ಅತ್ತೆ ಆಧಾರ್‌ ಕಾರ್ಡ್ ಬಳಸಿ ಚಿನ್ನಾಭರಣ ಪಡೆದುಕೊಂಡ ಸೊಸೆ!

By Suvarna NewsFirst Published Mar 31, 2021, 3:43 PM IST
Highlights

ಸೊಸೆ ವಿರುದ್ಧ ದೂರು ದಾಖಲಿಸಿದ ಅತ್ತೆ/ ನನ್ನ ಆಧಾರ್ ಕಾರ್ಡ್ ದುರುಪಯೋಗ ಮಾಡಿಕೊಳ್ಳಲಾಗಿದೆ/ ನನ್ನ ಆಧಾರ್ ಕಾರ್ಡ್ ನೀಡಿ ಮಗನಿಂದ ಬೇರೆಯಾಗಿದ್ದ ಸೊಸೆ ಹಣ ಪಡೆದುಕೊಂಡಿದ್ದಾಳೆ.

ಬೆಂಗಳೂರು(ಮಾ.  31)  ತನ್ನ ಆಧಾರ್ ಕಾರ್ಡ್ ಬಳಸಿಕೊಂಡು ಚಿನ್ನ ಖರೀದಿ ಮಾಡಲಾಗಿದೆ ಎಂದು ಅತ್ತೆ ಸೊಸೆ ಮತ್ತು ಆಭರಣದ ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಾರೆ.

ಬೆಂಗಳೂರು  ಉದಯನಗರ ನಿವಾಸಿ 56 ವರ್ಷದ ಮಹಿಳೆ ತನ್ನ ಸೊಸೆ ಮತ್ತು ಆಭರಣ ವ್ಯಾಪಾರಿ ವಿರುದ್ಧ ಮಂಗಳವಾರ ದೂರು ದಾಖಲಿಸಿದ್ದಾರೆ. 

ಅಂಗಡಿಯಿಂದ 80 ಗ್ರಾಂ ಚಿನ್ನ ಪಡೆಯಲು ಇಬ್ಬರೂ ಆಧಾರ್ ಕಾರ್ಡ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವೃದ್ಧೆ ಆರೋಪಿಸಿದ್ದಾರೆ. ಸೊಸೆ ನನ್ನ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ಆರೋಪಿಸಿದ್ದಾಳೆ. ಮಹಿಳೆ ತನ್ನ ಸೊಸೆ  ಅಲೆಖ್ಯಾ ಮತ್ತು ಆಭರಣ ಅಂಗಡಿ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ.

ಗಂಡನ ಆಭರಣದೊಂದಿದಿಗೆ ವಧು ಮದುವೆ ದಿನವೇ ಪರಾರಿ

ತನ್ನ ಮಗನಿಂದ ಒಂದೂವರೆ ವರ್ಷದ ಹಿಂದೆ  ಸೊಸೆ ಮಗನಿಂದ ಬೇರೆಯಾಗಿದ್ದಳು.  ಇಲ್ಲಿಂದ ತನ್ನ ತವರು  ಆಂಧ್ರ ಪ್ರದೇಶಕ್ಕೆ ತೆರಳಿದ್ದಳು ಎಂದು ಅತ್ತೆ ಗೀತಾ (ಹೆಸರು ಬದಲಾಯಿಸಲಾಗಿದೆ) ಆರೋಪಿಸಿದ್ದಾಳೆ.

ಆಂಧ್ರದ ಅಂಗಡಿ ಒಂದಕ್ಕೆ ತೆರಳಿ ನನ್ನ ಆಧಾರ್ ಕಾರ್ಡ್ ಕಾಪಿ ಕೊಟ್ಟಿದ್ದು ಅಲ್ಲದೇ ನನಗೆ ಹುಷಾರಿಲ್ಲ ಎಂದು ಸುಳ್ಳು ಹೇಳಿ ಆಭರಣ ಪಡೆದುಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಆಕೆಯೊಂದಿಗೆ ಮಾತನಾಡಲು ಯತ್ನಿಸಿದರೆ  ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಮೂರು ಲಕ್ಷ ಬೆಲೆ ಬಾಳುವ ಆಭರಣವನ್ನು ಮಾಲೀಕ ಸೊಸೆ ಕೈಗೆ ಕೊಟ್ಟ ಮಾಹಿತಿ ಇದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

click me!