ಮದುವೆಗೆ ಇನ್ನು ಒಂದೇ ದಿನ ಬಾಕಿ. ಎರಡು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು.ಆದರೆ 23ರ ಹರೆಯದ ವಧುವಿನ ಮೇಲೆ ಮದುವೆಯ ಹಿಂದಿನ ದಿನ ಅತ್ಯಾಚಾರ ನಡೆದಿತ್ತು. ಈ ಆಘಾತದ ಬೆನ್ನಲ್ಲೇ ವರನ ಕುಟುಂಬದಿಂದಲೂ ಶಾಕ್ ಎದುರಾಗಿತ್ತು. ಅತ್ಯಾಚಾರ ಮಾಹಿತಿ ತಿಳಿದ ವರನ ಕುಟುಂಬ ಸಂಬಂಧವನ್ನೇ ಕಡಿದುಕೊಂಡಿದೆ.
ಭೋಪಾಲ್(ಜ.31) ಹುಡುಗ-ಹುಡುಗಿ, ಕುಟುಂಬಸ್ಥರು ಪರಸ್ವರ ಒಪ್ಪಿ ಮದುವೆ ನಿಗದಿ ಮಾಡಿದ್ದರು. ಮದುವೆಗೆ ಎಲ್ಲಾ ತಯಾರಿ ನಡೆದಿತ್ತು. ಆದರೆ ಮದುವೆ ಹಿಂದಿನ ದಿನ ವಧುವಿನ ಮೇಲೆ ಅತ್ಯಾಚಾರ ನಡೆದಿದೆ. ಆರೋಪಿಯ ಬೆದರಿಕೆ, ತನ್ನ ಮುಂದಿನ ಜೀವನ, ಪೋಷಕರ ಕಷ್ಟಗಳ ನೆನೆಸಿಕೊಂಡ ವಧು ಯಾರಿಗೂ ಹೇಳದೆ ತೀವ್ರ ನೋವಿನಲ್ಲೇ ಮದುವೆಗೆ ಅಣಿಯಾಗಿದ್ದಾಳೆ. ಮದುವೆ ಕೂಡ ನಡೆದಿದೆ. ಆದರೆ ಒಂದು ತಿಂಗಳ ಬಳಿಕ ಪೋಷಕರಿಗೆ ಈ ಮಾಹಿತಿಯನ್ನು ತಿಳಿಸಿದ್ದಾಳೆ. ಇತ್ತ ಪೋಷಕರು ನೇರವಾಗಿ ದೂರು ನೀಡಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಅತ್ಯಾಚಾರ ಮಾಹಿತಿ ಪತಿ ಹಾಗೂ ಪತಿಯ ಕುಟುಂಬಸ್ಥರಿಗೆ ತಲುಪಿದೆ. ಇತ್ತ ಏಕಾಏಕಿ ಪತಿಯ ಕುಟುಂಬಸ್ಥರು ಸಂಬಂಧವನ್ನೇ ಕಡಿದುಕೊಂಡ ಘಟನೆ ಮಧ್ಯಪ್ರದೇಶಧ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಡಿಸೆಂಬರ್ 3 ರಂದು 23ರ ಯುವತಿಯ ಮದುವೆ ನಿಗದಿಯಾಗಿತ್ತು. ಡಿಸೆಂಬರ್ 22ರಂದು ಕೆಲ ವಸ್ತುಗಳ ಖರೀದಿ, ಮೇಕ್‌ಅಪ್ ಸೇರಿದಂತೆ ಹಲವು ಕೆಲಸಗಳ ನಿಮಿತ್ತ ಪಟ್ಟಣಕ್ಕೆ ತೆರಳಿದ ಯುವತಿ ಮರಳಿ ಬರುವಾಗ ಸಂಜೆಯಾಗಿದೆ. ಆದರೆ ಮರಳಿ ಬರವು ದಾರಿಯಲ್ಲಿ ಯುವತಿಗೆ ಪರಿಚಯಸ್ಥ ವ್ಯಕ್ತಿ ಸಿಕ್ಕದ್ದಾನೆ. ಮಾತನಾಡುತ್ತಾ ಬಂದ ಈತ ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಗೃಹ ಸಚಿವರ ತವರಲ್ಲಿ 1ನೇ ತರಗತಿ ಬಾಲಕಿ ಎಳೆದೊಯ್ದು ಅತ್ಯಾಚಾರವೆಸಗಿದ ಕಾಮುಕ
ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಈ ವಿಚಾರ ಯಾರಿಗಾದರೂ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇತ್ತ ತೀವ್ರ ಆಘಾತದಲ್ಲಿ ಮನೆಯತ್ತ ಧಾವಿಸಿದ ವಧುವಿಗೆ ದಿಕ್ಕೇ ತೋಚದಂತಾಗಿದೆ. ಮುಖದ ನಗು, ಸಂತೋಷ ಮಾಯವಾಗಿದೆ. ಮನೆಯಲ್ಲಿ ಸಂಭ್ರಮದ ವಾತವರಣವಿದ್ದರೂ ಸಂಭ್ರಮಿಸುವ ಪರಿಸ್ಥಿತಿಯಲ್ಲಿ ನವ ವಧು ಇರಲಿಲ್ಲ.
ಒಂದೆಡೆ ಆರೋಪಿಯ ಬೆದರಿಕೆ, ಮತ್ತೊಂದೆಡೆ ತನ್ನ ಭವಿಷ್ಯ, ಪೋಷಕರ ಆಸೆ ಆಕಾಂಕ್ಷೆ ಎಲ್ಲವನ್ನೂ ನೆನೆಪಿಸಿಕೊಂಡ ವಧು ಯಾರಿಗೂ ಒಂದು ಮಾತನಾಡದೆ ಮರುದಿನದ ಮದುವೆಗೆ ಘಟ್ಟಿ ಮನಸ್ಸು ಮಾಡಿದ್ದಾಳೆ. ಮದುವೆ ನಡೆದುಹೋಗಿದೆ. ಆದರೆ ಮಾನಸಿಕ ಆಘಾತ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ನೋವು, ಮಾನಸಿಕ ತೊಳಲಾಟದಿಂದ ಬಳಲಿದ ಈಕೆ, ಜನವರಿ 23ರಂದು ತನ್ನ ಪೋಷಕರಿಗೆ ನಡೆದ ಘಟನೆಯನ್ನು ಹೇಳಿದ್ದಾಳೆ.
ಮಗಳಿಂದ ಈ ಮಾತುಗಳು ಕೇಳುತ್ತಿದ್ದಂತೆ ಪೋಷಕರು ಕಣ್ಣೀರಿಟ್ಟಿದ್ದಾರೆ. ಮಗಳಿಗೆ ಧೈರ್ಯ ತುಂಬಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದರಿಂದ ಪತಿ ಹಾಗೂ ಪತಿಯ ಕುಟುಂಬಸ್ಥರಿಗೆ ಅತ್ಯಾಚಾರ ಮಾಹಿತಿ ತಿಳಿದಿದೆ. ಅತ್ಯಾಚಾರ ಆಗಿದೆ ಅನ್ನೋ ಮಾಹಿತಿ ಪಡೆದ ಪತಿ ಕುಟುಬಂಸ್ಥರು ರಂಪಾಟ ಶುರುಮಾಡಿದ್ದಾರೆ. ಇಷ್ಟೇ ಅಲ್ಲ ಸಂಬಂಧವನ್ನೇ ಕಡಿದುಕೊಂಡಿದ್ದಾರೆ. ಒಂದೆಡೆ ಅತ್ಯಾಚಾರ, ಮತ್ತೊಂದೆಡೆ ಸಂಬಂಧ ಕೂಡ ಕಡಿದಿರುವುದು ಯವುತಿ ಹಾಗೂ ಆಕೆಯ ಪೋಷಕರಿಗೆ ಮತ್ತಷ್ಟು ಆಘಾತ ತಂದಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.