ನಗರದ ಚಾಮರಾಜಪೇಟೆ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಿಂದ ಕಳವು ಆಗಿದ್ದ ಮಗು 21 ದಿನಗಳ ನಂತರ ಪತ್ತೆಯಾಗಿದೆ.
ದಾವಣಗೆರೆ (ಏ.06): ನಗರದ ಚಾಮರಾಜಪೇಟೆ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಿಂದ ಕಳವು ಆಗಿದ್ದ ಮಗು 21 ದಿನಗಳ ನಂತರ ಪತ್ತೆಯಾಗಿದೆ.
ಮಗು ಸಿಕ್ಕಿದ್ದು ಹೇಗೆ: ದಾವಣಗೆರೆ ಎಸಿ ಕಚೇರಿ ಮುಂಭಾಗ ಹರಿಹರಕ್ಕೆ ತೆರಳುವ ಬಸ್ ನಿಲ್ದಾಣದ ಬಳಿ ಬುರ್ಕಾದಾರಿ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಬಂದು ಅಂಗಡಿ ಬಳಿ ಕೂತಿದ್ದಾಳೆ. ಅಂಗಡಿಯಲ್ಲಿದ್ದ ವೃದ್ಧೆ ಬಳಿ ಮಗುವನ್ನು ಬಿಟ್ಟು ಇಲ್ಲೇ ಶೌಚಾಯಕ್ಕೆ ಹೋಗಿ ಬರುವುದಾಗಿ ತಿಳಿಸಿದ ಮಹಿಳೆ ಎಷ್ಟು ಹೊತ್ತಾದರು ಬಂದಿಲ್ಲ. ನಂತರ ಮಗು ಅಳುವುದಕ್ಕೆ ಆರಂಭಿಸಿದೆ. ತಕ್ಷಣ ಸಾರ್ವಜನಿಕರು ಒಟ್ಟುಗೂಡಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮಗು ಹಿನ್ನಲೆ: ಮಾರ್ಚ್ 16ರಂದು ರಪನಹಳ್ಳಿ ಪಟ್ಟಣದ ಜಬೀವುಲ್ಲಾ ಹಾಗು ಉಮೇಸಲ್ಮಾರಿಗೆ ಗಂಡು ಮಗು ಜನಿಸಿತ್ತು. ಸಂಜೆ ನವ ಜಾತ ಶಿಶು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವನ್ನು ಪೋಷಕರ ಸೋಗಿನಲ್ಲಿ ಬಂದ ಅಪರಿಚಿತ ಮಹಿಳೆ ಮಗುವನ್ನು ಕದ್ದೊಯ್ದಿದ್ದಳು.ಸಿಸಿಟಿವಿಯಲ್ಲಿ ಮಗುವನ್ನು ಕದ್ದೊಯ್ಯುವ ದೃಶ್ಯ ಸೆರೆಯಾಗಿತ್ತು. ಈ ಬಗ್ಗೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗುವಿನ ಸುಳಿವು ನೀಡಿದ್ರೆ 25 ಸಾವಿರ ಬಹುಮಾನ ಕೊಡುವುದಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ಪ್ರಕಟಣೆ ನೀಡಿತ್ತು. ಜೆಡಿಎಸ್ ಪಕ್ಷದಿಂದಲು 10 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
Davanagere: ಆಸ್ಪತ್ರೆಯಿಂದಲೇ ನವಜಾತ ಶಿಶು ನಾಪತ್ತೆ: ಮಗುವಿಗಾಗಿ ಹಂಬಲಿಸುತ್ತಿರುವ ಪೋಷಕರು!
ಮಗು ಕಿಡ್ನಾಪ್ ನಂತರ ತನಿಖೆ ನಡೆದಿದ್ದು ಹೇಗೆ: ಸಿಸಿಟಿವಿ ದೃಶ್ಯಾವಳಿ ನೋಡಿ ಪೋಷಕರಿಂದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆ ವೈದ್ಯರು, ಅಲ್ಲಿನ ಸಿಬ್ಬಂದಿ,ಅನುಮಾನ ಬಂದವರನ್ನು ವಿಚಾರಣೆ ನಡೆಸಿದ್ದರು.25 ಸಾವಿರ ಬಹುಮಾನ ಘೋಷಣೆಯಾದ ನಂತರವು ಮಗು ಪತ್ತೆಯಾಗದಿದ್ದಕ್ಕೆ ಪೊಲೀಸರು ಅನುಮಾನ ಬಂದೆಡೆ ಮನೆ ಮನೆ ಹುಡುಕಲು ಪ್ರಾರಂಭಿಸಿದ್ದರು. ಆಜಾದ್ ನಗರದಲ್ಲಿ ಅನುಮಾನ ಇರುವ ಕಡೆ ನಿಮ್ಮ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಸಿಕ್ಕಿದ್ರೆ ಬಹುದೊಡ್ಡ ಶಿಕ್ಷೆಯಾಗುತ್ತದೆ ಎಂದು ಪೊಲೀಸರು ಮನೆ ಮನೆ ಹುಡುಕುವುದಕ್ಕೆ ಆರಂಭಿಸಿದ್ದರು. ಹೀಗೆ ಆರಂಭವಾದ ಒಂದು ದಿನದಲ್ಲೇ ಮಗು ಬಸ್ ಸ್ಟ್ಯಾಂಡ್ ನಲ್ಲಿ ಪತ್ತೆಯಾಗಿದೆ.
Davanagere ಆಸ್ಪತ್ರೆಯಿಂದಲೇ ನವಜಾತ ಶಿಶು ನಾಪತ್ತೆ, ಪತ್ತೆಯಾಗದ ಖದೀಮರು!
ಮಗು ಕಂಡ ಪೋಷಕರಲ್ಲಿ ಮನೆ ಮಾಡಿದ ಸಂತಸ: ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಗುವನ್ನು ಚಿಕಿತ್ಸೆಗೆ ದಾಖಲಿಸಿಲಾಗಿದೆ.ಆಸ್ಪತ್ರೆಗೆ ಭೇಟಿ ನೀಡಿರುವ ಪೋಷಕರು ಮಗು ತಮ್ಮದೇ ಎಂದು ಗುರುತಿಸಿದ್ದಾರೆ. ತಕ್ಷಣ ತಂದೆ ತಾಯಿಗೆ ಮಗುವನ‌್ನು ಒಪ್ಪಿಸಿಲ್ಲ. ತಂದೆಯ ಡಿಎನ್‌ಎ ಪರೀಕ್ಷೆ ಮುಗಿದ ನಂತರ ಕಾನೂನು ಪ್ರಕಾರ ಮಗು ಒಪ್ಪಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಅಂತು ಇಂತು 21 ದಿನಗಳ ನಂತರ ಮಗು ಪತ್ತೆಯಾಗಿರುವುದಕ್ಕೆ ಪೋಷಕರಲ್ಲಿ ಮನೆ ಮಾಡಿದ್ದು ಪೊಲೀಸರು ನಿಟ್ಟಿಸಿರುಬಿಟ್ಟಿದ್ದಾರೆ. ಆದರೆ ಮಗು ಕದ್ದ ಕಳ್ಳಿ ಯಾರು. ಕದ್ದ ಉದ್ದೇಶವೇನು? ಎಂಬ ಬಗ್ಗೆ ಸೀರಿಯಸ್ ತನಿಖೆ ನಡೆಯಬೇಕಿದೆ.