ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿದ್ದ ರೈಲಿನಿಂದ ಮಹಿಳೆ ತಳ್ಳಿದ ಐವರು ಕಾಮುಕರು!

By BK Ashwin  |  First Published Jun 22, 2023, 3:38 PM IST

ತನ್ನ ಸಂಬಂಧಿಕರೊಂದಿಗೆ ಜಾರ್ಖಂಡ್‌ನಿಂದ ಗುಜರಾತ್‌ನ ಸೂರತ್‌ಗೆ ಪ್ರಯಾಣಿಸುತ್ತಿದ್ದಾಗ ಐವರು ಅಪರಿಚಿತ ಪುರುಷರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.


ಗ್ವಾಲಿಯರ್ (ಜೂನ್ 22, 2023): ಚಲಿಸುತ್ತಿದ್ದ ರೈಲಿನಿಂದ ಮಹಿಳೆ ಮತ್ತು ಆಕೆಯ ಸಂಬಂಧಿಯನ್ನು ಐವರು ಪುರುಷರು ರೈಲಿನಿಂದ ಎಸೆದಿರುವ ಘೋರ ಘಟನೆ ಸೋಮವಾರ ರಾತ್ರಿ ನಡೆದಿದೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. ಲೈಂಗಿಕ ದೌರ್ಜನ್ಯದ ಪ್ರಯತ್ನದಿಂದ ಈ ಘಟನೆ ಸಂಭವಿಸಿದ್ದು, ಮುಜಾಫರ್‌ಪುರದಿಂದ ಗುಜರಾತ್‌ನ ಸೂರತ್‌ಗೆ ತೆರಳುತ್ತಿದ್ದ ಸೂರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ತನ್ನ ಸಂಬಂಧಿಕರೊಂದಿಗೆ ಜಾರ್ಖಂಡ್‌ನಿಂದ ಗುಜರಾತ್‌ನ ಸೂರತ್‌ಗೆ ಪ್ರಯಾಣಿಸುತ್ತಿದ್ದಾಗ ಐವರು ಅಪರಿಚಿತ ಪುರುಷರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಿಲುವಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಮಹಿಳೆ ಅವಲತ್ತುಕೊಂಡಿದ್ದಾರೆ. ಮಹಿಳೆ ಮತ್ತು ಆರೋಪಿಗಳ ನಡುವೆ ವಾಗ್ವಾದ ನಡೆದಿದ್ದು, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ. ಅಲ್ಲದೆ, ಆರೋಪಿಯೊಬ್ಬರು ತನ್ನ ಒಪ್ಪಿಗೆಯಿಲ್ಲದೆ ತನ್ನ ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!

ಮಹಿಳೆ ಇದನ್ನು ವಿರೋಧಿಸಿದಾಗ, ಆಕೆಯ ಪುರುಷ ಸಂಬಂಧಿಯನ್ನು ನಿರ್ದಯವಾಗಿ ಥಳಿಸಲಾಗಿದೆ. ಬಳಿಕ ಘರ್ಷಣೆಯನ್ನು ತಪ್ಪಿಸಲು ಮಹಿಳೆ ಹಾಗೂ ಸಂಬಂಧಿ ತಮ್ಮ ಆಸನವನ್ನು ಬದಲಿಸಿದರು. ಆದರೂ, ಆರೋಪಿಗಳು ಅವರನ್ನು ಹಿಂಬಾಲಿಸಿ ಮಹಿಳೆಯ ಸೀರೆ ಎಳೆದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಸಂತ್ರಸ್ತೆ ಉಟ್ಟಿದ್ದ ಉಡುಪನ್ನು ಬಲವಂತವಾಗಿ ತೆಗೆದುಹಾಕಿದಾಗ ಆಕೆ ಅರೆಬೆತ್ತಲೆಯಾಗಿದ್ದರು. ಆ ವೇಳೆ, ಪರಿಸ್ಥಿತಿ ಉಲ್ಬಣಗೊಂಡಿದೆ. ನಂತರ ಆರೋಪಿಯು ತನ್ನನ್ನು ಮತ್ತು ತನ್ನ ಸಂಬಂಧಿಯನ್ನು ಚಲಿಸುವ ರೈಲಿನಿಂದ ತಳ್ಳಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.  ರಾತ್ರಿಯಿಡೀ, ಗಾಯಾಳುಗಳು ಬರೋಡಿ ಗ್ರಾಮದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದರು, ಅವರನ್ನು ಸ್ಥಳೀಯ ಗ್ರಾಮಸ್ಥರು ಪತ್ತೆ ಮಾಡಿದರು. ಮಂಗಳವಾರ ಬೆಳಗ್ಗೆ ಗ್ರಾಮಸ್ಥರು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದೂ ತಿಳಿದು ಬಂದಿದೆ.

ಇದನ್ನೂ ಓದಿ: ಪತಿ, ಮಕ್ಕಳನ್ನು ಬಿಟ್ಟು ಲಿವ್‌ ಇನ್‌ ಸಂಗಾತಿ ಜತೆ ವಾಸಿಸಲು ವಿವಾಹಿತ ಮಹಿಳೆಗೆ ಅನುಮತಿ ನೀಡಿದ ಹೈಕೋರ್ಟ್‌

ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಘಟನೆಯ ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ತನಿಖೆ ಮಾಡಲು ತಂಡವನ್ನು ರಚಿಸಲು ಎಸ್‌ಡಿಒಪಿ ದಾಬ್ರಾ ಮತ್ತು ಬಿಲೌವಾ ಠಾಣೆಯ ಉಸ್ತುವಾರಿಗೆ ಎಸ್‌ಪಿ ಗ್ವಾಲಿಯರ್ ರಾಜೇಶ್ ಸಿಂಗ್ ಚಾಂಡೆಲ್ ನೇತೃತ್ವದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇನ್ನು, ಈ ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಗ್ವಾಲಿಯರ್ ರಾಜೇಶ್ ಸಿಂಗ್ ಚಂದೇಲ್, ರೈಲಿನಲ್ಲಿದ್ದ ಪ್ರಯಾಣಿಕರ ಸಂಖ್ಯೆಯನ್ನು ಪತ್ತೆಹಚ್ಚಲು ಮತ್ತು ಹೇಯ ಕೃತ್ಯಕ್ಕೆ ಕಾರಣರಾದವರನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ. ನಾವು ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸುತ್ತಿದ್ದೇವೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಇದಪ್ಪಾ ಶಿಕ್ಷೆ ಅಂದ್ರೆ! ಅಪ್ರಾಪ್ತ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಪಾಪಿಗೆ 135 ವರ್ಷ ಸೆರೆವಾಸ

ಹಾಗೂ, ಐಪಿಸಿಯ ಸೆಕ್ಷನ್ 354 (ಹೆಣ್ಣಿನ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲದಿಂದ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ವಾಲಿಯರ್) ರಾಜೇಶ್ ಚಂದೇಲ್ ಹೇಳಿದರು.

“ಮಹಿಳೆಗೆ ಫ್ರಾಕ್ಚರ್‌ಗಳು ಉಂಟಾಗಿವೆ. ಆಕೆಯೊಂದಿಗೆ ಪುರುಷ ಸಂಬಂಧಿಯೊಬ್ಬರು ಇದ್ದರು, ಅವರಿಗೆ ಗಂಭೀರ ಗಾಯಗಳಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲು ರೈಲ್ವೆ ಪೊಲೀಸರನ್ನೂ ನಿಯೋಜಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ನಾವು ರೈಲಿನ ವಿವರಗಳು ಮತ್ತು ಪ್ರಯಾಣಿಕರ ವಿವರಗಳನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆಕೆ ನಮಗೆ ರೈಲಿನ ವಿವರಗಳನ್ನು ಸರಿಯಾಗಿ ನೀಡಲಿಲ್ಲ, ಅವರು ಸೂರತ್ ಕಡೆಗೆ ಹೋಗುತ್ತಿರುವುದಾಗಿ ಮಾತ್ರ ಹೇಳಿದರು. ನಾವು ಆಕೆಯ ಹೇಳಿಕೆಯನ್ನು ಪರಿಶೀಲಿಸುತ್ತಿದ್ದೇವೆ’’ ಎಂದೂ  ಪೊಲೀಸ್ ವರಿಷ್ಠಾಧಿಕಾರಿ (ಗ್ವಾಲಿಯರ್) ರಾಜೇಶ್ ಚಂದೇಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ರೇಪ್‌ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ

click me!