41ರೂ ಇಟ್ಕೊಂಡು ಲಕ್ಷುರಿ ಹೊಟೆಲ್‌ನಲ್ಲಿ ವಾಸ, 6 ಲಕ್ಷ ರೂ ಬಾಕಿ ಉಳಿಸಿ ಪರಾರಿಯಾದ ಮಹಿಳೆ ಅರೆಸ್ಟ್!

ಈ ಮಹಿಳೆ ಖಾತೆಯಲ್ಲಿದ್ದಿದ್ದು ಕೇವಲ 41 ರೂಪಾಯಿ ಮಾತ್ರ. ಆದರೆ ದೆಹಲಿಯ ಐಷಾರಾಮಿ ಹೊಟೆಲ್‌ನಲ್ಲಿ ಕೆಲ ದಿನ ಕಳೆದಿದ್ದಾಳೆ. ಹೊಟೆಲ್ ರೂಂ, ಆಹಾರ, ನೀರು, ಮಸಾಜ್ ಸೇರಿದಂತೆ ಎಲ್ಲಾ ಸೌಲಭ್ಯವನ್ನೂ ಬಳಸಿಕೊಂಡಿದ್ದಾಳೆ. ಬರೋಬ್ಬರಿ 6 ಲಕ್ಷ ರೂ ಬಾಕಿ ಉಳಿಸಿ ಪರಾರಿಯಾದ ಮಹಿಳೆಯನ್ನು ಆರೆಸ್ಟ್ ಮಾಡಲಾಗಿದೆ. 


ನವದೆಹಲಿ(ಜ.30) ಹೊಟೆಲ್‌ಗೆ ತೆರಳುವಾಗ, ಪ್ರವಾಸದ ಮೊದಲು ಎರೆಡೆರಡು ಬಾರಿ ಪರ್ಸ್ ಅಥವಾ ಖಾತೆ ಚೆಕ್ ಮಾಡುವ ಅಭ್ಯಾಸ ಹಲವರಿಗಿದೆ. ಕಾರಣ ಹಣ ಇಲ್ಲದೆ ಪಾತ್ರೆ ತೊಳೆಯುವ ಪರಿಸ್ಥಿತಿ ಬರಬಾರದು, ಪ್ರಯಾಣದಿಂದ ಅರ್ಧದಲ್ಲೇ ಇಳಿಯುವ ಸಂಕಷ್ಟವೂ ಇರಬಾರದು ಅನ್ನೋ ಲೆಕ್ಕಾಚಾರ. ಆದರೆ ಆಂಧ್ರ ಪ್ರದೇಶ ಮೂಲದ ಮಹಿಳೆ, ದೆಹಲಿಯ ಐಷಾರಾಮಿ ಹೊಟೆಲ್‌ನಲ್ಲಿ 15 ದಿನ ತಂಗಿದ್ದಾಳೆ. ಊಟ, ತಿಂಡಿ, ಎಸಿ ರೂಂ, ಪ್ರತಿ ದಿನ ಮಸಾಜ್ ಸೇರಿದಂತೆ ಹೊಟೆಲ್‌ನಲ್ಲಿರುವ ಎಲ್ಲಾ ಸೌಲಭ್ಯವನ್ನೂ ಉಪಯೋಗಿಸಿಕೊಂಡಿದ್ದಾಳೆ. ಆದರೆ ಈ ಮಹಿಳೆ ಬಳಿ ಇದ್ದಿದ್ದು ಕೇವಲ 41 ರೂಪಾಯಿ ಮಾತ್ರ. ಹೀಗಾಗಿ 6 ಲಕ್ಷ ರೂಪಾಯಿ ಬಿಲ್ ಬಾಕಿ ಉಳಿಸಿ ಪರಾರಿಯಾದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಜಾನ್ಸಿ ರಾಣಿ ಸಾಮ್ಯುಯೆಲ್ ದೆಹಲಿಯ ವಿಮಾನ ನಿಲ್ದಾಣದ ಬಳಿ ಇರುವ ಪುಲ್‌ಮ್ಯಾನ್ ಹೊಟೆಲ್‌ಗೆ ಆಗಮಿಸಿ ನಕಲಿ ದಾಖಲೆ ನೀಡಿ ರೂಂ ಪಡೆದಿದ್ದಾಳೆ. ಎಸಿ ರೂಂ ಹಾಗೂ ಹೊಟೆಲ್‌ನಲ್ಲಿರುವ ಎಲ್ಲಾ ಐಷಾರಾಮಿ ಸೌಲಭ್ಯವನ್ನೂ ಬಳಸಿಕೊಂಡಿದ್ದಾಳೆ. ಸಮಯಕ್ಕೆ ಸರಿಯಾಗಿ ತಿಂಡಿ, ಊಟ, ಚಹಾ, ಜ್ಯೂಸ್ ತರಿಸಿಕೊಂಡಿದ್ದಾಳೆ. ಇನ್ನು  ಹೊಟೆಲ್‌ನಲ್ಲಿರುವ ಸ್ಪಾ ಹಾಗೂ ಮಸಾಜ್ ಸೆಂಟರ್‌ನಲ್ಲಿ ಇಶಾ ದೇವ್ ಅನ್ನೋ ಗುರುತಿನ ಚೀಟಿ ತೋರಿಸಿ 2,11,708 ರೂಪಾಯಿ ಬಿಲ್ ಮಾಡಿದ್ದಾಳೆ.

Latest Videos

ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಜನರನ್ನು ನಂಬಿಸಿ ₹160 ಕೋಟಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಬರೋಬ್ಬರಿ 15 ದಿನ ಸಾಮ್ಯುಯೆಲ್ ಇದೇ ರೀತಿ ನಾಟಕ ಮಾಡಿದ್ದಾಳೆ. ಕೆಲವೆಡೆ ಪಾವತಿ ಮಾಡಲೇಬೇಕು ಎಂದಾದಾಗ ಯುಪಿಐ ಮೂಲಕ ಪಾವತಿ ಮಾಡಿದ್ದಾಳೆ. ಆದರೆ ಹೀಗೆ ಮಾಡಿದ ಯಾವುದೇ ಪಾವತಿಗಳಲ್ಲಿ ಹೊಟೆಲ್ ಖಾತೆಗೆ ದುಡ್ಡು ಬಂದಿಲ್ಲ. ಒಟ್ಟು 5,88,176 ರೂಪಾಯಿ ಬಾಕಿ ಉಳಿಸಿ ಮಹಿಳೆ ಸದ್ದಿಲ್ಲದೆ ಪರಾರಿಯಾಗಿದ್ದಾಳೆ. ಹೊಟೆಲ್ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಂಧನದಲ್ಲಿರುವ ಮಹಿಳೆ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿಲ್ಲ. ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿದ್ದಾಳೆ. ತಾನು ವೈದ್ಯ, ತನ್ನ ಪತಿ ಕೂಡ ವೈದ್ಯ ಎಂದು ಆರಂಭದಲ್ಲಿ ಹೇಳಿದ್ದಾಳೆ. ಬಳಿಕ ಬೇರೆ ಕತೆ ಹೇಳಿದ್ದಾಳೆ. ಈಕೆ ಖಾತೆ ಪರಿಶೀಲಿಸಿದಾಗ ಕೇವಲ 41 ರೂಪಾಯಿ ಮಾತ್ರ ಇದೆ. ಇನ್ನು ಕೈಯಲ್ಲಿ, ಪರ್ಸ್‌ನಲ್ಲಿ ಒಂದು ರೂಪಾಯಿ ಕೂಡ ಇಲ್ಲ. ಈಕೆಯ ಬಳಿ ನಕಲಿ ಗುರುತಿನ ಚೀಟಿಗಳೇ ತುಂಬಿದೆ. ಹೀಗಾಗಿ ಅಸಲಿ ವಿಳಾಸ ಕೂಡ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದೀಗ ದೆಹಲಿ ಪೊಲೀಸರು ಆಂಧ್ರ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಹಿಳೆ ಕುರಿತು ನಿಖರ ಮಾಹಿತಿ, ವಿಳಾಸ, ಕುಟುಂಬಸ್ಥರ ಮಾಹಿತಿ ನೀಡಲು ಸೂಚಿಸಿದ್ದಾರೆ.ಸಾಮ್ಯುಯೆಲ್ ವಿರುದ್ಧ ಐಪಿಸಿ ಸೆಕ್ಷನ್ 419 , 468 ಹಾಗೂ 471ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನ ಕದ್ದು ಪರಾರಿಯಾಗಲು ಯತ್ನ: ಸಿನಿಮಾ ಶೈಲಿಯಲ್ಲಿ ದರೋಡೆಕೋರರು ಅರೆಸ್ಟ್!

click me!