* ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ನಡೆದ ಘಟನೆ
* ಗಂಡ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು
* ಆರು ಮಂದಿ ಮೇಲೆ ಹಲ್ಲೆ ನಡೆಸಿದ ಆರೋಪಿ ಸೆರೆ
ಕೂಡ್ಲಿಗಿ(ಡಿ.03): ತವರು ಮನೆಯಿಂದ ವರದಕ್ಷಿಣೆ(Dowry) ತರಲಿಲ್ಲವೆಂದು ಪತ್ನಿಯನ್ನು ಕೊಲೆ(Murder) ಮಾಡಿರುವ ಘಟನೆ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ನೇತ್ರಮ್ಮ(23) ಕೊಲೆಯಾದ ದುರ್ದೈವಿ. ಆರೋಪಿ(Accused) ವಿಜಯಕುಮಾರ ಮತ್ತು ಆತನ ಕುಟುಂಬದ ನಾಲ್ವರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಮೃತ ನೇತ್ರಮ್ಮನ ಮನೆಯವರು ಅರೋಪಿಸಿದ್ದಾರೆ. ನೇತ್ರಮ್ಮಳು ದಾವಣಗೆರೆ(Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಾಬಿಗೆರೆ ಗ್ರಾಮದವಳಾಗಿದ್ದು, ಕಳೆದ 2 ವರ್ಷಗಳ ಹಿಂದೆ ಕೂಡ್ಲಿಗಿ ತಾಲೂಕಿನ ಕೊರಚರಹಟ್ಟಿ ಗ್ರಾಮದ ವಿಜಯಕುಮಾರನಿಗೆ ಮದುವೆ(Marriage) ಮಾಡಿಕೊಡಲಾಗಿತ್ತು. ಮದುವೆ ನಂತರ ದಿನಗಳಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು.
ಗುರುವಾರ ನೇತ್ರಮ್ಮಳೊಂದಿಗೆ ಜಗಳವಾಡಿ ನಂತರ ಮನೆಯವರು ಸೇರಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತಳ ತಂದೆ ಶೇಖರಪ್ಪ ನೀಡಿದ ದೂರಿನಂತೆ ತಾಲೂಕಿನ ಹೊಸಹಳ್ಳಿ ಠಾಣೆಯಲ್ಲಿ ಗುರುವಾರ ರಾತ್ರಿ ನಾಲ್ವರ ವಿರುದ್ಧ ಪ್ರಕರಣ(Case) ದಾಖಲಾಗಿದೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಹರೀಶ ರೆಡ್ಡಿ, ಕೊಟ್ಟೂರು ಸಿಪಿಐ ಮುರುಗೇಶ, ಹೊಸಹಳ್ಳಿ ಪಿಎಸ್‌ಐ ತಿಮ್ಮಣ್ಣ ಚಾಮನೂರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮದುವೆಯಾಗಿ ವರ್ಷ ತುಂಬುವ ಮೊದಲೆ ಬಲಿಯಾದಳು ಗೃಹಿಣಿ
ಜೂಜಾಟ: ನಾಲ್ವರ ಬಂಧನ
ಕೂಡ್ಲಿಗಿ(Kudligi): ಇಸ್ಪೀಟ್ ಜೂಜಾಟದಲ್ಲಿ(Gambling) ತೊಡಗಿದ್ದ ಅಡ್ಡೆಮೇಲೆ ಕೂಡ್ಲಿಗಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 11400 ಜಪ್ತಿ ಮಾಡಿರುವ ಘಟನೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಡಾಬಾ ಹೋಟೆಲ್ ಸಮೀಪ ನಡೆದಿದೆ.
ಕೂಡ್ಲಿಗಿ ಪಟ್ಟಣದ ನಜೀರ್, ರಾಮಾಂಜಿನೇಯ, ಪರಶುರಾಮ, ಮಂಜುನಾಥ ಎನ್ನುವವರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ವೇಳೆ ಕೂಡ್ಲಿಗಿ ಪೊಲೀಸರು ದಾಳಿ(Police Raid) ಮಾಡಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ನಾಲ್ವರು ಕಳೆದ ರಾತ್ರಿ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದ ವಿಜಯ ಟೀ ಹೋಟೆಲ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಆಧರಿಸಿ ಕೂಡ್ಲಿಗಿ ಪಿಎಸ್‌ಐ ಶರತಕುಮಾರ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿದರು. ಸರ್ಕಾರದ ಪರವಾಗಿ ಕೂಡ್ಲಿಗಿ ಪಿಎಸ್‌ಐ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರು ಮಂದಿ ಮೇಲೆ ಹಲ್ಲೆ ನಡೆಸಿದ ಆರೋಪಿ ಸೆರೆ
ನಂಜನಗೂಡು(Nanjangud): ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬ ಆರು ಮಂದಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ(Assault) ನಡೆಸಿರುವ ಘಟನೆ ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ(Death).
ಗ್ರಾಮದ ಅಕ್ಕಜಮ್ಮ ಉ. ನಿಂಗಮ್ಮ ಮತ್ತು ಆಕೆಯ ಪತಿ ಮಾದಯ್ಯ ಮೃತಪಟ್ಟವರು. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಘಟನೆ ನಡೆದಿದ್ದು, ಮೃತರ ಎದುರು ಮನೆ ನಿವಾಸಿ ಈರಯ್ಯ(37) ಕೊಲೆ ಮಾಡಿದ ಆಸಾಮಿ. ಈತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಈರಯ್ಯ ಈ ಮೊದಲೇ ಮೊದಲನೇ ಪತ್ನಿಯನ್ನು ಕೊಲೆಗೈದು ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಎನ್ನಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಹಲ್ಲರೆ ಗ್ರಾಮದ ಮಹದೇವಮ್ಮಳನ್ನು 2ನೇ ಮದುವೆ ಮಾಡಿಕೊಂಡಿದ್ದ. ಮಹದೇವಮ್ಮಳಿಗೆ ಒಂದು ಹೆಣ್ಣು ಮಗು ಇದ್ದು ಮತ್ತೆ 8 ತಿಂಗಳ ಗರ್ಭಿಣಿ(Pregnent) ಆಗಿದ್ದಳು.
ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ ಪತಿಯ ಬಂಧನ
ಮೃತ ನಿಂಗಮ್ಮ, ಮಾದಯ್ಯ ಅವರ ಪುತ್ರ ರವಿ ಮತ್ತು ಮಹದೇವಮ್ಮ ನಡುವೆ ಕಳೆದ 7 ವರ್ಷಗಳಿಂದ ಅಕ್ರಮ ಸಂಬಂಧ(Illicit Relationship) ಇತ್ತು ಎನ್ನಲಾಗಿದೆ. ರಾಜಿ ಸಂಧಾನದ ಮೂಲಕವೂ ಈ ಸಮಸ್ಯೆ ಇತ್ಯರ್ಥಪಡಿಸಲಾಗಿತ್ತು. ಈ ನಡುವೆ ಬುಧವಾರ ಸಂಜೆ ಏಕಾಏಕಿ ಈರಯ್ಯ ತನ್ನ ಪತ್ನಿ ಮಹದೇವಮ್ಮನ ಮೇಲೆ ಜಗಳಕ್ಕೆ ಬಿದ್ದಿದ್ದಾನೆ. ನಿನಗೂ, ರವಿಗೂ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ ಜಗಳ ತೆಗೆದು ಮಚ್ಚಿನಿಂದ ಮಹದೇವಮ್ಮ ಮತ್ತು ಆಕೆಯ ತಾಯಿ ಸಣ್ಣ ಗೌರಮ್ಮ ಅವರ ತಲೆ ಮತ್ತು ಕೈ, ಕಾಲು ಭಾಗಕ್ಕೆ ಹಲ್ಲೆ ನಡೆಸಿದ್ದಾನೆ.
ಇದನ್ನು ತಡೆಯಲು ಮುಂದಾದ ಸಮೀಪದ ಬಂಧುಗಳೂ ಆದ ನಿಂಗಮ್ಮ ಮತ್ತು ಮಾದಯ್ಯ ಅವರ ಮೇಲೂ ಈರಯ್ಯ ಮಚ್ಚು ಬೀಸಿದ್ದಾನೆ. ರವಿಯ ಮೇಲಿದ್ದ ಸಿಟ್ಟಿನೊಂದಿಗೆ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದರಿಂದ ನಿಂಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಪತಿ ಮಾದಯ್ಯ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ(Bengaluru) ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಮಾದಯ್ಯರ ಸೋದರ ಸಂಬಂಧಿ ಮಕ್ಕಳಾದ ಸುರೇಶ್ ಹಾಗೂ ಮಹದೇವು ಅವರ ಮೇಲೆ ಪೊಲೀಸರ ಎದುರೇ ರಸ್ತೆಗಳಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾನೆ. ಸುರೇಶ್ ಮತ್ತು ಮಹದೇವು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ.
ಗ್ರಾಮಸ್ಥರು ಹೇಳುವಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಜೀಪಿನಲ್ಲಿ ಕೂರಿಸಿದ ಬಳಿಕವೂ ಮಚ್ಚಿನಿಂದ ಜೀಪಿನ ಗಾಜನ್ನು ಒಡೆದು ಹಾಕಿದ ಆರೋಪಿ ಈರಯ್ಯ, ಸುರೇಶ್ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾರೆ. ಈ ಪೈಕಿ ಆರೋಪಿಯ ಪತ್ನಿ ಮಹದೇವಮ್ಮ ಮತ್ತು ಅತ್ತೆ ಸಣ್ಣ ಗೌರಮ್ಮ ಅವರ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು, ಸಿಪಿಐ ಲಕ್ಷ್ಮಿಕಾಂತ ತಳವಾರ, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವನಂಜಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಮುಂದುವರಿಸಿದ್ದಾರೆ. ಗುರುವಾರ ಗ್ರಾಮಕ್ಕೆ ಶಾಸಕ ಬಿ. ಹರ್ಷವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೃತರ ಸಂಬಂಧಿಕರಿಗೆ ಧೈರ್ಯ ತುಂಬಿದರು.