ಅನೈತಿಕ ಸಂಬಂಧದ ಶಂಕೆ; ಗಂಡನ ಮರ್ಮಾಂಗದ ಮೇಲೆ ಬಿಸಿ ನೀರು ಸುರಿದ ಹೆಂಡತಿ

By Sharath Sharma  |  First Published Aug 18, 2022, 12:29 PM IST

Extramarital Affair News: ಗಂಡ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಹೆಂಡತಿ ಗಂಡನ ಮರ್ಮಾಂಗದ ಮೇಲೆ ಕೊತ ಕೊತ ಕುದಿಯುವ ಬಿಸಿ ನೀರು ಸುರಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗಂಡ ಆಸ್ಪತ್ರೆ ಸೇರಿದ್ದು, ಹೆಂಡತಿಯ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.


ಚೆನ್ನೈ: ಗಂಡ ಬೇರೊಬ್ಬಳ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡಿರುವ ಶಂಕೆಯ ಹಿನ್ನೆಲೆಯಲ್ಲಿ ಮರ್ಮಾಂಗಕ್ಕೆ ಹೆಂಡತಿ ಸುಡುವ ಬಿಸಿ ನೀರು ಸುರಿದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ನಂತರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಗಂಡನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸಂತ್ರಸ್ಥನ ಹೆಸರು ತಂಗರಾಜ್‌ (32) ಎಂದು ಗುರುತಿಸಲಾಗಿದೆ. ಏಳು ವರ್ಷಗಳ ಹಿಂದೆ ತಂಗರಾಜ್‌ ಪ್ರಿಯಾಳೊಂದಿಗೆ ಮದುವೆಯಾಗಿದ್ದ ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 

ಮೊಬೈಲ್‌ ಫೋನ್‌ ಬಿಡಿಭಾಗಗಳನ್ನು ತಯಾರಿಸುವ ಫ್ಯಾಕ್ಟರಿಯಲ್ಲಿ ತಂಗರಾಜ್‌ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಹಲವು ದಿನಗಳಿಂದ ಪ್ರಿಯಾ ಮತ್ತು ತಂಗರಾಜ್‌ ಆಗಾಗ ಜಗಳವಾಡುತ್ತಲೇ ಇದ್ದರು ಎನ್ನಲಾಗಿದೆ. ತಂಗರಾಜ್‌ ಕೆಲಸ ಮಾಡುವ ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪ್ರಿಯಾ ಆರೋಪಿಸುತ್ತಿದ್ದಳು. 

Tap to resize

Latest Videos

ಮಂಗಳವಾರ ಹೆಂಡತಿಯೊಂದಿಗೆ ಜಗಳವಾಡಿದ ನಂತರ ತಂಗರಾಜ್‌ ಮಲಗಲು ಕೋಣೆಗೆ ಹೋಗಿದ್ದಾನೆ. ಈ ವೇಳೆ ಪ್ರಿಯಾ ಬಿಸಿ ಬಿಸಿ ಕುದಿಯುವ ನೀರನ್ನು ತಂದು ತಂಗರಾಜ್‌ ಖಾಸಗಿ ಭಾಗದ ಮೇಲೆ ಸುರಿದಿದ್ದಾಳೆ. 

ನೆರೆಹೊರೆಯವರು ತಂಗರಾಜ್‌ ನೋವಿನಿಂದ ಕಿರುಚುತ್ತಿರುವುದನ್ನು ನೋಡಿ ಮನೆಗೆ ಬಂದಿದ್ದಾರೆ. ಆ ವೇಳೆ ತಂಗರಾಜ್‌ ಮೇಲೆ ಬಿಸಿ ನೀರು ಸುರಿದಿರುವುದು ಬೆಳಕಿಗೆ ಬಂದಿದೆ. ನಂತರ ತಂಗರಾಜ್‌ನನ್ನು ವಾಲಾಜಪೇಟ್‌ ಸರ್ಕಾರಿ ಆಸ್ಪತ್ರೆಗೆ ಅಕ್ಕಪಕ್ಕದ ಮನೆಯವರು ಸೇರಿಸಿದ್ದಾರೆ. ವೈದ್ಯಾಧಿಕಾರಿಗಳ ಪ್ರಕಾರ ತಂಗರಾಜ್‌ ಮರ್ಮಾಂಗ ಶೇಕಡ 50ರಷ್ಟು ಸುಟ್ಟಿದೆ. ನೀರು ಕೊತ ಕೊತ ಕುದಿಯುತ್ತಿದ್ದ ಕಾರಣ ಗಂಭೀರ ಸುಟ್ಟ ಗಾಯಗಳಾಗಿವೆ. 

ಇದನ್ನೂ ಓದಿ: ಹಳದಿ ದುಪ್ಪಟ್ಟಾಗೆ ಫುಲ್ ಫಿದಾ, ಅನೈತಿಕ ಸಂಬಂಧ ಚಿಗುರಿದ ಕಥೆಯೇ ವಿಚಿತ್ರ !

ಕಾವೇರಿಪಕ್ಕಮ್‌ ಪೊಲೀಸ್‌ ಠಾಣೆಯಲ್ಲಿ ಹೆಂಡತಿ ಪ್ರಿಯಾ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಅನೈತಿಕ ಸಂಬಂಧ ಅಥವಾ ದಂಪತಿಗಳ ನಡುವಿನ ನಂಬಿಕೆ ಕೊರತೆ ಎಂತಾ ದುರಂತಕ್ಕೆ ನಾಂದಿ ಹಾಡಬಹುದು ಎಂಬುದಕ್ಕೆ ಈ ಪ್ರಕರಣ ಜ್ವಲಂತ ಸಾಕ್ಷಿಯಾಗಿದೆ. ಅಪನಂಬಿಕೆಯಿಂದ ಗಂಡನ ಮರ್ಮಾಂಗ ಗಾಯಗೊಂಡು ಆಸ್ಪತ್ರೆ ಸೇರಿದರೆ, ಹೆಂಡತಿ ಪೊಲೀಸರಿಂದ ಬಂಧನ ಭೀತಿ ಅನುಭವಿಸುತ್ತಿದ್ದಾಳೆ. ಕೊಂಚ ವಿವೇಚನೆಯಿಂದ ಹೆಜ್ಜೆ ಇಟ್ಟಿದ್ದರೆ ಈ ರೀತಿಯ ದುರಂತ ನಡೆಯುತ್ತಿರಲಿಲ್ಲ. ಗಂಡ ಹೆಂಡತಿ ನಡುವಿನ ಕಿತ್ತಾಟದಲ್ಲಿ ದಂಪತಿಯ ಇಬ್ಬರು ಹೆಣ್ಣು ಮಕ್ಕಳು ಹೈರಾಣಾಗುತ್ತಿರುವುದಂತೂ ಸ್ಪಷ್ಟ. 

ಪ್ರಿಯಕರನೊಂದಿಗೆ ಗೃಹಿಣಿ ಆತ್ಮಹತ್ಯೆ:

 

ದಾವಣಗೆರೆಯ ಬೆಂಕಿಕೆರೆ ಗ್ರಾಮದ ಕೆರೆಗೆ ಹಾರಿ ಇಬ್ಬರು ಯುವಕ-ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚೆನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮ. ನಿನ್ನೆ ತಡರಾತ್ರಿ ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಯುವಕ-ಯುವತಿ ಏಕಕಾಲಕ್ಕೆ ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ ಅದ್ಯಾಗೂ ಇಬ್ಬರು ಪ್ರೇಮಿಗಳಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕೆರೆಯಿಂದ ಮೃತದೇಹಗಳನ್ನ ಹೊರತೆಗೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರೀಕ್ಷೆಗೊಳಪಡಿಸಿದ್ದಾರೆ. ಚೆನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Raichur: ಅನೈತಿಕ ‌ಸಂಬಂಧ ಶಂಕಿಸಿ ಪತ್ನಿಯನ್ನ ಕೊಚ್ಚಿಕೊಂದ ಪತಿ

ಕೆರೆಗೆ ಬಿದ್ದು ಜೋಡಿ ಆತ್ಮಹತ್ಯೆ ಪ್ರಕರಣ ಟ್ವಿಸ್ಟ್: 
ಮದುವೆಯಾಗಿದ್ದ ಮಹಿಳೆಯನ್ನು ಪ್ರೀತಿಸಿ ಸಂಬಂಧ ಇಟ್ಟುಕೊಂಡಿದ್ದ ಯುವಕ ಚರಣ್(23) ನಾಗರತ್ನ (21). ಅತ್ಮಹತ್ಯೆ ಮಾಡಿಕೊಂಡ ಜೋಡಿಗಳು‌. ಆತ್ಮಹತ್ಯೆಗೆ ಮುನ್ನ ಸ್ನೇಹಿತನಿಗೆ ಕರೆ ಮಾಡಿದ್ದ ಚರಣ್. ಬೈಕ್ ತೆಗೆದುಕೊಂಡು ಬಂದಿದ್ದೇನೆ, ಕೆರೆ ಪಕ್ಕದಲ್ಲಿ ಇರುತ್ತೆ, ತೆಗೆದುಕೊಂಡು ಹೋಗು ಎಂದು ಸ್ನೇಹಿತನಿಗೆ ಕರೆ ಮಾಡಿ ಹೇಳಿದ ಚರಣ್. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚರಣ್. ಬೆಂಗಳೂರಿನಲ್ಲೇ ಮದುವೆಯಾಗಿದ್ದ ನಾಗರತ್ನ ರನ್ನು ಪ್ರೀತಿಸಿದ್ದ. ಗಂಡನಿಗೆ ಗೊತ್ತಾಗಿ ಎರಡು ಕುಟುಂಬದ ನಡುವೆ ಜಗಳವಾಗಿತ್ತು. 

ನಾಲ್ಕು ದಿನದ ಹಿಂದೆ ಬೈಕಿನಲ್ಲಿಯೇ ಮನೆ ಬಿಟ್ಟು ಬಂದಿತ್ತು ಈ ಜೋಡಿ. ಸ್ನೇಹಿತನಿಗೆ ಕರೆ ಮಾಡಿ, ನಾವು ಕೆರೆಗೆ ಹಾರುತ್ತಿದ್ದೇವೆ. ಬೈಕ್ ತೆಗೆದುಕೊಂಡು ಹೋಗಲು ಹೇಳು ಎಂದು ಹೇಳಿದ್ದ ಚರಣ್. ನಾನು ಬರುವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಎಂದು ಪರಿಪರಿಯಾಗಿ ಸ್ನೇಹಿತ ಕೇಳಿಕೊಂಡರೂ ಚರಣ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ನಾಗರತ್ನ ಹಾಗೂ ಚರಣ್ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದ ನಾಗರತ್ನ ಪತಿ ಪ್ರಸನ್ನಕುಮಾರ್.

click me!