‘ಹೋಟೆಲ್‌ಗೆ ಬಾ’: ನಕಲಿ ಖಾತೆ ತೆರದು ಪತಿಯೊಂದಿಗೇ ಚಾಟ್: ಪತ್ನಿಯ ಖತರ್ನಾಕ್‌ ಐಡಿಯಾಗೆ ದಂಗಾದ ಪೊಲೀಸಪ್ಪ

By Suvarna NewsFirst Published Jun 11, 2022, 7:16 PM IST
Highlights

ಇಂದೋರ್‌ನ ಸುಖ್ಲಿಯಾ ನಿವಾಸಿ ಮನೀಶಾ ಚವಂದ್ ಪಂಚಮ್ ಕಿ ಫಾಲ್‌ನಲ್ಲಿ ವಾಸಿಸುವ ಸತ್ಯಂ ಬೆಹ್ಲ್ ಎಂಬ ಯುವಕನನ್ನು 2019 ರಲ್ಲಿ ವಿವಾಹವಾಗಿದ್ದರು.

ಇಂದೋರ್‌ (ಜೂ. 11): ಮಧ್ಯಪ್ರದೇಶದ ಇಂದೋರ್‌ನಲ್ಲಿ, ಪೊಲೀಸ್ ಕಾನ್ಸ್‌ಟೇಬಲ್ ಗಂಡನ ಅಸಲಿ ಮುಖವನ್ನು ಬಹಿರಂಗಪಡಿಸಲು ಪತ್ನಿ  ಖತರ್ನಾಕ್‌ ಐಡಿಯಾವೊಂದನ್ನು ಮಾಡಿದ್ದಾರೆ. ಪತ್ನಿ ಮೊದಲು ಫೇಸ್ಬುಕ್‌ನಲ್ಲಿ ನಕಲಿ ಹೆಸರಿನ ಐಡಿ ಸೃಷ್ಟಿಸಿ ಬಳಿಕ ಪತಿಗೆ ರಿಕ್ವೆಸ್ಟ್ ಕಳುಹಿಸಿದ್ದು, ಒಪ್ಪಿಗೆ ಸಿಕ್ಕ ಕೂಡಲೇ ಇಬ್ಬರೂ ಮಾತನಾಡತೊಡಗಿದ್ದಾರೆ. ಮಾತನಾಡುವಾಗ, ಪೊಲೀಸ್ ಹೆಂಡತಿಯನ್ನು ಬೇರೆ ಹುಡುಗಿ ಎಂದು ತಪ್ಪಾಗಿ ಗ್ರಹಿಸಿ ಮುತ್ತು ನೀಡುವಂತೆ ಒತ್ತಾಯಿಸಿದ್ದಾನೆ. ಹೆಂಡತಿ ಸತ್ಯ ಹೇಳಿದಾಗ ಪೊಲೀಸ್ ಕಾನ್ಸ್‌ಟೇಬಲ್ ಕಂಗಾಲಾಗಿದ್ದಾನೆ. 

ಇಂದೋರ್‌ನ ಸುಖ್ಲಿಯಾ ನಿವಾಸಿ ಮನೀಶಾ ಚವಂದ್ ಪಂಚಮ್ ಕಿ ಫಾಲ್‌ನಲ್ಲಿ ವಾಸಿಸುವ ಸತ್ಯಂ ಬೆಹ್ಲ್ ಎಂಬ ಯುವಕನನ್ನು 2019 ರಲ್ಲಿ ವಿವಾಹವಾಗಿದ್ದರು. ಕೆಲವು ದಿನಗಳ ಕಾಲ ಸತ್ಯಂ ಮನಿಷಾಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ಆದರೆ ಆ ನಂತರ ಚಿತ್ರಹಿಂಸೆ ನೀಡಲು ಶುರು ಮಾಡಿದ್ದ. ಕೆಲ ದಿನಗಳ ಬಲಿಕ ಪೊಲೀಸ್ ಸಿಬ್ಬಂದಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದ. ಸಣ್ಣಪುಟ್ಟ ವಿಷಯಗಳಿಗೂ ಪತ್ನಿಯನ್ನು ಹಲವು ಗಂಟೆಗಳ ಕಾಲ ಬಾತ್ ರೂಂನಲ್ಲಿ ಬೀಗ ಹಾಕುತ್ತಿದ್ದ. ತಾಸುಗಟ್ಟಲೆ ಹೊಡೆದು ನೆಲದ ಮೇಲೆ ಕೂರಿಸುತ್ತಿದ್ದ.

ಇದನ್ನೂ ಓದಿ: ಪ್ರಿಯಕರನ ಜತೆ ಸೇರಿ ತಾಯಿಗೆ ಚೂರಿ ಇರಿದ ಮಗಳು

ಇದರಿಂದ ಗಾಬರಿಗೊಂಡ ಪತ್ನಿ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದು, ಈ ಬಳಿಕ ಪತಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 28 ನವೆಂಬರ್ 2020 ರಂದು ದಾಖಲಿಸಲಾದ ಎಫ್‌ಐಆರ್‌ನಲ್ಲಿ, ಪತಿ ಮನೆಯಲ್ಲಿ ಪತ್ರಿಕೆ ಓದಲು ಸಹ ಅನುಮತಿಸುತ್ತಿರಲಿಲ್ಲ ಎಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲ, ವರದಕ್ಷಿಣೆಗಾಗಿ ಮಹಿಳೆಯಿಂದ ಮೋಟಾರ್ ಸೈಕಲ್ ಗಾಗಿ ನಿರಂತರವಾಗಿ ಬೇಡಿಕೆ ಇಡುತ್ತಿದ್ದ. ಈ ಪ್ರಕರಣದಲ್ಲಿ ಪತಿಯನ್ನು ಬಂಧಿಸುವ ಆದೇಶವೂ ಇತ್ತು. ಸದ್ಯ ಆರೋಪಿ ಜಾಮೀನಿನ ಮೇಲೆ ಹೊರಗಿದ್ದಾನೆ. ಪ್ರಕರಣ  ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯತ್ತಿದೆ. 

ನಕಲಿ ಫೇಸ್‌ಬುಕ್ ಐಡಿ: ಪತ್ನಿ ಮನೀಶಾ ತನ್ನ ತಾಯಿಯ ಮನೆಯಲ್ಲಿ ಇರುವಾಗ ತನ್ನ ಪತಿ ಮೇಲೆ ಅನುಮಾನ ಮೂಡಿದೆ, ಹೀಗಾಗಿ ನಕಲಿ ಫೇಸ್‌ಬುಕ್ ಐಡಿಯೊಂದಿಗೆ ಪತಿಗೆ ವಿನಂತಿಯನ್ನು ಕಳುಹಿಸಿದ್ದಳು. ಸೋಷಿಯಲ್ ಮೀಡಿಯಾದಲ್ಲಿ ಸಿಂಗಲ್ ಎಂದು ಬಣ್ಣಿಸಿಕೊಂಡ ಸತ್ಯಂ, ಈಗ ಪ್ರತಿದಿನ ಅಪರಿಚಿತ ಮಹಿಳೆಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದ. 

ಈ ನಡುವೆ ಒಂದು ದಿನ ಫೇಸ್‌ಬುಕ್ ಚಾಟ್‌ನಲ್ಲಿ ಸ್ವಂತ ಪತ್ನಿಯನ್ನು ಮತ್ತೊಬ್ಬ ಯುವತಿ ಎಂದು ತಪ್ಪಾಗಿ ಅರ್ಥೈಸಿಕೊಂಡ ಪೊಲೀಸ್ ಮುತ್ತು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟಿದ್ದಾನೆ. ಇನ್ನು ಪತ್ನಿ ವಾಟ್ಸ್‌ಆ್ಯಪ್‌ನಲ್ಲಿನ ಚಾಟ್ ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಪ್ರಸ್ತುತಪಡಿಸಿದ್ದು, ಇದನ್ನು ಜಿಲ್ಲಾ ನ್ಯಾಯಾಲಯವು ಪರಿಗಣಿಸಿದೆ. 

ಪತ್ನಿಯ ಆರೋಪದ ಮೇರೆಗೆ ಇಂದೋರ್ ಜಿಲ್ಲಾ ನ್ಯಾಯಾಲಯವು ಆರೋಪಿ ವಿರುದ್ಧ ಕೌಟುಂಬಿಕ ಹಿಂಸಾಚಾರದಿಂದ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆದೇಶಿಸಿದೆ. ಅರ್ಜಿಯ ವಿಚಾರಣೆ ವೇಳೆ ಸೋಮವಾರ ಆಹಾರ ವೆಚ್ಚವಾಗಿ 2 ಲಕ್ಷ ರೂ., ಹಾಗೂ ಜೀವನಾಂಶಕ್ಕಾಗಿ ಮಹಿಳೆಗೆ ಪ್ರತಿ ತಿಂಗಳು 7 ಸಾವಿರ ರೂ.ಗಳನ್ನು ನೀಡುವಂತೆ ನ್ಯಾಯಾಲಯ ಪತಿಗೆ ಆದೇಶಿಸಿದೆ.

ಇದನ್ನೂ ಓದಿ: ನಕಲಿ ಆಧಾರ್ ಸೃಷ್ಟಿಸಿ ಹಣ ವರ್ಗಾವಣೆ: ಬಾಂಗ್ಲಾ ದರೋಡೆಕೋರರ ಗ್ಯಾಂಗ್‌ ಅರೆಸ್ಟ್‌

2020 ರಲ್ಲಿ ಪತ್ನಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಅರ್ಜಿ ಸಲ್ಲಿಸಿದ್ದು, ಜಿಲ್ಲಾ ನ್ಯಾಯಾಲಯವು ಪತಿಗೆ ಮಾಸಿಕ 7000 ನೀಡುವಂತೆ ಆದೇಶಿಸಿದೆ ಎಂದು ವಕೀಲ ಕೃಷ್ಣ ಕುಮಾರ್ ಕುನ್ಹರೆ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಪತಿಯ ಸತ್ಯವನ್ನು ಬಹಿರಂಗಪಡಿಸುವ ಉದ್ದೇಶದಿಂದ, ಪತ್ನಿ ಬೇರೊಬ್ಬ ಹುಡುಗಿಯಂತೆ ಪೋಸ್ ಕೊಟ್ಟು ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಅವನೊಂದಿಗೆ ಚಾಟ್ ಮಾಡಿದ್ದು, ಜವಾನ್ ಸತ್ಯಂ ಬಹ್ಲ್ ಅಶ್ಲೀಲವಾಗಿ ಚಾಟ್ ಮಾಡಿದ್ದಾನೆ. ಹೀಗಾಗಿ ಸದ್ಯ ಪತ್ನಿ ಸೂಕ್ತ ನ್ಯಾಯಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ

click me!