಯ ಓಮ್ಯಾಕ್ಸ್ ಆರ್ಕೇಡ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಲಾಗಿದೆ ಎಂದು ನಮಗೆ ಮಾಹಿತಿ ಬಂತು. ಸಾವಿಗೆ ಗುರಿಯಾದ ವ್ಯಕ್ತಿ ಫುಡ್ ಜಾಯಿಂಟ್ ನಡೆಸುತ್ತಿದ್ದು, ಬೆಳಗಿನ ಜಾವ 1 ಗಂಟೆಯ ನಂತರ  ಆಗಮಿಸಿದ ಆಗಂತುಕರು ಆಹಾರ ಸರಬರಾಜು ಮಾಡಲು  ಕೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 ಎಣ್ಣೆ ಹಾಕಲು 100 ಕೇಳಿದವನ ಕೊಲೆ:    ಮದ್ಯಪಾನ (Liquor)ಮಾಡಲು 100 ಕೇಳಿದವನಿಗೆ ತೂಕ ಮಾಡುವ ಬಟ್‌ನಿಂದ ತಲೆಗೆ ಹೊಡೆದು ಕೊಂದ ಪ್ರಕರಣ ಬೆಂಗಳೂರಿನಿಂದ ವರದಿಯಾಗಿತ್ತು. ಅಪಘಾತವಾಗಿದೆ ಎಂದು ಸುಳ್ಳಿನ ಕತೆ ಹೇಳಿ ತಪ್ಪಿಸಿಕೊಂಡಿದ್ದ ಮಾಂಸದಂಗಡಿ ಕೆಲಸಗಾರನೊಬ್ಬ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ(Bengaluru Police) ಸಿಕ್ಕಿಬಿದ್ದಿದ್ದ.

 

 

click me!