Delhi Crime: ತಡ ರಾತ್ರಿ ಬಂದು ಊಟ ಕೇಳಿದವರು ಮಾಡಿದ ದಾರುಣ ಕೆಲಸ!

By Suvarna NewsFirst Published Jan 2, 2022, 5:35 PM IST
Highlights

* ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ಮಾಲೀಕನ ಹತ್ಯೆ
* ತಡರಾತ್ರಿ ಬಂದು ಆಹಾರ ಕೇಳಿದರು
* ಆಗಾಗ ಹೊಟೆಲ್ ಗೆ ಬರುತ್ತಿದ್ದ ಆಗಂತುಕರು
* ಗುಂಡಿನ ದಾಳಿ ಮಾಡಿ ಪರರಿಯಾದವರ ಎರಡು ಗಂಟೆಯಲ್ಲಿ ಬಂಧನ

ನವದೆಹಲಿ(ಜ. 02) ಆನ್ ಲೈನ್ (Online) ಆಧಾರದಲ್ಲಿ  ಆಹಾರ (Food) ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಕ್ಷುಲ್ಲಕ ಕಾರಣಕ್ಕೆ ಗುಂಡಿಟ್ಟು ಹತ್ಯೆ Murder)ಮಾಡಲಾಗಿದೆ.  ಆಹಾರ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಆಗಂತುಕರು ಶೂಟ್ ಮಾಡಿದ್ದಾರೆ.  ಆದರೆ ಆರೋಪಿಗಳನ್ನು ಘಟನೆ ನಡೆದು ಎರಡು ಗಂಟೆ ಅವಧಿಯಲ್ಲಿ ಬಂಧಿಸಲಾಗಿದೆ.

27 ವರ್ಷದ ಕಪಿಲ್ ಹಾಪುರ್ ನಿವಾಸಿಯಾಗಿದ್ದರು. ಕಪಿಲ್ ಎಸ್‌ಆರ್ ಫುಡ್ಸ್ ಎಂಬ ಆನ್‌ಲೈನ್ ಉಪಾಹಾರ ಗೃಹವನ್ನು ನಡೆಸುತ್ತಿದ್ದರು. ರೆಸ್ಟೋರೆಂಟ್ ಮುಚ್ಚಿದ ನಂತರ  ಬಂದ ಇಬ್ಬರು ಆಹಾರ ಕೊಡುವಂತೆ ಕೇಳಿದ್ದಾರೆ. ಸಾಧ್ಯುವಿಲ್ಲ ಎಂದು ಹೇಳಿದ್ದಕ್ಕೆ ಗುಂಡಿನ ದಾಳಿ ಮಾಡಿದ್ದಾರೆ.

ಗ್ರೆಟರ್ ನೋಯ್ಡಾ ಡಿಸಿಪಿ  ಅಮಿತ್ ಕುಮಾರ್  ಹೇಳುವಂತೆ, ಪ್ಯಾರಿ ಚೌಕ್ ಬಳಿಯ ಓಮ್ಯಾಕ್ಸ್ ಆರ್ಕೇಡ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಲಾಗಿದೆ ಎಂದು ನಮಗೆ ಮಾಹಿತಿ ಬಂತು. ಸಾವಿಗೆ ಗುರಿಯಾದ ವ್ಯಕ್ತಿ ಫುಡ್ ಜಾಯಿಂಟ್ ನಡೆಸುತ್ತಿದ್ದು, ಬೆಳಗಿನ ಜಾವ 1 ಗಂಟೆಯ ನಂತರ  ಆಗಮಿಸಿದ ಆಗಂತುಕರು ಆಹಾರ ಸರಬರಾಜು ಮಾಡಲು  ಕೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 ಆರೋಪಿಗಳನ್ನು ಆಕಾಶ್ ಮತ್ತು ಯೋಗೇಂದ್ರ ಎಂದು  ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಇಬ್ಬರೂ ಇದೇ ರೆಸ್ಟೋರೆಂಟ್‌ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.   ಆಹಾರ  ಕೇಳಿದ ಸಂದರ್ಭ ತುಂಬಾ ತಡವಾಗಿದ್ದರಿಂದ ಕಪಿಲ್ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಏಕಾಏಕಿ ಕೋಪಗೊಂಡು ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದರು.

ಕೂಡಲೇ ಕಪಿಲ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೀಟಾ 2 ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 

Suvarna FIR : ಕದ್ದ ಮಾಲಿನಲ್ಲಿ ಪಾಲು ಕೊಡದವನ ಕೊಂದು ಕೊಟ್ಟಿಗೆಯಲ್ಲಿ ಮಲಗಿದ!

ಎಣ್ಣೆ ಹಾಕಲು 100 ಕೇಳಿದವನ ಕೊಲೆ:    ಮದ್ಯಪಾನ (Liquor)ಮಾಡಲು 100 ಕೇಳಿದವನಿಗೆ ತೂಕ ಮಾಡುವ ಬಟ್‌ನಿಂದ ತಲೆಗೆ ಹೊಡೆದು ಕೊಂದ ಪ್ರಕರಣ ಬೆಂಗಳೂರಿನಿಂದ ವರದಿಯಾಗಿತ್ತು. ಅಪಘಾತವಾಗಿದೆ ಎಂದು ಸುಳ್ಳಿನ ಕತೆ ಹೇಳಿ ತಪ್ಪಿಸಿಕೊಂಡಿದ್ದ ಮಾಂಸದಂಗಡಿ ಕೆಲಸಗಾರನೊಬ್ಬ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ(Bengaluru Police) ಸಿಕ್ಕಿಬಿದ್ದಿದ್ದ.

ಚಪಾತಿ ಸೀದು ಹೋಗಿದ್ದಕ್ಕೆ ಕೊಲೆ: ಚಪಾತಿ ಸೀದು ಹೋಗಿದೆ ಎಂದು ಹೋಟೆಲ್ ಅಡುಗೆವನ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ್ದ ಪ್ರಕರಣ ಲಕ್ನೋ ದಿಂದ ವರದಿಯಾಗಿತ್ತು. ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಘಟನೆ  ನಡೆದಿದ್ದು ಕೆಂಪಾಲ್ ಎಂಬಾತನ ಕೊಲೆಯಾಗಿತ್ತು.

ಹೆಂಡತಿ ಹತ್ಯೆ ಮಾಡಿದ್ದ:  ಬೆಂಗಳೂರಿನಲ್ಲಿ ಗೃಹಿಣಿ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಹೆಂಡತಿಯನ್ನೆ ಕೊಲೆ ಮಾಡಿ ಪತಿಯೇ ಕೆರೆಗೆ ಎಸೆದಿದ್ದು ಕಳೆದ ಆಗಸ್ಟ್ ನಲ್ಲಿ ಬಹಿರಂಗವಾಗಿತ್ತು.   ಶಿರಿನ್ (28) ಗಂಡನಿಂದ ಕೊಲೆ ಯಾದ ಗೃಹಿಣಿ ಹೆಂಡತಿಯನ್ನೆ ಕೊಲೆ ಮಾಡಿ ಚಿಕ್ಕಬಾಣಾವಾರ ಕೆರೆಗೆ ಪತಿ ಮುಬಾರಕ್ ಎಸೆದಿದ್ದ.

ಸೋಲದೇವನಹಳ್ಳಿ‌ ಠಾಣಾ ವ್ಯಾಪ್ತಿ ತರಬನಹಳ್ಳಿಯಲ್ಲಿ ಕುಟುಂಬ ವಾಸವಾಗಿತ್ತು. 7 ವರ್ಷದ ಹಿಂದೆ ಮದುವೆಯಾಗಿದ್ದವರಿಗೆ ಇಬ್ಬರು ಮಕ್ಕಳು. ಪ್ರತಿನಿತ್ಯ ಸಣ್ಣ ಪುಟ್ಟ ವಿಚಾರಕ್ಕೆ ದಂಪತಿ ನಡುವೆ ಜಗಳ ಆಗುತ್ತಿತ್ತು. ಮೂಲತಃ ದಾವಣಗೆರೆಯವರಾಗಿದ್ದ ದಂಪತಿ ಬೆಂಗಳೂರಿನಲಲ್ಲಿ ವಾಸವಿದ್ದರು. ಜಗಳ ವಿಕೋಪಕ್ಕೆ ಹೋಗಿದ್ದು ಗಂಡನೇ ಪತ್ನಿ ಹತ್ಯೆ ಮಾಡಿ ಕರೆಗೆ ಹಾಕಿದ್ದಾನೆ. ಮೃತ ದೇಹ ಚಿಕ್ಕಬಾಣಾವರ ಕೆರೆಯಲ್ಲಿ ಪತ್ತೆಯಾಗಿತ್ತು. ಅಡುಗೆ ಸರಿಯಾಗಿಲ್ಲ, ರೊಟ್ಟಿ ಬೆಂದಿಲ್ಲ ಎಂಬ ಕಾರಣಕ್ಕೂ ಕೊಲೆ ನಡೆದುಹೋದ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿತ್ತು. 

ಪಬ್ ಜಿ ಹುಚ್ಚಾಟ: ಆನ್‌ಲೈನ್‌ ಗೇಮ್‌ ಪಬ್‌ಜೀ ಆಟದ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕರೊಳಗೆ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾದ ಪ್ರಕರಣ ಮಂಗಳೂರಿನಿಂದ ವರದಿಯಾಗಿತ್ತು. 
 

click me!