Greater Noida ಕುಡಿಯೋದ್ ಬಿಡು ಎಂದಿದ್ದಕ್ಕೆ ಅಕ್ಕನಿಗೆ ಗುಂಡಿಕ್ಕಿ ಕೊಂದ!

By Suvarna NewsFirst Published Mar 13, 2022, 4:41 PM IST
Highlights

ಅತಿಯಾಗಿ ಕುಡಿಯುತ್ತಿದ್ದ ತಮ್ಮ

ಕುಡಿತ ಬಿಡು ಎಂದು ಪದೇ ಪದೇ ಹೇಳುತ್ತಿದ್ದ ಅಕ್ಕ

ಅಕ್ಕನನ್ನೇ ಗುಂಡಿಕ್ಕಿ ಕೊಲೆ ಮಾಡಿದ 20 ವರ್ಷದ ಹುಡುಗ

ಗ್ರೇಟರ್ ನೋಯ್ಡಾ (ಮಾ. 13): ಅತಿಯಾಗಿ ಮದ್ಯಸೇವನೆ (drinking habits) ಮಾಡುತ್ತಿದ್ದ ತಮ್ಮನಿಗೆ (Brother) ಅಕ್ಕ ಹೇಳುತ್ತಿದ್ದ ಬುದ್ಧಿಮಾತುಗಳೇ ಆಕೆಯ ಪ್ರಾಣಕ್ಕೆ ಕುತ್ತು ತಂದ ಘಟನೆ ಶನಿವಾರ ನವದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ (Greater Noid) ನಡೆದಿದೆ. ಕುಡಿತದ ಚಟವನ್ನು ವಿರೋಧಿಸಿದ್ದಕ್ಕೆ 32 ವರ್ಷದ ಸಹೋದರಿಯನ್ನು ಗುಂಡಿಟ್ಟು ಕೊಂದ ಆರೋಪದ ಮೇಲೆ ರೋಜಾ ಜಲಾಲ್‌ಪುರ (roja jalalpur) ನಿವಾಸಿಯೊಬ್ಬರನ್ನು ಶನಿವಾರ ಬಂಧಿಸಲಾಗಿದೆ. ಪೊಲೀಸರು ಅಪರಾಧಕ್ಕೆ ಬಳಸಿದ್ದ ದೇಶ ನಿರ್ಮಿತ ಪಿಸ್ತೂಲ್ (country-made pistol ) ವಶಪಡಿಸಿಕೊಂಡಿದ್ದಾರೆ.

ಶನಿವಾರ ಬೆಳಗ್ಗೆ 12 ಗಂಟೆ ಸುಮಾರಿಗೆ ಡಯಲ್ 112 ಸಹಾಯವಾಣಿಗೆ ಕರೆ ಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸೆಂಟ್ರಲ್ ನೋಯ್ಡಾ) ಯೋಗೇಂದ್ರ ಸಿಂಗ್ (Assistant commissioner of police (Central Noida) Yogendra Singh) ಹೇಳಿದ್ದಾರೆ. ಕುಡಿತದ ಚಟಕ್ಕೆ ಜಗಳವಾಗಿ ರುಚಿ (Ruchi)  ಎಂಬ ಮಹಿಳೆ ಮೇಲೆ ಆತನ ಸಹೋದರ ಸೂರಜ್ ( Suraj ) ಗುಂಡು ಹಾರಿಸಿದ್ದಾನೆ ಎಂದು ಕರೆ ಮಾಡಿದವರು ತಿಳಿಸಿದ್ದಾರೆ. "ಅಪರಾಧದ ನಂತರ ಆರೋಪಿ ಸೂರಜ್, 21, ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಕರೆ ಮಾಡಿದವರು ನಮಗೆ ತಿಳಿಸಿದ್ದರಯ" ಎಂದು ಸಿಂಗ್ ಹೇಳಿದ್ದಾರೆ. ಘಟನೆಯ ನಂತರ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರಾದರೂ ಆಕೆ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಕುಡಿತದ ಅಮಲಿನಲ್ಲಿಯೇ ಶುಕ್ರವಾರ ಸಂಜೆ ಸೂರಜ್ ಮನೆಗೆ ಬಂದಿದ್ದ. ಆ ಬಳಿಕ ಮನೆಯಲ್ಲಿಯೇ ಹಲವು ಬಾರಿ ವಾಂತಿ ಮಾಡಿಕೊಂಡಿದ್ದ ಎಂದು ರುಚಿ ಅವರ ಕುಟುಂಬ ಹೇಳಿಕೊಂಡಿದೆ. ಪದೇಪದೇ ಕುಡಿದು ಮನೆಗೆ ಬರುತ್ತಿದ್ದ ಕಾರಣಕ್ಕೆ ಆತನನ್ನು ಗದರಿಸುತ್ತಿದ್ದೆ ಎಂದು ರುಚಿ ಹೇಳುತ್ತಿದ್ದಳು. ಶುಕ್ರವಾರ ರಾತ್ರಿ ಕೂಡ ಇದೇ ರೀತಿಯಲ್ಲಿ ಸೂರಜ್ ಎಚ್ಚರಿಕೆ ನೀಡಿದ್ದಾಳೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಕೋಪದ ಭರದಲ್ಲಿ ಸೂರಜ್ ತನ್ನಲ್ಲಿದ್ದ ಗನ್ ತೆಗೆದು ರುಚಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಎಸಿಪಿ ತಿಳಿಸಿದ್ದಾರೆ.

Suicide Cases: ತಾಯಿ ಬೈದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಗ
ಶನಿವಾರ ಮಧ್ಯಾಹ್ನ ಸಿಕ್ಕ ಸುಳಿವಿನ ಅಧಾರದಲ್ಲಿ ಗ್ರೇಟರ್ ನೋಯ್ಡಾದ ಶಹಬೆರಿ ಪ್ರದೇಶದಿಂದ 21 ವರ್ಷದ ಯುವಕನನ್ನು ಬಂಧಿಸಲಾಯಿತು. ಆತನ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. “ನಾವು 32 ಬೋರ್ ಕಂಟ್ರಿ ನಿರ್ಮಿತ ಪಿಸ್ತೂಲ್ ( 32 bore country-made pistol ) ಮತ್ತು ಲೈವ್ ಕಾರ್ಟ್ರಿಡ್ಜ್  (  Live Cartridge )  ಮತ್ತು ಎರಡು ಮ್ಯಾಗಜೀನ್‌ಗಳನ್ನು (Two Magazines ) ವಶಪಡಿಸಿಕೊಂಡಿದ್ದೇವೆ. ಸೂರಜ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Gadag Crime: ಹೆಂಡ್ತಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಇಜಾಜ್‌ ಅರೆಸ್ಟ್‌
ಇನ್ನೊಂದೆಡೆ ಬೆಂಗಳೂರಿನಲ್ಲಿ ನಡೆದ ಪ್ರಕರಣವೊಂದರಲ್ಲಿ ಬೈಕ್ ಸವಾರನೊಬ್ಬ ಮದ್ಯಪಾನ ಮಾಡಿ ಟ್ರಾಫಿಕ್(Traffic Police) ಎಎಸ್‌ಐಗೆ ಗುದ್ದಿದ ಘಟನೆ ನಗರದ ಪೀಣ್ಯ ಫ್ಲೈ ಓವರ್ ಬಳಿ ನಡೆದಿದೆ. ಪ್ಲೈ ಓವರ್ ಕ್ಲೋಸ್ ಇದ್ದಿದ್ದು ತಿಳಿಯದೇ ವೇಗವಾಗಿ ಬಂದು ಕರ್ತವ್ಯದಲ್ಲಿದ್ದ ಎಎಸ್‌ಐ ರಾಜಶೇಖರಯ್ಯ ಅವರಿಗೆ ಗುದ್ದಿದ್ದಾನೆ.  ಅತನನ್ನ ನಿಲ್ಲಿಸಲು ಹೋದಾಗ ಎಎಸ್‌ಐ ರಾಜಶೇಖರಯ್ಯ ಬೈಕ್ ಡಿಕ್ಕಿ ಹೊಡೆದಿದೆ. ಎಎಸ್‌ಐ ರಾಜಶೇಖರಯ್ಯ ಅವರ ಕೈಗೆ ಗಂಭೀರವಾದ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ರಾಜಶೇಖರಯ್ಯಗೆ ಚಿಕಿತ್ಸೆ(Treatment) ಕೊಡಿಸಲಾಗುತ್ತಿದೆ. ಯಶವಂತಪುರ ಸಂಚಾರ ಪೊಲೀಸರು(Police) ಬೈಕ್ ಸವಾರನನ್ನ ವಶಕ್ಕೆ ಪಡೆದಿದ್ದಾರೆ. 

click me!