Davanagere Crime News: ಪ್ರಿಯಕರನೊಂದಿಗೆ ಗೃಹಿಣಿ ಕೆರೆಗೆ ಹಾರಿ ಆತ್ಮಹತ್ಯೆ

By Ravi Nayak  |  First Published Aug 18, 2022, 12:09 PM IST

ದಾವಣಗೆರೆಯ ಬೆಂಕಿಕೆರೆ ಗ್ರಾಮದ ಕೆರೆಗೆ ಹಾರಿ ಇಬ್ಬರು ಯುವಕ-ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ನಿಗೂಢ


ದಾವಣಗೆರೆ (ಆ.18) : ದಾವಣಗೆರೆಯ ಬೆಂಕಿಕೆರೆ ಗ್ರಾಮದ ಕೆರೆಗೆ ಹಾರಿ ಇಬ್ಬರು ಯುವಕ-ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚೆನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮ. ನಿನ್ನೆ ತಡರಾತ್ರಿ ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಯುವಕ-ಯುವತಿ ಏಕಕಾಲಕ್ಕೆ ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ ಅದ್ಯಾಗೂ ಇಬ್ಬರು ಪ್ರೇಮಿಗಳಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕೆರೆಯಿಂದ ಮೃತದೇಹಗಳನ್ನ ಹೊರತೆಗೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರೀಕ್ಷೆಗೊಳಪಡಿಸಿದ್ದಾರೆ. ಚೆನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕೆರೆಗೆ ಬಿದ್ದು ಜೋಡಿ ಆತ್ಮಹತ್ಯೆ ಪ್ರಕರಣ ಟ್ವಿಸ್ಟ್: 
ಮದುವೆಯಾಗಿದ್ದ ಮಹಿಳೆಯನ್ನು ಪ್ರೀತಿಸಿ ಸಂಬಂಧ ಇಟ್ಟುಕೊಂಡಿದ್ದ ಯುವಕ ಚರಣ್(23) ನಾಗರತ್ನ (21). ಅತ್ಮಹತ್ಯೆ ಮಾಡಿಕೊಂಡ ಜೋಡಿಗಳು‌. ಆತ್ಮಹತ್ಯೆಗೆ ಮುನ್ನ ಸ್ನೇಹಿತನಿಗೆ ಕರೆ ಮಾಡಿದ್ದ ಚರಣ್. ಬೈಕ್ ತೆಗೆದುಕೊಂಡು ಬಂದಿದ್ದೇನೆ, ಕೆರೆ ಪಕ್ಕದಲ್ಲಿ ಇರುತ್ತೆ, ತೆಗೆದುಕೊಂಡು ಹೋಗು ಎಂದು ಸ್ನೇಹಿತನಿಗೆ ಕರೆ ಮಾಡಿ ಹೇಳಿದ ಚರಣ್. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚರಣ್. ಬೆಂಗಳೂರಿನಲ್ಲೇ ಮದುವೆಯಾಗಿದ್ದ ನಾಗರತ್ನ ರನ್ನು ಪ್ರೀತಿಸಿದ್ದ. ಗಂಡನಿಗೆ ಗೊತ್ತಾಗಿ ಎರಡು ಕುಟುಂಬದ ನಡುವೆ ಜಗಳವಾಗಿತ್ತು. 

ನಾಲ್ಕು ದಿನದ ಹಿಂದೆ ಬೈಕಿನಲ್ಲಿಯೇ ಮನೆ ಬಿಟ್ಟು ಬಂದಿತ್ತು ಈ ಜೋಡಿ. ಸ್ನೇಹಿತನಿಗೆ ಕರೆ ಮಾಡಿ, ನಾವು ಕೆರೆಗೆ ಹಾರುತ್ತಿದ್ದೇವೆ. ಬೈಕ್ ತೆಗೆದುಕೊಂಡು ಹೋಗಲು ಹೇಳು ಎಂದು ಹೇಳಿದ್ದ ಚರಣ್. ನಾನು ಬರುವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಎಂದು ಪರಿಪರಿಯಾಗಿ ಸ್ನೇಹಿತ ಕೇಳಿಕೊಂಡರೂ ಚರಣ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ನಾಗರತ್ನ ಹಾಗೂ ಚರಣ್ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದ ನಾಗರತ್ನ ಪತಿ ಪ್ರಸನ್ನಕುಮಾರ್.

Tap to resize

Latest Videos

ಜೊತೆಯಾಗಿ ಬದುಕಬೇಕಾದವರು, ಒಂದೇ ಚಿತೆಯಲ್ಲಿ ಬೂದಿಯಾದರು

click me!