Sexual Harassment : ಪ್ರವಾಸಕ್ಕೆ ಬಂದವರ ಬೆದರಿಸಿ ರೇಪ್ ಎಸಗಿದ ನಕಲಿ ಪೊಲೀಸ್

Published : Jan 02, 2022, 10:59 PM ISTUpdated : Jan 02, 2022, 11:08 PM IST
Sexual Harassment : ಪ್ರವಾಸಕ್ಕೆ ಬಂದವರ ಬೆದರಿಸಿ ರೇಪ್ ಎಸಗಿದ ನಕಲಿ ಪೊಲೀಸ್

ಸಾರಾಂಶ

* ನಕಲಿ ಪೊಲೀಸ್ ಅಧಿಕಾರಿಯ ಹೀನ ಕೆಲಸ * ಪ್ರವಾಸಕ್ಕೆಂದು ಬಂದ ಬಾಲಕಿಯರ ಮೇಲೆ ಎರಗಿದ * ಸ್ನೇಹಿತರ ಜತೆ ಹಳ್ಳಿಗೆ ಬಂದಿದ್ದ ಬಾಲಕಿಯರು * ಇಬ್ಬರು  ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಕಾಮುಕ

ವಿಶಾಖಪಟ್ಟಣ(ಜ. 02) ಪೊಲೀಸ್ (Police Officer) ಅಧಿಕಾರಿಯಂತೆ ನಟಿಸಿದ ವ್ಯಕ್ತಿಯೊಬ್ಬ  ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ (Rape)ಎಸಗಿದ್ದಾನೆ.. ಈ ಕುರಿತು ಕುರುಪಾಂ ಪೊಲೀಸ್ ಠಾಣೆಯಲ್ಲಿ ರಾತ್ರಿ ದೂರು ದಾಖಲಾಗಿದ್ದು ಆರೋಪಿಯನ್ನು ವಿ ರಾಮಬಾಬು (35) ಎಂದು ಗುರುತಿಸಲಾಗಿದೆ.

ರಾಂಬಾಬು ಮತ್ತೆ ಮತ್ತೆ ಇಂಥದ್ದೇ ಪ್ರಕರಣದಲ್ಲಿ  ಭಾಗಿಯಾಗುತ್ತಿದ್ದ.  ಈತನ ವಿರುದ್ಧ ಈಗಾಗಲೇ  14 ಪ್ರಕರಣಗಳಿವೆ.  ಸರ್ಕಾರಿ ವಸತಿ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಕ್ರೌರ್ಯ ಮೆರೆದಿದ್ದಾನೆ. ತಾನು ಪೊಲೀಸ್ ಅಧಿಕಾರಿ ಎಂದು ಬೆದರಿಸಿ ಕೃತ್ಯ ಎಸಗಿದ್ದಾನೆ. 

ಪೊಲೀಸರು ಹೇಳುವಂತೆ ಇಬ್ಬರು ಬಾಲಕಿಯರು ತಮ್ಮ ಗೆಳೆಯರೊಂದಿಗೆ ಸಮಯ ಕಳೆಯಲು ಹತ್ತಿರದ ಹಳ್ಳಿಗೆ ಹೋಗಿದ್ದರು. ರವಡಾ ಗ್ರಾಮದ ನದಿ ಪ್ರದೇಶಕ್ಕೆ ತೆರಳಿದ್ದರು. ಇದನ್ನು ಆರೋಪಿ ರಾಂಬಾಬು ಗಮನಿಸಿದ್ದಾನೆ.   ಅಲ್ಲಿಗೆ ತೆರಳಿ ಹುಡುಗ ಮತ್ತು ಹುಡುಗಿಯರ ಪೋಟೋ ತೆಗೆದುಕೊಂಡಿದ್ದು ಅವರನ್ನು ಬೆದರಿಸಲು ಆರಂಭಿಸಿದ್ದಾನೆ. ಈ ಪೋಟೋಗಳನ್ನು ನಿಮ್ಮ ಶಿಕ್ಷಕರು ಮತ್ತು ಪಾಲಕರಿಗೆ ತೋರಿಸುತ್ತೇನೆ ಎಂದು ಬೆದರಿಸಿದ್ದಾನೆ.

ಬಾಲಕರನ್ನು ಬೆದರಿಸಿ ಅಲ್ಲಿಂದ ಕಳಿಸಿ. ಹುಡುಗಿಯರನ್ನು ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ   ಲೈಂಗಿಕ ದೌರ್ಜನ್ಯ ಎಸಗಿದ್ದು ಯಾರಿಗಾದರೂ ಬಹಿರಂಗಪಡಿಸಿದರೆ ಫೋಟೋಗಳನ್ನು ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. 

ಆದರೆ ಅಲ್ಲಿಂದ ಹಾಸ್ಟೇಲ್ ಗೆ ಬಂದ  ಬಾಲಕಿಯರು ಘೋರ ಪ್ರಕರಣವನ್ನು ವಿವರಿಸಿದ್ದಾರೆ.  ಇದನ್ನು ಪೊಲೀಸರಿಗೆ ತಿಳಿಸಲಾಗಿದ್ದು ಆರೋಪಿಯನ್ನು ಕೂಡಲೇ  ಬಂಧಿಸಲಾಗಿದೆ.

ಬಾಲಕಿಯರನ್ನು ಮೆಡಿಕಲ್ ಚೆಕ್ ಅಪ್ ಗೆ ಕಳುಹಿಸಲಾಗಿದೆ.  ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಿಜಯನಗರ ಪೊಲೀಸ್ ಮುಖ್ಯಸ್ಥೆ ದೀಪಿಕಾ ಎಂ ಪಾಟೀಲ್ ತಿಳಿಸಿದ್ದಾರೆ. 

ಕಳೆದ ವರ್ಷ ಕಾಡಿದ ಅಪರಾಧ ಪ್ರಕರಣಗಳು

ಉತ್ತರ ಪ್ರದೇಶದ ಘೋರ ಪ್ರಕರಣ: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ 26 ವರ್ಷದ ಯುವಕ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿತ್ತು.  ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆರೋಪಿ ಶಹಬಾಜ್ ಎಂಬಾತ ಈ ಕೃತ್ಯ ಎಸಗಿದ್ದ. ಆಕೆಯನ್ನು ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ

ಗಂಡನ ಅತ್ಯಾಚಾರಕ್ಕೆ ಪತ್ನಿಯದ್ದೇ ನೆರವು:   ಅತ್ಯಾಚಾರದ ಅಸಹ್ಯಕರ ಘಟನೆಯೊಂದು ಗುಜರಾತ್‌ನ ತಾಪಿ ಜಿಲ್ಲೆಯಿಂದ ಬೆಳಕಿಗೆ ಬಂದಿತ್ತು., ಚರ್ಚ್‌ನ ಪಾದ್ರಿಯೊಬ್ಬ ಅಪ್ರಾಪ್ತ ಬಾಲಕಿಯನ್ನು ತನ್ನ ಕಾಮತೃಷೆಗೆ ಬಲಿಪಶು ಮಾಡಿದ್ದು ಮಾತ್ರವಲ್ಲದೆ ಆತನ ಪತ್ನಿಯೂ ಮೊಬೈಲ್‌ನಲ್ಲಿ ಈ ಹೇಯ ಕೃತ್ಯವನ್ನು ದಾಖಲಿಸಿದ್ದಾಳೆ. ಈ ಮೂಲಕ ಅಪ್ರಾಪ್ತೆಯ ಅತ್ಯಾಚಾರಗೈಯ್ಯಲು ಹೆಂಡತಿಯೇ ಸಹಾಯ ಮಾಡಿದ್ದಾಳೆ.. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಅರ್ಚಕ ಮತ್ತು ಆತನ ಪತ್ನಿಯನ್ನು ಬಂಧಿಸಿದ್ದಾರೆ.

ದಕ್ಷಿಣ ಗುಜರಾತ್‌ನಲ್ಲಿ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ತಾಪಿ ಜಿಲ್ಲೆಯ ಸೋಂಗಧ್ ಪೊಲೀಸರು ಬಂಧಿಸಿರುವ ವ್ಯಕ್ತಿ ಬಲಿರಾಮ್ ಕೊಕ್ನಿ ಮತ್ತು ಅನಿತಾ ಕೊಕ್ನಿ. ಇವರಿಬ್ಬರೂ ಗಂಡ ಹೆಂಡತಿ. ಬಲಿರಾಮ್ ಕೊಕ್ನಿ, ಸೊಂಗಧ್ ಪ್ರದೇಶದ ಚರ್ಚ್‌ನ ಪಾದ್ರಿ. 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಪಾಸ್ಟರ್ ಬಲಿರಾಮ್ ಕೊಕ್ನಿಯನ್ನು ಸೋಂಗಾಧ್ ಪೊಲೀಸರು ಬಂಧಿಸಿದ್ದರೆ, ಈ ಕೆಲಸದಲ್ಲಿ ಆಕೆಗೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಸಂತ್ರಸ್ತೆಯ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಕ್ಕಾಗಿ ಆತನ ಪತ್ನಿ ಅನಿತಾಳನ್ನು ಬಂಧಿಸಲಾಗಿದೆ.

ಸಂತ್ರಸ್ತೆ ತನ್ನ ಅಜ್ಜಿಯೊಂದಿಗೆ ಆರೋಪಿ ಪಾದ್ರಿ ಬಲಿರಾಮ್ ಅವರ ಜಮೀನಿಗೆ ಕೂಲಿಗಾಗಿ ಹೋಗುತ್ತಿದ್ದರು ಎಂದು ಹೇಳಲಾಗಿದೆ. ಸಂತ್ರಸ್ತೆ ತನ್ನ ಹೆತ್ತವರೊಂದಿಗೆ ಚರ್ಚ್‌ಗೆ ಹೋಗಿದ್ದಳು, ಆದ್ದರಿಂದ ಅವಳು ಪಾದ್ರಿಯನ್ನು ಗುರುತಿಸಿದಳು. ಇದರ ದುರ್ಲಾಭ ಪಡೆದ ಆರೋಪಿಗಳು ಸಂತ್ರಸ್ತೆ ತೋಟದ ಕೆಲಸಕ್ಕೆ ಹೋದಾಗ ಅತ್ಯಾಚಾರ ಎಸಗಿದ್ದಾರೆ. ಆರೋಪಿ ಸಂತ್ರಸ್ತೆಯನ್ನು ಹೊಲದಲ್ಲಿ ನಿರ್ಮಿಸಿದ್ದ ಗುಡಿಸಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಅರ್ಚಕರ ಪತ್ನಿ ಅನಿತಾ ಕೂಡ ಅಲ್ಲಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ