ಸ್ವಚ್ಛತಾ ಸಿಬ್ಬಂದಿಗೆ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ; ಕಾಮುಕ ವಾರ್ಡನ್ ವಿರುದ್ಧ ಸಂತ್ರಸ್ತೆ ದೂರು

By Ravi Janekal  |  First Published Sep 19, 2024, 4:14 PM IST

ವಸತಿ ನಿಲಯದಲ್ಲಿ ಸ್ವಚ್ಛತೆ ಸಿಬ್ಬಂದಿಗೆ ವಾರ್ಡನ್‌ನಿಂದ ನಿರಂತರ ಲೈಂಗಿಕ ಕಿರುಕುಳ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ.


ಕಾರವಾರ, ಉತ್ತರಕನ್ನಡ (ಸೆ.19): ವಸತಿ ನಿಲಯದಲ್ಲಿ ಸ್ವಚ್ಛತೆ ಸಿಬ್ಬಂದಿಗೆ ವಾರ್ಡನ್‌ನಿಂದ ನಿರಂತರ ಲೈಂಗಿಕ ಕಿರುಕುಳ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ.

ವಾರ್ಡನ್ ಶಂಕರ ಎಸ್. ಪೋಳ್ (30) ಲೈಂಗಿಕ ಕಿರುಕುಳ ನೀಡಿದ ಆರೋಪಿ. ಕೂಜಳ್ಳಿಯ ಡಾ.ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಳೆದ 7 ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಮಹಿಳೆ. ಕಳೆದ ಒಂದು ವರ್ಷದಿಂದ ಮೈ-ಕೈ ಮುಟ್ಟಿ ದೈಹಿಕ ಹಾಗೂ ಮಾನಸಿಕ ಕಿರುಕುಳ  ನೀಡುತ್ತಿದ್ದಾನೆ. ವಿರೋಧಿಸಿದರೆ ಘಟನೆ ಬಗ್ಗೆ ಎಲ್ಲಿಯಾದ್ರೂ ಬಾಯಿಬಿಟ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿರುವ ಸಂತ್ರಸ್ತೆ ಮಹಿಳೆ. 

Tap to resize

Latest Videos

undefined

ಕಾರಟಗಿ:ಪ್ರತಿಭಾ ಕಾರಂಜಿಗೆ ಕರೆದೊಯ್ದು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಪೋಷಕರಿಂದ ಶಿಕ್ಷಕನಿಗೆ ಧರ್ಮದೇಟು!

ವಸತಿ ನಿಲಯದ ವಾರ್ಡನ್ ಅಸಭ್ಯ ವರ್ತನೆ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ರೂ ಕ್ರಮ ಕೈಗೊಳ್ಳದ ಹಿರಿಯ ಅಧಿಕಾರಿಗಳು.  ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿಗೆ ದೂರು ನೀಡಿದ್ದ ಸಂತ್ರಸ್ತ ಮಹಿಳೆ . ಅಷ್ಟೇ ಅಲ್ಲದೆ ಮಹಿಳಾ ಸಾಂತ್ವನ ಕೇಂದ್ರಕ್ಕೂ ದೂರು ನೀಡಿದ್ದ ಸಂತ್ರಸ್ತ ಮಹಿಳೆ. ಆದರೂ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯ. ಇತ್ತ ಕಾಮುಕನಿಂದ ನಿತ್ಯ ಕಿರುಕುಳ. 'ನನಗೆ ಸಹಕರಿಸಿದಿದ್ದರೆ ಕೆಲಸದಿಂದ ತೆಗೆದುಹಾಕುವುದು ಬೆದರಿಕೆ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಮಹಿಳೆ.

10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಸರ್ಕಾರಿ ಶಾಲೆ ಶಿಕ್ಷಕ ಸಾದೀಕ್ ಬೇಗ್ ಬಂಧನ

 ಕಾಮುಕ ವಾರ್ಡನ್ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ. ಆರೋಪಿ ವಾರ್ಡನ್ ಶಂಕರ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.  

click me!