* ಯೋಗ ಕ್ಲಾಸ್ನಲ್ಲಿ ಪರಪುರಷನ ಜತೆ ಸರಸ ಸಲ್ಲಾಪ
* ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ
* ಪೊಲೀಸ್ರು ವಿಚಾರಣೆಗೆ ಮುಂದಾಗುತ್ತಿದ್ದಂತೆ ಭಯಾನಕ ರಹಸ್ಯ ಬಯಲು
ಹಾಸನ, (ಫೆ.10): ತನ್ನ ಕಾಮದ ತೀಟೆ ತೀರಿಸಿಕೊಳ್ಳಲು ಕಟ್ಟಿಕೊಂಡ ಗಂಡನನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್ ಬಳಿ ಕಳೆದ ವಾರ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಜ.31ರಂದು ಸಂಜೆ ಶಾಲೆಯಿಂದ ಮಗನನ್ನು ಕರೆತರಲು ಬೈಕ್ನಲ್ಲಿ ತೆರಳಿದ್ದ ಆನಂದ್ಕುಮಾರ್ (42) ಎಂಬಾತನನ್ನು ಕಾವಲು ಹೊಸೂರು ಗೇಟ್ ಬಳಿ ಅಡ್ಡಗಟ್ಟಿದ ಅಪರಿಚಿತರಿಬ್ಬರು ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆಗೈದಿದ್ದರು. ಎಸ್ಪಿ.ಆರ್.ಶ್ರೀನಿವಾಸ್ಗೌಡ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಪೊಲೀಸರು ಮೃತನ ಪತ್ನಿ ಸುನೀತಾಳ ವಿಚಾರಣೆಗೆ ಮುಂದಾಗುತ್ತಿದ್ದಂತೆ ಭಯಾನಕ ರಹಸ್ಯ ಬಯಲಾಗಿದೆ.
Mandya: ಗಂಡ ಇದ್ರೂ ಮತ್ತೊಬ್ಬನ ಸಂಗ: ಅಕ್ರಮ ಸಂಬಂಧಕ್ಕಾಗಿ ಒಬ್ಬಳೇ ಐದು ಜನರನ್ನು ಕೊಂದಳು!
ನುಗ್ಗೇಹಳ್ಳಿಯಲ್ಲಿ ಇದೇ ಗ್ರಾಮದ ನವೀನ್ ಎಂಬಾತ ಯೋಗ ಕ್ಲಾಸ್ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಯೋಗ ಕ್ಲಾಸ್ಗೆ ಸುನೀತಾ ಸೇರಿದ್ದಳು. ನವೀನ್ ಮತ್ತು ಸುನೀತಾ ನಡುವಿನ ಆರಂಭದ ಸ್ನೇಹ ನಂತರ ಪ್ರೇಮಕ್ಕೆ ತಿರುಗಿತ್ತು. ಅಕ್ರಮ ಸಂಬಂಧವೂ ಬೆಳೆದಿತ್ತು. ಈ ವಿಚಾರ ಗಂಡನಿಗೆ ಗೊತ್ತಾದರೆ ಅಡ್ಡಿಯಾಗುತ್ತಾನೆ ಎಂದು ಆತನ ಕೊಲೆಗೆ ಪತ್ನಿಯೇ ಬೆಂಗಳೂರಿನ ವ್ಯಕ್ತಿಗಳಿಬ್ಬರಿಗೆ ಸುಪಾರಿ ನೀಡಿದ್ದಳು. ಇದಕ್ಕೆ ನವೀನ್ ಸಹ ಕೈ ಜೋಡಿಸಿದ್ದ. ಆನಂದ್ ಓಡಾಡುವ ಮಾರ್ಗವನ್ನು ಕೊಲೆಗಡುಕರಿಗೆ ಮಾಹಿತಿ ನೀಡಿದ್ದರು. ಅದರಂತೆ ಜ.31ರಂದು ಆನಂದ್ನನ್ನು ಕೊಲೆ ಮಾಡಲಾಗಿತ್ತು.
2014ರಲ್ಲಿ ಹಿರೀಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಇದೇ ಸುನೀತಾಳನ್ನು ಬಂಧಿಸಲಾಗಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿದ್ದಳು. ಇದೀಗ ಗಂಡನ ಕೊಲೆ ಕೇಸ್ನಲ್ಲಿ ಪ್ರಿಯಕರನ ಜತೆ ಸುನೀತಾ ಜೈಲು ಸೇರಿದ್ದಾಳೆ. ಸುಪಾರಿ ಪಡೆದು ಹತ್ಯೆ ಮಾಡಿದ ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಅಪ್ಪನ ಜೋತೆ ಪತಿ ಸೇರಿ ಪತ್ನಿಯ ಕೊಲೆ
ಬೆಂಗಳೂರು: ಅಪ್ಪನ ಜೋತೆ ಪತಿ ಸೇರಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿ ನಡೆದಿದೆ.
ರೇಖಾ (30) ಮೃತ ದುರ್ದೈವಿ. ರೇಖಾ ಮಾವ ನಾರಯಣಪ್ಪ ಮತ್ತು ಪತಿ ಗಿರೀಶ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತುಮಕೂರಿನ ದಿಬ್ಬೂರು ಮೂಲದ ಮೃತ ರೇಖಾ 12 ವರ್ಷದ ಹಿಂದೆ ಗಿರೀಶ್ ಜೊತೆ ಮದುವೆಯಾಗಿತ್ತು.
ಕಳೆದ ಎರಡು ವರ್ಷಗಳಿಂದ ಹಣಕ್ಕಾಗಿ ದಿನನಿತ್ಯ ಕಿರುಕುಳ ಕೊಡುತ್ತಿದ್ದ ಅರೋಪ ಕೇಳಿಬಂದಿದೆ. ರೇಖಾ ಕೊಲೆಗೂ ಮುನ್ನ ಬೇಗ ಬನ್ನಿ ಎಂದು ತಾಯಿಗೆ ಕರೆ ಮಾಡಿದ್ದರು. ಪೋಷಕರು ಮನೆ ಬಳಿ ಬರುವಷ್ಟರಲ್ಲಿ ಕೊಲೆ ನಡೆದುಹೋಗಿದೆ. ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಸರ್ಕಾರಿ ಅಸ್ಪತ್ರೆಗೆ ಮೃತ ದೇಹವನ್ನು ರವಾನೆ ಮಾಡಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಮಾಡುತ್ತಿದ್ದ ಖದೀಮರು ಅರೆಸ್ಟ್
ಬೆಂಗಳೂರು: ಕೈಯಲ್ಲಿ ಮೊಬೈಲ್ ಹಿಡಿದು ನಡೆದು ಹೋಗೋರನ್ನು ಟಾರ್ಗೆಟ್ ಮಾಡಿ ಕ್ಷಣ ಮಾತ್ರದಲ್ಲಿ ಕೈಯಿಂದ ಮೊಬೈಲ್ ಕಿತ್ತು ಎಸ್ಕೇಪ್ ಆಗ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಕದ್ದು ಕಣ್ಣಾಮುಚ್ಚಾಲೆ ಆಟ ಆಡ್ತಿದ್ದ ಅಸಾಮಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ. ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರನ್ನ ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ. ಮುಜಾಹಿದ್, ಮುಬಾರಕ್ ಪಾಷಾ, ಖಾಸಿಫ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ 13 ಲಕ್ಷ 60 ಸಾವಿರ ಮೌಲ್ಯದ ವಿವಿಧ ಕಂಪನಿಯ 80 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.