ಮದುವೆಯಾಗ ತಿಂಗಳು ಉರುಳಿದೆ. ಪತಿ ಡಾಕ್ಟರ್. ಸಂಜೆ ವೇಳೆ ಚಹಾ ಮಾಡಿದ ಪತ್ನಿ, ಗಂಡನ ಕರೆದಿದ್ದಾಳೆ. ಆಸ್ಪತ್ರೆಯಲ್ಲಿ ಬ್ಯೂಸಿ ಇದ್ದೇನೆ, ಚಹಾ ಕುಡಿಯಲು ಬರಲು ಸಾಧ್ಯವಿಲ್ಲ ಎಂದಿದ್ದಾನೆ. ಇಷ್ಟಕ್ಕೆ ಪತ್ನಿ ಬದುಕು ಅಂತ್ಯಗೊಳಿಸಲು ಯತ್ನಿಸಿದ ಘಟನೆ ನಡೆದಿದೆ.
ವಡೋದರ(ಫೆ.04) ಸಣ್ಣ ಸಣ್ಣ ವಿಚಾರಕ್ಕೂ ಜಗಳ, ಮನಸ್ತಾಪ, ದಾಂಪತ್ಯದಲ್ಲಿ ಕಲಹ ಕುರಿತ ಹಲವು ಘಟನೆಗಳು ವರದಿಯಾಗುತ್ತಲೇ ಇದೆ. ಇದೀಗ ಚಹಾ ಕುಡಿಯಲು ಪತಿ ಬರಲಿಲ್ಲ ಅನ್ನೋ ಕಾರಣಕ್ಕೆ ಪತ್ನಿ ಬದಕು ಅಂತ್ಯಗೊಳಿಸಲು ಯತ್ನಿಸಿದ ಘಟನೆ ಗುಜರಾತ್‌ನ ವಡೋದರದಲ್ಲಿ ನಡೆದಿದೆ. ಮನೆಯಲ್ಲಿದ್ದ ಪತ್ನಿ ಸಂಜೆ ಚಹಾ ತಯಾರಿಸಿ ಕುಡಿಯಲು ಪತಿಯನ್ನು ಕರೆದಿದ್ದಾಳೆ. ಆದರೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಪತಿ, ಸದ್ಯ ಬರಲು ಸಾಧ್ಯವಿಲ್ಲ ಎಂದ್ದಾನೆ. ಇಷ್ಟಕ್ಕೆ ಮನನೊಂದ ಪತ್ನಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಸದ್ಯ ಪತ್ನಿಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
28 ವರ್ಷದ ಮಹಿಳೆ ಕೆಲ ತಿಂಗಳ ಹಿಂದೆ ವೈದ್ಯರನ್ನು ಮದುವೆಯಾಗಿದ್ದಾಳೆ. ಪೋಷಕರ ಒಪ್ಪಿಗೆ ಮೇರೆಗೆ ಮದುವೆ ನಡಿದೆ. ಪತಿ ಪತ್ನಿ ಸಂಸಾರ ಹೆಚ್ಚಿನ ಸಮಸ್ಯೆಗಳಿಲ್ಲ, ಅಬ್ಬರ ಆಡಂಬರವಿಲ್ಲದೆ ಸಾಗಿದೆ. ವೈದ್ಯರಾಗಿರುವ ಕಾರಣ ಪತಿ ಹೆಚ್ಚಿನ ಸಮಯ ಅಸ್ಪತ್ರೆಯಲ್ಲಿ ಕಳೆದುಹೋಗುತ್ತಿತ್ತು. ಮನೆಯಲ್ಲಿ ಪತಿ ಹಾಗೂ ಪತ್ನಿ ಇಬ್ಬರೇ. ಹೀಗಾಗಿ ಹೆಚ್ಚಿನ ಸಮಯ ಏಕಾಂಗಿಯಾಗಿ ಕಳೆಯುವ ಪತ್ನಿಯ ಮನಸ್ಸು ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿತ್ತು.
undefined
ಜೆಇಇ ಪಾಸು ಮಾಡಲಾರೆ, ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ.... ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
ಫೆಬ್ರವರಿ 2ರ ಸಂಜೆ ವೇಳೆ ಮನೆಯಲ್ಲಿದ್ದ ಪತ್ನಿ ಚಹಾ ಮಾಡಿದ್ದಾಳೆ. ಬಳಿಕ ಪತಿಗೆ ಕರೆ ಮಾಡಿ ಚಹಾ ಕುಡಿಯಲು ಆಗಮಿಸುವಂತೆ ಕೇಳಿಕೊಂಡಿದ್ದಾಳೆ. ಪತ್ನಿಯ ಮಾತು ಪತಿಯಲ್ಲಿ ಆಕ್ರೋಶ ತರಿಸಿತ್ತು. ತಾನು ಆಸ್ಪತ್ರೆಯಲ್ಲಿದ್ದೇನೆ, ಈಗ ಮನೆಗೆ ಬರಲು ಸಾಧ್ಯವಿಲ್ಲ. ನೀನು ಚಹಾ ಕುಡಿ ಎಂದು ಫೋನ್ ಕಟ್ ಮಾಡಿದ್ದಾನೆ. ಪತಿಯ ಮಾತು ಪತ್ನಿಯನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡಿದೆ.
ಕೆಲವೇ ಕ್ಷಣದಲ್ಲಿ ಮತ್ತೆ ಕರೆ ಮಾಡಿದ ಪತ್ನಿ, ತಾನು ಒಂದು ನಿರ್ಧಾರ ತೆಗೆದುಕೊಂಡಿದ್ದೇನೆ. ಇದು ನನ್ನ ಕೊನೆಯ ಕರೆ, ಕೊನೆಯ ಮಾತು ಎಂದಿದ್ದಾಳೆ. ಬಳಿಕ ದುಪಟ್ಟ ತೆಗೆದು ತೋರಿಸಿ ಫೋನ್ ಕರೆ ಕಟ್ ಮಾಡಿದ್ದಾಳೆ. ಇತ್ತ ಆತಂಕಗೊಂಡ ಪತಿ ತಕ್ಷಣವೇ ಮನೆಯತ್ತ ಧಾವಿಸಿದ್ದಾನೆ. ಅಷ್ಟರಲ್ಲೇ ನೇಣು ಬಿಗಿದು ಬದುಕಿನ ಪಯಣ ನಿಲ್ಲಿಸುವ ಪ್ರಯತ್ನ ನಡೆದಿದೆ.
10ನೇ ವಯಸ್ಸಿನಲ್ಲಿ ತಾಯಿಯ ಒತ್ತಾಯಕ್ಕೆ ನಗ್ನ ಶೂಟ್ ಮಾಡಿ, ಖಿನ್ನತೆಯಿಂದ ಬಳಲಿದ ನಟಿ
ಓಡೋಡಿ ಬಂದ ಪತಿ, ನೇಣು ಕುಣಿಕೆಯಿಂದ ಪತ್ನಿಯನ್ನು ಹೊರತೆಗೆದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಪತ್ನಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಇತ್ತ ಆಸ್ಪತ್ರೆ ಮಾಹಿತಿಯಿಂದ ಪೊಲೀಸರು ಆಗಮಿಸಿದ್ದಾರೆ. ಎರಡು ಕುಟುಂಬದ ಜೊತೆ ಪೊಲೀಸರು ಮಾತನಾಡಿದ್ದಾರೆ. ಯಾರೂ ಕೂಡ ಯಾವುದೇ ದೂರು ದಾಖಲಿಸಿಲ್ಲ. ಮಹಿಳೆ ಚೇತರಿಸಿಕೊಂಡ ಬಳಿಕ ಆಕೆಯ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.