ಬೆಂಗಳೂರಿನಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಡೇ ಕೇರ್ ಸೆಂಟರ್‌ಗೆ ಸೇರಿಸುವ ಮುನ್ನ ಪೋಷಕರೇ ಎಚ್ಚರವಾಗಿರಿ. ಇಲ್ಲವಾದರೆ ನಿಮ್ಮ ಮಕ್ಕಳಿಗೂ ಇದೇ ಗತಿ ಆಗಲಿದೆ.
ಬೆಂಗಳೂರು (ಜೂ.22): ಮನೆಯಲ್ಲಿ ತಂದೆ- ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಧಾವಂತದಲ್ಲಿ ಮಕ್ಕಳನ್ನು ಡೇ ಕೇಸ್ ಸೆಂಟರ್‌ಗೆ ಸೇರಿಸುವುದು ಸಾಮಾನ್ಯವಾಗಿದೆ. ಆದರೆ, ಹೀಗೆ ಡೇ ಕೇರ್ ಸೆಂಟರ್‌ಗೂ ಸೇರಿಸುವ ಮುನ್ನ ಅಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಸಿಬ್ಬಂದಿ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. ಜೊತೆಗೆ ಎಂತಹ ಮಕ್ಕಳಿದ್ದಾರೆ ಎಂಬುದನ್ನೂ ಕೂಡ ನಾವು ನೋಡಬೇಕು. ಇಲ್ಲವಾದರೆ ಇಲ್ಲಿ ಆಗುವ ಅನಾಹುತವೇ ನಿಮ್ಮ ಮಕ್ಕಳಿಗೂ ಸಂಭವಿಸಬಹುದು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಪೋಷಕರು, ಇಬ್ಬರೂ ಕೆಲಸ ಮಾಡುವ ದೃಷ್ಟಿಯಿಂದ ಮಕ್ಕಳನ್ನು ಡೇ ಕೇರ್ ಸೆಂಟರ್‌ಗೆ ಮಕ್ಕಳನ್ನು ಸೇರಿಸಿ ಕೆಲಸಕ್ಕೆ ಹೋಗುವುದು ಮಾಮೂಲಿಯಾಗಿದೆ. ಹೀಗೆ, ಮಕ್ಕಳನ್ನ ಡೇ ಕೇರ್ ಸೆಂಟರ್ ಗೆ ಸೇರಿಸೋ ಪೊಷಕರು ನೋಡಲೇ ಬೇಕಾದ ಸ್ಟೋರಿ ಇಲ್ಲಿದೆ ನೋಡಿ. ಈ ದೃಶ್ಯ ನೋಡಿದ್ರೆ ನಿಜವಾಗ್ಲೂ ಕರುಳು ಚುರಕ್ ಅನ್ನದೇ ಇರೋದಿಲ್ಲ. ಇದೇನು ದೊಡ್ಡವರು ಮಾಡಿರೋ ತಪ್ಪು ಅಲ್ಲ. ಸಣ್ಣ ಮಗು ಇನ್ನೊಂದು ಸಣ್ಣ ಮಗುವಿಗೆ ಹೊಡೆದಿರೋ ದೃಶ್ಯವಾಗಿದೆ.
undefined
ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: 1, 2ನೇ ಕ್ಲಾಸ್ ಮಕ್ಕಳ ಬ್ಯಾಗ್ ತೂಕ 2 ಕೆಜಿ, ಸರ್ಕಾರದ ಸುತ್ತೋಲೆ
ಮಕ್ಕಳನ್ನು ಬಿಡೋ ಪೋಷಕರೇ ಎಚ್ಚರ: ಇಲ್ಲಿ ಮಗುವಿನ ತಪ್ಪು ಅಲ್ಲವೇ ಅಲ್ಲ. ಡೇ ಕೇರ್ ಸೆಂಟರ್ ಅನ್ನು ನಂಬಿಕೊಂಡು ಮಕ್ಕಳನ್ನು ಬಿಡೋ ಪೋಷಕರಿಗೆ ಎಚ್ಚರವಹಿಸಬೇಕಿದೆ. ಚಿಕ್ಕಲಸಂದ್ರದಲ್ಲಿ ಇರೋ ಟೆಂಡರ್ ಫೂಟ್ ಡೇ ಕೇರ್ ಸೆಂಟರ್ ನಲ್ಲಿ ನಡೆದಿರೋ ಘಟನೆಯಾಗಿದೆ. ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ತಾ ಇದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗ್ತಾರೆ. ಆಗ ರೂಮಿನಿಂದ ಹೊರಗೆ ಹೋಗೋದಕ್ಕೆ ಒದ್ದಾಡ್ತಾ ಇರ್ತಾವೆ. ಈ ಸಂದರ್ಭದಲ್ಲಿ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದಿರೊ ದೃಶ್ಯ ವೈರಲ್ ಆಗುತ್ತಿದೆ.
ಮೂರ್ನಾಲ್ಕು ನಿಮಿಷ ಹೊಡೆದರೂ ಬಾರದ ಸಿಬ್ಬಂದಿ: ಸುಮಾರು ಮೂರು ನಾಲ್ಕು ನಿಮಿಷ ಹೊಡೆದರೂ ಮಕ್ಕಳನ್ನ ನೋಡಿಕೊಳ್ಳಲು ಅಲ್ಲಿಗೆ ಯಾರು ಬರೋದೆ ಇಲ್ಲ. ಮಕ್ಕಳು ಹೊಡೆದಾಡಿಕೊಳ್ಳುವ ಬಗ್ಗೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಉಳಿದ ಮಕ್ಕಳು ಹೇಳಿದರೂ ಅದನ್ನು ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಹೀಗಾಗಿ, ಸ್ವಲ್ಪ ದೊಡ್ಡದಾದ ಮಗು ಚಿಕ್ಕ ಮಗುವನ್ನು ಚೆನ್ನಾ ಒದೆಯುವುದು, ಹೊಡೆಯುವುದು, ಕಚ್ಚುವುದು ಹಾಗೂ ನಿಂತುಕೊಳ್ಳುತ್ತಿದ್ದಂತೆ ತಳ್ಳುವ ಕಾರ್ಯವನ್ನು ಮಾಡುತ್ತಿದೆ, ಇದರಿಂದ ಗಾಯಗೊಂಡು ಮನೆಗೆ ಹೋದ ಮಗುವಿನ ಪೋಷಕರು ಬಂದು ಡೇ ಕೇರ್ ಸೆಂಟರ್‌ನ ಸಿಸಿಟಿವಿ ಫೂಟೇಜ್ ನೋಡಿದ ನಂತರ ಪೋಷಕರು ಡೇ ಕೇರ್ ಸೆಂಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಪೆ ಕಡಲ ತೀರದ ಗಂಗೆ ಕೂದಲಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು!
ಟ್ವಿಟರ್ ಮೂಲಕ ಪೊಲೀಸರಿಗೆ ದೂರು: ಇನ್ನು ಡೇ ಕೇರ್ ಸೆಂಟರ್ ಮಾಲೀಕರು ಮತ್ತು ಸಿಬ್ಬಂದಿ ಕೇವಲ ಹಣವನ್ನು ಪಡೆದು ವಂಚನೆ ಮಾಡುತ್ತಿದ್ದು, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪೋಷಕರು ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ನಗರ ಪೊಲೀಸರಿಂದ ಸೂಚನೆ ನೀಡಲಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.
We received a disturbing video of a preschool where toddlers are left unattended in a closed room. A senior kid is seen hitting repeatedly a junior school. The school's name is Tenderfoot, Chikkalasandra, Bengaluru- 560061. Please don’t send your kid there! 🙏🏻 pic.twitter.com/IeGsj2M9b2
— Citizens Movement, East Bengaluru (@east_bengaluru)