* ದುರಂತ ಅಂತ್ಯ ಕಂಡ ಮಹಿಳೆ
* ಈ ಸಾವಿಗೆ ಯಾರು ಕಾರಣ?
* ಸಿಜರಿಯನ್ ಡಿಲೆವರಿ ಮಾಡಿಸಿದ್ದೇ ತಪ್ಪಾಯಿತಾ?
* ತಾಲೂಕು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವಾ?
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ :
ಧಾರವಾಡ (ಏ.06) ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿ (Marriage) ಜೀವನ ಮಾಡಬೇಕಿದ್ದ ಆ ಯುವತಿ ಇಂದು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದ್ದಾರೆ..ಇನ್ನು ಕುಟುಂಬಸ್ಥರು ಕೂಡಾ ವೈದ್ಯರ (Doctor) ನಿರ್ಲಕ್ಷಕ್ಕೆ ನಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಸವದತ್ತಿ (Savadatti) ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ,
ಬೆಳಗಾವಿ ಜಿಲ್ಲೆಯ ಸವದತ್ತಿಯ ವಿದ್ಯಾ ಸುರೇಶ ಬೆಣಚನಗೇರಿ ಎಂಬುವರನ್ನು ನವಲಗುಂದ(Navalagunda)ತಾಲೂಕಿನ ಸುರೇಶ ಕಳೆದ ಒಂದು ವರ್ಷದ ಹಿಂದೆ ಮುದುವೆಯಾಗಿದ್ದರು. ದಾಂಪತ್ಯ ಜೀವನ ಆರಂಭವಾಗಿತ್ತು.
SSLC ಪರೀಕ್ಷೆ ವೇಳೆ ವಿದ್ಯಾರ್ಥಿನಿ ಸಾವು; ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳೋದೇನು?
ಕಳೆದ ಮೂರು ದಿನಗಳ ಹಿಂದೆ ಸವದತ್ತಿ ತಾಲೂಕು (Taluk Hospital) ಆಸ್ಪತ್ರೆ ಯಲ್ಲಿ ವಿದ್ಯಾಳಿಗೆ ಡಿಲೆವರಿ ಆಗಿದೆ. ಸಿಜರಿನ್ ಮೂಲಕ ಹೆರಿಗೆ ಆಗಿದೆ. ಬೆಳಗ್ಗೆ ಏಕಾಏಕಿ ವಿದ್ಯಾಳಿಗೆ ಉಸಿರಾಟದ ತೊಂದರೆಯಾದಾಗ ಅಲ್ಲಿನ ವೈದ್ಯರಾದ ಡಾ. ವೀಣಾ ವಿದ್ಯಾಳನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ಅಂಬುಲೈನ್ಸ್ ನಲ್ಲಿ ರವಾನೆ ಮಾಡಿದ್ದಾರೆ. ಆಂಬುಲೈನ್ಸ್ ನಲ್ಲಿ ಆಕ್ಸಿಜನ್ ಇಲ್ಲದ ಕಾರಣಕ್ಕೆ ಉಸಿರಾಟದ ತೊಂದರೆಯಿಂದ ಧಾರವಾಡ ಸಮಿಪಿಸುತ್ತಿದ್ದಂತೆ ಸಾವನ್ನಪ್ಪಿದ್ದಾಳೆ.
ಬಳಿಕ ಜಿಲ್ಲಾಸ್ಪತ್ರೆಯಿಂದ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ, ಆದರೆ ಅವಳು ಆಂಬುಲೈನ್ಸ್ ನಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.ಇನ್ನು ಆಸ್ಪತ್ರೆಯ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮ ಮಗಳ ಸಾವಿಗೆ ಸವದತ್ತಿ ತಾಲೂಕಾ ಆಸ್ಪತ್ರೆಯ ವೈದ್ಯರು ಕಾರಣ ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ವೈದ್ಯ ನಾರಾಯಣ ಹರಿಯೋ ಅಂತಾರೆ ಬದುಕಿ ಬಾಳಿ ಬದುಕಬೇಕಾದ ವಿದ್ಯಾಳ ಬಾಳಲ್ಲಿ ವೈದ್ಯರೆ ವಿಲನ್ ಆದಂತೆ ಇದೆ. ಕುರಿತು ವಿದ್ಯಾಳ ಸಂಬಂಧಿಕರು ಸವದತ್ತಿ ಪೋಲಿಸ್ ಠಾಣೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಸಾವನ್ನಪ್ಪಿದ್ದಾಳೆ ಎಂದು ದೂರು ದಾಖಲು ಮಾಡಲು ಮುಂದಾಗಿದ್ದಾರೆ. ಇನ್ನಾದರೂ ಪೋಲಿಸರು ಸಂಬಂಧಪಟ್ಟವರ ಮೆಲೆ ಕ್ರಮವನ್ನ ಆಗುವಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕಿದೆ.
ಕ್ರಿಕೆಟ್ ಆಡುವಾಗಲೆ ಬಂದೆರಗಿದ ಸಾವು: ಕ್ರಿಕೆಟ್ ಆಡುವ ವೇಳೆ ಹೃದಯಾಘಾತವಾಗಿ ಮುನ್ನಾ ಇರ್ಕಲ್ ಕೊನೆ ಉಸಿರು ಎಳೆದಿದ್ದರು ಧಾರವಾಡದಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ ಕ್ರಿಕೆಟ್ ಆಡುವಾಗ ಮುನ್ನಾ ಇರ್ಕಲ್‌ಗೆ ಹೃದಯಾಘಾತ ಇಹಲೋಕ ತ್ಯಜಿಸಿದ್ದಾನೆ. ಮೃತ ಮುನ್ನಾ ಇರ್ಕಲ್ ನಗರದ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಯಾಗಿದ್ದ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಾವು: ಲವಲವಿಕೆಯಿಂದ ಪರೀಕ್ಷೆಗೆ ತೆರಳಿದ್ದ ಮಗಳು ಇದ್ದಕ್ಕಿದ್ದಂತೆ ಸಾವಿಗೀಡಾದ ದುಖಃ ತಾಯಿ ಜೀವವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಗಳು ತೀರಿಕೊಂಡ ನೋವು ಮರೆಯಾಗಿಲ್ಲ. ಜೀವ ಶಿಕ್ಷಕರ ಅಜಾಗರೂಕತೆಯೇ ಮಗಳ ಸಾವಿಗೆ ನಾಂದಿ ಎನ್ನುತ್ತಿದೆ. ಇದು ಮೈಸೂರಿನ ಪ್ರಕರಣ.
ತಿ.ನರಸೀಪುರ ತಾಲೂಕಿನ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಂದಿದ ಅನುಶ್ರೀ ತಪ್ಪಾದ ಜಾಗದಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದಳು. ಪರೀಕ್ಷೆ ಆರಂಭವಾದ ಅರ್ಧ ಗಂಟೆ ನಂತರ ಅದನ್ನ ಗಮನಿಸಿದ ಕೊಠಡಿ ಮೇಲ್ವಿಚಾರಕ ಕಿರಣ್ ಅನುಶ್ರೀ ಕುಳಿತಿದ್ದ ಜಾಗದಲ್ಲಿ ಬೇರೊಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಿದ್ದು, ಆತ ಗೈರು ಎಂದು ತಿಳಿಸಿದ್ದರು. ಅಲ್ಲದೆ ಅನುಶ್ರೀ ಮತ್ತೊಂದು ಕಟ್ಟಡದಲ್ಲಿ ಪರೀಕ್ಷೆ ಬರೆಯಬೇಕಿದ್ದು ಅಲ್ಲಿಗೆ ಆಕೆಯನ್ನು ತರಾತುರಿಯಲ್ಲಿ ಕಳುಹಿಸಿದ್ದರು. ಈ ವೇಳೆ ಮೆಟ್ಟಿಲು ಇಳಿಯುವಾಗ ವಿದ್ಯಾರ್ಥಿನಿ ಅನುಶ್ರೀ ಕುಸಿದು ಬಿದ್ದಿದ್ದಳು. ಆಕೆಯನ್ನು ತಿ.ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅನುಶ್ರೀ ಸಾವನಪ್ಪಿದ್ದಳು.