ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದ್ದು, ಉದ್ಯಮಿಯೊಬ್ಬರಿಂದ ಸಿನಿಮಾ ಮಾಡುವುದಾಗಿ ನಂಬಿಸಿ 40 ಲಕ್ಷ ರೂ. ಸುಲಿಗೆ ಮಾಡಲಾಗಿದೆ. ಈ ಸಂಬಂಧ ಕಾವ್ಯ, ದಿಲೀಪ್ ಮತ್ತು ರವಿಕುಮಾರ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರು (ಸೆ.19): ಕನ್ನಡ ಚಿತ್ರರಂಗದ ಗಾಂಧಿನಗರದಲ್ಲಿ ಸಿನಿಮಾಗಿಂತ ಕೊಲೆ, ಸುಲಿಗೆ, ವಂಚನೆ, ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣಗಳೇ ಹೆಚ್ಚಾಗಿ ಸದ್ದು ಮಾಡುತ್ತಿವೆ. ಈಗಾಗಲೇ ನಟ ದರ್ಶನ್, ನಿರ್ಮಾಪಕ ಮುನಿರತ್ನ ಜೈಲು ಸೇರಿರುವ ಬೆನ್ನಲ್ಲಿಯೇ ಹನಿಟ್ರ್ಯಾಪ್ ಗ್ಯಾಂಗ್ ಒಂದು ಉದ್ಯಮಿಯಿಂದ ಸಿನಿಮಾ ಮಾಡುವುದಾಗಿ ಬರೋಬ್ಬರಿ 40 ಲಕ್ಷ ರೂ. ಹಣವನ್ನು ಪಡೆದು, ಆತನನ್ನು ಹನಿಟ್ರ್ಯಾಪ್ ಮಾಡಿ ವಂಚನೆ ಮಾಡಿರುವ ಪ್ರಕರಣ ಬಯಲಿಗೆ ಬಂದಿದೆ.
ಕನ್ನಡ ಚಿತ್ರರಂಗದ ನಾಯಕರು, ನಿರ್ಮಾಪಕರು ಹಾಗೂ ಸಿನಿಮಾ ಉದ್ಯಮದ ಮೇಲೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿರುವ ಹೊತ್ತಿನಲ್ಲಿಯೇ ಇದೀಗ ಮತ್ತೊಂದು ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಪ್ರಕರಣ ಬಯಲಿಗೆ ಬಂದಿದೆ. ಬೆಂಗಳೂರಿನ ಗಾಂಧಿನಗದಲ್ಲಿ ನಡೆದಿರುವ ಹನಿಟ್ರ್ಯಾಪ್ ಗ್ಯಾಂಗ್ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಸಿನಿಮಾ ಮಾಡುವ ಹೆಸರಿನಲ್ಲಿ ಉದ್ಯಮಿಯಿಂದ ಹಣಪಡೆದು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ನಂತರ ಅದನ್ನು ಉದ್ಯಮಿಗೆ ತೋರಿಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
undefined
ಕುರುಕ್ಷೇತ್ರ ಸಿನಿಮಾ ದುರ್ಯೋಧನ ಹೋದ ಜಾಗಕ್ಕೆ, ನಿರ್ಮಾಪಕ ಮುನಿರತ್ನನೂ ಎಂಟ್ರಿ: 14 ದಿನ ನ್ಯಾಯಾಂಗ ಬಂಧನ!
ಉದ್ಯಮಿ ಗಣೇಶ್ ಎಂಬುವವರು ನೀಡಿರುವ ದೂರಿನನ್ವಯ ಎಫ್.ಐ.ಆರ್ ದಾಖಲಾಗಿದೆ. ಕಾವ್ಯ, ದಿಲೀಪ್, ರವಿಕುಮಾರ್ ಎಂಬುವವರ ವಿರುದ್ದ ದೂರುದಾಖಲಾಗಿದೆ. ಉದ್ಯಮಿ ಗಣೇಶ್ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಲೈಟ್ ಆರ್ಟ್ ಸ್ಟುಡಿಯೋ ಹೊಂದಿದ್ದಾರೆ. ಗಣೇಶ್ ಅವರಿಗೆ ಕುಟುಂಬ ಎಂಬ ಸೋಷಿಯಲ್ ಮೀಡಿಯಾ ಆಫ್ ನಲ್ಲಿ ಕಾವ್ಯ ಪರಿಚಿತಳಾಗಿದ್ದಾಳೆ. ಈಕೆ ಕಳೆದ ನಾಲ್ಕು ವರ್ಷಗಳ ಹಿಂದೆ ಸಿನಿಮಾ ಮಾಡುತ್ತಿರೋದಾಗಿ ಪರಿಚಿತಳಾಗಿದ್ದಳು. ನಿರ್ದೇಶಕ ಎಸ್.ಆರ್.ಪಾಟೀಲ್ ಎಂಬುವವರಿಗೆ 4.25 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಳು.
ತಾನು ಕೊಟ್ಟ ಹಣ ವಾಪಸ್ಸು ಕೇಳಿದಾಗ ಕಾವ್ಯ, ಉದ್ಯಮಿ ಗಣೇಶ ಅವರನ್ನು ಗೊಟ್ಟಿಗೆರೆ ಖಾಸಗಿ ಜಾಗವೊಂದಕ್ಕೆ ಬಳಿ ಕರೆಸಿಕೊಂಡಿದ್ದಳು. ಈ ವೇಳೆ ಗಣೇಶ್ ಅವರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಳು. ನಂತರ, ವಿಡಿಯೋ ತೋರಿಸಿ ದೂರು ದಾಖಲು ಮಾಡಿ, ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಳು. ಅಲ್ಲದೇ ಗಣೇಶ್ ಅವರಿಂದ ಡಿಯೋ ಸ್ಕೂಟರ್ ಖರೀದಿಸಿಕೊಂಡು ಅದರ ಇಎಂಐ ಅನ್ನೂ ಅವರಿಂದಲೇ ಕಟ್ಟಿಸಿದ್ದಾಳೆ. ನೀನು ಹಣ ಕೊಡದಿದ್ದರೆ ವಿಡಿಯೋ ಹರಿಬಿಡೋದಾಗಿ ಬೆದರಿಸಿ ಚಿನ್ನದ ಸರ, ಬ್ರಾಸ್ ಲೈಟ್ ಪಡೆದುಕೊಂಡಿದ್ದಾಳೆ.
ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬಿಗೂ, ಕೆಎಂಫ್‌ನ ನಂದಿನಿ ತುಪ್ಪಕ್ಕೂ ಸಂಬಂಧವೇ ಇಲ್ಲ!
ಒಟ್ಟಾರೆ ಹಂತ ಹಂತವಾಗಿ ಉದ್ಯಮಿ ಗಣೇಶ್ ಅವರಿಂದ ವಿವಿಧ ಮಾರ್ಗದಲ್ಲಿ ಹಂತ ಹಂತವಾಗಿ ಹಣವನ್ನು ವಸೂಲಿ ಮಾಡಿದ್ದಾಳೆ. ಇತ್ತೀಚೆಗೆ 20 ಲಕ್ಷ ರೂ. ಮೌಲ್ಯದ ಕಾರು ಕೊಡಿಸು ಅಂತ ಕಾವ್ಯ ಡಿಮ್ಯಾಂಡ್ ಮಾಡಿದ್ದಾಳೆ. ಇವಳ ಕಿರುಕುಳವನ್ನು ತಾಳಲಾರದೇ ಉದ್ಯಮಿ ಗಣೇಶ್, ಕಾವ್ಯ ಹಾಗೂ ಆಕೆಯ ಗೆಳೆಯರಾದ ದಿಲೀಪ್ ರವಿಕುಮಾರ್ ವಿರುದ್ದ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದುರು ದಾಖಲಿಸಿದ್ದಾರೆ. ಇವರ ದೂರಿನ ಆಧಾರದಲ್ಲಿ ಹನಿಟ್ರ್ಯಾಪ್ ಕೇಸ್ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ದಾರೆ.