* ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ
* ಸಿಐಡಿ ಮುಂದೆ ದಿವ್ಯಾ ಹಾಗರಗಿ ಪಶ್ಚಾತಾಪದ ಹೇಳಿಕೆ
* ಜೈಲಿನಿಂದ ಹೊರ ಬಂದ ಮೇಲೆ ಅನಾಥಾಶ್ರಮ ಕಟ್ಟಿಸಿ ಜನ ಸೇವೆ ಮಾಡುತ್ತೇನೆ ಎಂದ ಆರೋಪಿ
ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ .ಬೆಂಗಳೂರು
ಬೆಂಗಳೂರು, (ಮೇ.10) : ಪಿಎಸ್ ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಕಲ್ಬುರ್ಗಿಯ ಜ್ಞಾನ ಜ್ಯೋತಿ ಸ್ಕೂಲ್ ಮಾಲೀಕಿ ಹಾಗೂ ಪ್ರಕರಣದ ಆರೋಪಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ರು. ಹಲವು ದಿನ ಕಸ್ಟಡಿಯಲ್ಲಿದ್ದ ದಿವ್ಯಾ ಹಾಗರಗಿ ಸಿಐಡಿ ಮುಂದೆ ನೀಡಿರುವ ಹೇಳಿಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಹಣದ ಹಿಂದೆ ಬಿದ್ದು, ಲೈಫ್ ಹಾಳುಮಾಡಿಕೊಂಡೆ ಸಾರ್ ಎಂದು ಸಿಐಡಿ ವಿಚಾರಣೆ ವೇಳೆ ದಿವ್ಯಾ ಹಾಗರಗಿ ಹೇಳಿಕೆ ಕೊಟ್ಟಿದ್ದಾರೆ.
ಲಕ್ಷ ಲಕ್ಷ ಹಣ ಬರುತ್ತೆ ಎಂದು ಇಂತಹ ತಪ್ಪು ಕೆಲಸ ಮಾಡಿದೆ. ನಾನು ಮಾಡಿದ್ದು ದೊಡ್ಡ ತಪ್ಪು ಅದಕ್ಕಾಗಿ ಪಶ್ಚ್ಯಾತಾಪ ಇದೆ. ಪ್ರಾಮಾಣಿಕರ ಭವಿಷ್ಯ ಆಳು ಮಾಡಿ ಬಿಟ್ಟೇ ದಯವಿಟ್ಟು ಕ್ಷಮಿಸಿ ಬಿಡಿ ಸಾರ್. ಆರೋಪಿಗಳಾಗಿರುವ ಮಂಜುನಾಥ್,ಕಾಶೀನಾಥ್ ಮಾತು ಕೇಳಿ ನನ್ನ ಜೀವನ ಹಾಳಾಯ್ತು ಎಂದ ದಿವ್ಯಾ ಹಾಗರಗಿ ನಾನು ಬುದ್ಧಿ ಕಲಿಯಲು ಸಿಐಡಿ ಬಂಧನವೊಂದೆ ಸಾಕು ಸಾರ್ ಎಂದು ಹೇಳಿಕೆ ನೀಡಿದ್ದಾರೆ.
PSI Scam, ಕೋರ್ಟ್ ಅನುಮತಿ, ಬಂಧನದಲ್ಲಿರುವ ಅಭ್ಯರ್ಥಿಗಳಿಗೆ ಶಾಕ್
ನಾನು ಪರಿವರ್ತನೆಯಾಗಲ್ಲೂ ಸಿಐಡಿ ಬಂಧನವೊಂದೆ ಸಾಕು. ಪ್ರತಿನಿತ್ಯ ಕಷ್ಟ ಅಂತ ಜನರು ಬಂದ್ರೆ ಸಹಾಯ ಮಾಡುತ್ತಿದೆ. ಆದರೆ ಈಗ ನನ್ನ ಪರಿಸ್ಥಿತಿ ಈ ರೀತಿಯಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ದಿವ್ಯಾ ಹಾಗರಗಿಯನ್ನು ಮಹಿಳಾ ನಿಲಯದಲ್ಲಿ ಇಡಲಾಗಿತ್ತು.ಈ ವೇಳೆ ಪಶ್ಚ್ಯಾತಪ ಪಡುತ್ತಿದ್ದ ದಿವ್ಯಾ ಹಾಗರಗಿ ಪ್ರತಿನಿತ್ಯ ಕಣ್ಣೀರು ಹಾಕುತ್ತಿದ್ರೂ ಎನ್ನಲಾಗಿದೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಾಂತ್ವನ ಕೇಂದ್ರದಲ್ಲಿ ಅನಾಥರು,ಬಡವರು, ನಿರ್ಗತಿಕರು, ನೊಂದವರನ್ನು ನೋಡುತ್ತಿದ್ದ, ದಿವ್ಯಾ ಹಾಗರಗಿ ಮನಸ್ಸು ಕರಗಿತ್ತು.
ಇನ್ನು ಪ್ರತಿನಿತ್ಯ ತಪ್ಪು ಮಾಡಿ ಬಿಟ್ಟೇ ಎಂದು ಕಣ್ಣೀರು ಹಾಕುತ್ತಿದ್ದ ದಿವ್ಯಾ ಹಾಗರಗಿ ಜೈಲಿನಿಂದ ಬಂದ ಮೇಲೆ ಅನಾಥಾಶ್ರಮ ಕಟ್ಟುತ್ತೇನೆ. ನನ್ನ ಬಂಧಿಸಿ ನನ್ನ ಮನಃ ಪರಿವರ್ತನೆಗೆ ಸಹಕಾರ ನೀಡಿದ ಸಿಐಡಿ ಅಧಿಕಾರಿಗಳಿಗೆ ಧನ್ಯವಾದಗಳು. ಅನಾಥಾಶ್ರಮವನ್ನು ಇದೇ ಸಿಐಡಿ ಅಧಿಕಾರಿಗಳ ಕೈಯಲ್ಲೇ ಉದ್ಘಾಟನೆ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ.
ಈ ಅವಮಾನ ಎಲ್ಲವೂ ಸಾಕು ಸಾರ್. ನಾನು ಮುಂದಿನ ದಿನಗಳಲ್ಲಿ ಒಳ್ಳೆಯವಳಾಗಿ ಬಾಳುತ್ತೇನೆ. ಮತ್ತೆ ಅನಾಥಾಶ್ರಮ ಕಟ್ಟಿ ಜನಸೇವೆ ಮಾಡುತ್ತೇನೆ ಎಂದು ಸಿಐಡಿ ತನಿಖಾಧಿಕಾರಿಗಳ ಮುಂದೆ ದಿವ್ಯಾ ಹಾಗರಗಿ ಸುದೀರ್ಘ ಹೇಳಿಕೆ ನೀಡಿದ್ದಾಳೆ..