ನಗರದ ಒಂಟಿ ಮಹಿಳೆ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ತಾಯಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಅಬ್ಬಲಗೆರೆ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ (ಜೂ.22) : ನಗರದ ಒಂಟಿ ಮಹಿಳೆ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ತಾಯಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಅಬ್ಬಲಗೆರೆ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಸೀತಾ ಬಾಯಿ (50) ಆತ್ಮಹತ್ಯೆಗೆ ಮುಂದಾದವರು. ಇದೇ ಜೂನ್ 17ರಂದು ಶಿವಮೊಗ್ಗದ ವಿಜಯನಗರದಲ್ಲಿ ಕಮಲಮ್ಮ (55) ಎಂಬುವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಕಾರು ಚಾಲಕ ಹನುಮಂತ ನಾಯ್ಕ ನಾಪತ್ತೆಯಾಗಿದ್ದ. ಕಮಲಮ್ಮ ನವರನ್ನು ಕೊಲೆಗೈದು ಸುಮಾರು 35 ಲಕ್ಷ ರೂ. ಹಣವನ್ನು ದೋಚಲಾಗಿತ್ತು ಈ ಹಿನ್ನೆಲೆಯಲ್ಲಿ ಕೊಲೆಗಾರನ ಸುಳಿವು ಪಡೆದ ಶಿವಮೊಗ್ಗದ ತುಂಗಾನಗರ ಪೊಲೀಸರು ಆರೋಪಿ ಹನುಮಂತ ನಾಯ್ಕ ನ ಬೆನ್ನು ಬಿದ್ದಿದ್ದರು.
ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ ₹20 ಸಾವಿರ ದಂಡ ವಿಧಿಸಿದ ಕೋರ್ಟ್!
ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮಗ ಹನುಮಂತ ನಾಯ್ಕ , ಪತಿ ರೂಪ್ಲಾ ನಾಯ್ಕ ಇಬ್ಬರು ಮನೆ ಬಿಟ್ಟು ಪರಾರಿಯಾಗಿದ್ದರು, ಇದರಿಂದ ಮನನೊಂದ ಸೀತಾಬಾಯಿ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ,
ಇಂದು ಬೆಳಗ್ಗೆ 10ಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಸೀತಾಬಾಯಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿರುವ ಸಂಬಂಧಿಕರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ(Meggan hospital shivamogga)ಯಲ್ಲಿ ಸೀತಾ ಬಾಯಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸದ್ಯ ಐಸಿಯು ನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು. ಪ್ರಾಣಪಾಯದಿಂದ ಸೀತಾಬಾಯಿ ಪಾರಾಗಿದ್ದಾರೆ.
ಕಾರು ಚಾಲಕನ ಕೆಲಸ ಕೊಟ್ಟ ಮಾಲೀಕನ ಪತ್ನಿಯನ್ನು ತನ್ನ ಮಗ ಕೊಲೆ ಮಾಡಿದ್ದಕ್ಕೆ ಬೇಸರಗೊಂಡಿದ್ದ ಸೀತಾಬಾಯಿ. ಅನ್ನ ಕೊಟ್ಟ ಮನೆಗೆ ಕನ್ನ ಹಾಕಿದ್ದಲ್ಲದೆ ಮಾಲೀಕನ ಪತ್ನಿಯನ್ನು ಕೊಲೆ ಮಾಡಿದ್ದಕ್ಕೆ ನೊಂದುಕೊಂಡಿದ್ದ ಸೀತಾಬಾಯಿ. ಪೊಲೀಸರು ಬೆನ್ನು ಬೀಳುತ್ತಿದ್ದಂತೆ ಮಗ, ಪತಿ ಎಲ್ಲರೂ ಪರಾರಿಯಾಗಿ ಸೀತಾಬಾಯಿಯನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದರು. ಇಂಥ ಮಕ್ಕಳಿಂದ ಹೆತ್ತವರು ತಲೆತಗ್ಗಿಸುವಂತಾಗಿದೆ.
ಮಹಿಳೆ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ; ನಗದು ಹಣ ದೋಚಿದ ದುಷ್ಕರ್ಮಿಗಳು