* ಯುವಕನ ಜತೆ 2 ಮಕ್ಕಳ ತಾಯಿ ಲವ್ವಿ-ಡವ್ವಿ
* 2 ಮಕ್ಕಳ ತಾಯಿ ಲವ್ವಿ-ಡವ್ವಿ ಊರೆಲ್ಲ ಸುದ್ದಿ
* ಬಳಿಕ ನಡೆದಿದ್ದು ಘನಘೋರ ದುರಂತ
ತುಮಕೂರು, (ಡಿ.03): ಸುಮಾರು 25 ವರ್ಷದ ಮಹಿಳೆ. ಆಕೆಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಆದ್ರೆ, ತನ್ನ ಮನೆಯ ಟ್ರ್ಯಾಕ್ಟರ್ ಚಾಲಕನ ಜೊತೆ ಲವ್ವಿ-ಡವ್ವಿ ಇಟ್ಟುಕೊಂಡಿದ್ದಳು. ಕದ್ದುಮುಚ್ಚಿ ಆಡುತ್ತಿದ್ದ ಆಟ ಕುಟುಂಬಸ್ಥರಿಗೆ ಗೊತ್ತಾಗಿ, ಇದೀಗ ಇಬ್ಬರು ದುರಂತ ಅಂತ್ಯಕಂಡಿದ್ದಾರೆ.
ಹೌದು.. ಈ ದುರ್ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗಿರಚಿಕ್ಕನಹಳ್ಳಿ ನಡೆದಿದೆ. ವೆಂಕಟಲಕ್ಷ್ಮಮ್ಮ(25) ಹಾಗೂ ಆನಂದ್ ಕುಮಾರ್ ಸಾವನ್ನಪ್ಪಿದ್ದಾರೆ.
Crime News: ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್, ಪಾಠ ಮಾಡೋ ಪೋಲಿ ಶಿಕ್ಷಕನ ಪುರಾಣ ಬಯಲು
ಆನಂದ್ ಕುಮಾರ್ ಎನ್ನುವಾತ ವೆಂಕಟಲಕ್ಷ್ಮಮ್ಮ ಮನೆಯ ಟ್ರ್ಯಾಕ್ಟರ್ ಚಾಲಕನಾಗಿದ್ದ. ಈ ವೇಳೆ ವೆಂಕಟಲಕ್ಷ್ಮಮ್ಮ ಮತ್ತು ಆನಂದ್ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದ್ದು, ಅದು ಮಂಚದವರೆಗೆ ಹೋಗಿದೆ.
ಬಳಿಕ ಈ ಇಬ್ಬರ ಲವ್ವಿ-ಡವ್ವಿ ವೆಂಕಲಕ್ಷ್ಮಮ್ಮ ಕುಟುಂಬಸ್ಥರಿಗೆ ಗೊತ್ತಾಗಿದೆ. ಅಲ್ಲದೇ ಇಡೀ ಗ್ರಾಮಕ್ಕೆ ಸುದ್ದಿ ಹಬ್ಬಿದ್ದು, ಜನರು ಬಾಯಿಗೆ ಬಂದಂಗೆ ಮಾತನಾಡಿಕೊಳ್ಳಲು ಶುರುಮಾಡಿದ್ದರು. ಇದರಿಂದ ಮನನೊಂದ ವೆಂಕಲಕ್ಷ್ಮಮ್ಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಇತ್ತ ಡ್ರೈವರ್ ಆನಂದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರ್ಯಾದೆಗೆ ಅಂಜಿಕೊಂಡೋ ಅಥವಾ ಲಕ್ಷ್ಮಮ್ಮ ಕುಟುಂಬಸ್ಥರ ಭಯದಿಂದನೋ ಏನು ನೇಣಿಗೆ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
Lovers Suicide:ಯುವತಿಯ ತಂದೆಯ ಆ ಒಂದು ಕಂಡಿಷನ್, ಲಾಡ್ಜ್‌ನಲ್ಲಿ ಅಂತ್ಯವಾಯ್ತು ಲವ್ ಕಹಾನಿ
ವಿಷಯ ತಿಳಿಯುತ್ತಿದ್ದಂತೆಯೇ ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರೇಯಸಿಯ ಗಂಡನ ರುಂಡ ಚಂಡಾಡಿದ ಪ್ರಿಯತಮ
ಸ್ವೀಪರ್ ಒಬ್ಬ ಪ್ರೇಯಸಿಯ ಗಂಡನ ರುಂಡ, ಮುಡ, ಕೈ, ಕಾಲು ಕತ್ತರಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.ಚತನ್ನ ಈ ಕೃತ್ಯಕ್ಕೆ ಸಿನಿಮಾ ಸ್ಪೂರ್ತಿ ಎಂದು ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾನೆ.
ಆರೋಪಿಯನ್ನು ಪಿ. ರಾಜು ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಹಾಮಗೊಂಡಂನ ಎನ್ ಟಿಪಿಸಿ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷ ಮಹಿಳೆಯೊಂದಿಗೆ ಈ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದ.
Asianet Suvarna FIR : ಹೆಂಡ್ತಿ ಗರ್ಭಿಣಿ ಆಗಿದ್ದಕ್ಕೆ ರೊಚ್ಚಿಗೆದ್ದ ಗಂಡ, ಬಿದ್ದವು 2 ಹೆಣ!
ಈ ವಿಷಯ ಮಹಿಳೆಯ ಗಂಡ ಶಂಕರ್ ಗೆ ತಿಳಿದು, ದಂಪತಿ ನಡುವೆ ಜಗಳವಾಗಿತ್ತು. ಇದರಿಂದ ಆತ ತನಗೆ ನಿತ್ಯವೂ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಪ್ರಿಯಕರನಿಗೆ ಹೇಳಿದ್ದಾಳೆ. ಇದರಿಂದ ಇಬ್ಬರೂ ಸೇರಿಕೊಂಡು ಶಂಕರ್ ನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದಾರೆ.
ಶಂಕರ್ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದಾಗ ಆತನನ್ನು ಕೊಲೆ ಮಾಡಿ ಒಂದೊಂದು ಪಾರ್ಟ್ ಒಂದೊಂದು ಕಡೆ ಬಿಸಾಕಿದ್ದಾನೆ. ಆಗ ಶಂಕರ್ ನಾಪತ್ತೆಯಾಗಿರುವ ಕುರಿತು ಪಾಲಕರು ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಒಂದು ಜಾಗದಲ್ಲಿ ಶಂಕರ್ ರುಂಡ ಸಿಕ್ಕಿದೆ. ಆಗ ಸೊಸೆಯ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ.
ಆ ನಂತರ ವಿಚಾರಣೆಗೊಳಪಡಿಸಿದಾಗ ವಿಷಯ ಹೇಳಿದ್ದು, ಬಳಿಕ ರಾಜು ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು,.ತನಿಖೆ ಮುಂದುವರೆಸಿದ್ದಾರೆ.
ಗಂಡನ ಸಾವಿನ ಸುದ್ದಿ ಕೇಳಿ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿದ ಪತ್ನಿ
ಹೈದರಾಬಾದ್: ಸಾಫ್ಟ್ವೇರ್ ಇಂಜಿನಿಯರ್ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ತೆಲ್ಲಪುರ್ನಲ್ಲಿ ನಡೆದಿದೆ.
ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾರದೇ ಇಬ್ಬರು ಮಕ್ಕಳೊಂದಿಗೆ ಪತ್ನಿಯು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗಂಡ ಚಂದ್ರಕಾಂತ್ ರಾವ್ ಬಿಎಚ್ಇಎಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಮಗ ಪ್ರೀತಂ (9) ಮತ್ತು ಮಗಳು ಸರ್ವಜ್ಞ (ಒಂದೂವರೆ ವರ್ಷ) ಇಬ್ಬರನ್ನು ಕೆರೆಗೆ ಎಸೆದು ತಾನು ಕೆರೆಗೆ ಹಾರಿ ಪತ್ನಿ ಲಾವಣ್ಯ ಪ್ರಾಣ ಕಳೆದುಕೊಂಡಿದ್ದಾರೆ.