* ಪತ್ನಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿ
* ಮಾ.10ರಂದು ಗದಗನಲ್ಲಿ ನಡೆದಿದ್ದ ಘಟನೆ
* ಮಚ್ಚಿನಿಂದ ಹಲ್ಲೆ ಮಾಡಿದ ಕಿರಾತಕ ಪತಿಯ ಮುಖವಾಡ ಬಿಚ್ಚಿಟ್ಟ ಪತ್ನಿ
*
ಗದಗ, (ಮಾ.13): ಇಪ್ಪತ್ಮೂರು ಬಾರಿ ಮಚ್ಚಿನಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಅಪೂರ್ವ ತನ್ನ ಕಿರಾತಕ ಪತಿಯ ಮುಖವಾಡವನ್ನು ಮಹಿಳಾ ಸಂಘಟನೆ ಎದುರು ಬಿಚ್ಚಿಟ್ಟಿದ್ದಾಳೆ.
ಮಾ.10ರಂದು ಸ್ಕೂಟಿ ಕಲಿಯುವಾಗ ಅಪೂರ್ವ ಪುರಾಣಿಕ್ ಮೇಲೆ ಈಕೆಯ ಪತಿ ಇಜಾಜ್ ಶಿರೂರ್ ದಾಳಿ ನಡೆಸಿದ್ದ.ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು,ಕೊಂಚ ಚೇತರಿಸಿಕೊಂಡಿದ್ದಾರೆ.
undefined
ಇಜಾಜ್ ಜೈಲಿನಿಂದ ಹೊರಬಂದ್ರೆ ಕೊಚ್ಚಿ ಹಾಕುತ್ತೇವೆ ಎಂದ ಪ್ರಮೋದ್ ಮುತಾಲಿಕ್
ಇನ್ನು ಅಪೂರ್ವ ಇಂದು(ಭಾಣುವಾರ) ಆಸ್ಪತ್ರೆಯಲ್ಲೇ ಮಹಿಳಾ ಸಂಘಟನೆ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆವು. ಅವನಿಗೆ ಮೊದಲೇ ಮದುವೆಯಾಗಿದ್ದು, ನನಗೆ ಗೊತ್ತಿರಲಿಲ್ಲ. ನನಗೂ ಮೋಸ ಮಾಡಿ, ಅವನ ಹೆಂಡತಿಗೂ ಮೋಸ ಮಾಡಿದ್ದಾನೆ. ಅವನು ಬದುಕಲು ಯೋಗ್ಯನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ನಮ್ಮ ತಾಯಿ ಅವನಿಗೆ ಮದುವೆಯಾಗಿದೆ ಎಂದು ಹೇಳಿದ್ದರು. ಆ ನಡುವೆ ಆತನ ಹೆಂಡತಿ ಬಂದು ಭೇಟಿಯಾಗಿದ್ದಳು. ಆದರೆ, ಆಕೆ ನನ್ನ ಹೆಂಡತಿ ಅಲ್ಲ. ಆಕೆ ಸುಳ್ಳು ಹೇಳಿದ್ದಾಳೆ ಎಂದು ನಂಬಿಸಿದ್ದ.ಸಣ್ಣ ಕಾರಣಕ್ಕೂ ನನ್ನನ್ನು ಹೊಡೆಯುವುದು, ಬಡಿದು ಮಾನಸಿಕ ಕಿರುಕುಳ ನೀಡುತ್ತಿದ್ದ.
ಲವ್ ಮ್ಯಾರೇಜ್, ಪತ್ನಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿ..!
ಕೆಟ್ಟ ಕೆಟ್ಟ ಪದಗಳಿಂದ ಬೈಯ್ಯುತ್ತಿದ್ದು, ಈಕೆಗೆ ಯಾರೂ ಗತಿ ಇಲ್ಲ ಎಂದು ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ಅಳಲು ತೋಡಿಕೊಂಡರು. ನನಗೆ ಅಷ್ಟ ಪ್ರಪಂಚ ಜ್ಞಾನ ಇರಲಿಲ್ಲ. ಹೀಗಾಗಿ ಇಂತ ನೀಚನನ್ನು ಮದುವೆಯಾಗಬೇಕಾಯಿತು. ಈಗ ಅದರ ಅರಿವಾಗಿದೆ ಎಂದು ಅಪೂರ್ವ ನೋವು ತೋಡಿಕೊಂಡಿದ್ದಾರೆ.
ಇಜಾಜ್ ಜೈಲಿನಿಂದ ಹೊರಬಂದ್ರೆ ಕೊಚ್ಚಿ ಹಾಕುತ್ತೇವೆ ಎಂದಿರು ಮುತಾಲಿಕ್
ಗದಗದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವನ ವಿರುದ್ದ ಡಮ್ಮಿ ಕೇಸ್ ಹಾಕಿ,ಆತ ಏನಾದರು, ಜೈಲಿನಿಂದ ಹೊರಬಂದರೆ, ಆತನನ್ನು ಕೊಚ್ಚಿ ಹಾಕುತ್ತೇವೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪತಿಯಿಂದ ಹಲ್ಲೆಗೊಳಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಮಹಿಳೆಯ ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಲವ್ ಜಿಹಾದ್ ಪ್ರಕರಣಕ್ಕೆ ಉತ್ತಮ ಉದಾಹರಣೆಯಾಗಿದೆ. ತನ್ನ ಪ್ರಿಯತಮ ಇಜಾಜ್ ಶಿರೂರನನ್ನು 2018 ರಂದು ಮದುವೆಯಾಗಿದ್ದಾರೆನ್ನಲಾಗಿದ್ದು ಹಿಂದೂ ಧರ್ಮದ ಮಹಿಳೆಯನ್ನು ಎರಡು ದಿನಗಳ ಹಿಂದೆ ಗದಗ ಪಟ್ಟಣದಲ್ಲಿ ಮಚ್ಚಿನಿಂದ 23 ಬಾರಿ ಮನಬಂದಂತೆ ಹಲ್ಲೆ ಮಾಡಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಮದುವೆಯಾದ ಮಹಿಳೆಯನ್ನು ಮತಾಂತರ ಮಾಡಿ, ಅರ್ಫಾ ಬಾನು ಎಂದ ಬದಲಿಸಿದ್ದ ಮಾತ್ರವಲ್ಲದೆ ಇವರ ದಾಂಪತ್ಯದ ಸಾಕ್ಷಿಯಾಗಿ ಮಗು ಕೂಡಾ ಇದೆ. ಮದುವೆಯಾಗಿ ಮೂವರು ಮಕ್ಕಳು ಇದ್ದರೂ ಕೂಡಾ ಹಿಂದೂ ಮಹಿಳೆಯನ್ನು ಪ್ರೀತಿಸಿ ಬ್ಲ್ಯಾಕ್ ಮೇಲ್ ಮಾಡಿ ಮದುವೆ ಮಾಡಿಕೊಂಡಿದ್ದ. ಹಾಗಾಗಿ ಇಜಾಜ್ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಮುತಾಲಿಕ್ ಒತ್ತಾಯಿಸಿದ್ದಾರೆ.
ಇಜಾಜ್ ಹಾಗೂ ಅರ್ಫಾ ಬಾನುವಿಗೆ ಪ್ರೀತಿಯ ಫಲವಾಗಿ ಒಂದು ಮಗುವೂ ಇದೆ. ವಿಚ್ಚೇದನ ಅರ್ಜಿ ಸಲ್ಲಿಸಿದ್ದ ದಿನದಿಂದ ತವರು ಮನೆಯಲ್ಲಿ ವಾಸವಾಗಿದ್ದಳು. ವಿಚ್ಛೇದನ ಅರ್ಜಿಯಿಂದ ಕುಪಿತಗೊಂಡ ಇಜಾಜ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ವಿಷಯವನ್ನೆ ಮನಸ್ಸಿನಲ್ಲಿಟ್ಟಿದ್ದ ಇಜಾಜ್ ಎರಡು ದಿನಗಳ ಹಿಂದೆ ಗದಗ ನಗರದಲ್ಲಿ ಅರ್ಫಾ ಬಾನು ಸ್ಕೂಟಿ ಕಲಿಯುವ ಸಂದರ್ಭದಲ್ಲಿ ಮಚ್ಚಿನಿಂದ ಕೊಚ್ಚಿ ಮಾರಣಾಂತಿ ಕವಾಗಿ ಮನಬಂದಂತೆ ಇರಿದಿದ್ದು, ಅಲ್ಲಿ ನೆರದಿದ್ದ ಸಾರ್ವಜನಿಕರು ಕಕ್ಕಾಬಿಕ್ಕಿಗೊಡ ಘಟನೆ ನಡೆಯಿತು. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆ ಸದ್ಯ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.