ಗಂಡ ಬಿಟ್ಟವಳಿಗೆ ಜೀವನ ಕೊಡುವುದಾಗಿ ರಿಜಿಸ್ಟರ್ ಮ್ಯಾರೇಜ್ ಆದ ಪತಿ
ಹಾಸ್ಟೆಲ್‌ನಲ್ಲಿದ್ದ ಮಗನನ್ನು ಕರೆತಂದು ಬಿರಿಯಾನಿ ತಿನ್ನಿಸಿ ಕೊಲೆ
ಮೊದಲ ಪತಿಯ ಮಗನನ್ನು ಕೊಲೆ ಮಾಡಿದ ಎರಡನೇ ಪತಿ
ಬೆಂಗಳೂರು (ಮಾ.12): ಮದುವೆಯಾಗಿ ಇಬ್ಬರು ಮಕ್ಕಳಿದ್ದ ಮಹಿಳೆ ಗಂಡನ ಕಿರುಕುಳಕ್ಕೆ ಬೇಸತ್ತು ಆತನಿಂದ ದೂರವಾಗಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಳು. ಆದರೆ, ನಾನು ನುನ್ನನ್ನು ಹಾಗೂ ನಿನ್ನ ಮಕ್ಕಳನ್ನು ಪೋಷಣೆ ಮಾಡುತ್ತೇನೆಂದು ಒಬ್ಬಂಟಿ ಮಹಿಳೆಯನ್ನು ಮದುವೆಯಾದ ವ್ಯಕ್ತಿ ಆಕೆಯ ಮಗನನ್ನೇ ಕೊಂದು ಕೆರೆಗೆ ಬೀಸಾಡಿದ್ದಾನೆ.
ಬೆಂಗಳೂರಿನಲ್ಲಿ ವಾಸವಿದ್ದ ಕುಟುಂಬದಲ್ಲಿ ಪತಿ, ಪತ್ನಿ ಅನ್ಯೋನ್ಯವಾಗಿದ್ದು, ಹೊಂದಾಣಿಕೆಯಿಂದ ಇದ್ದರೆ ಮಾತ್ರ ಜೀವನ ಸುಗಮವಾಗಿ ಸಾಗುತ್ತದೆ. ಇಲ್ಲವಾದರೆ ಆರ್ಥಿಕ ಸಬಲರಾಗಿರುವ ಮಹಿಳೆಯರು ಗಂಡನನ್ನು ಬಿಟ್ಟು ಮಕ್ಕಳೊಂದಿಗೆ ಸ್ವತಂತ್ರ್ಯವಾಗಿ ಜೀವನ ಮಾಡುತ್ತಾರೆ. ಆದರೆ, ಹೀಗ ಮೊದಲ ಗಂಡನನ್ನು ಬಿಟ್ಟು ಮಕ್ಕಳೊಂದಿಗೆ ವಾಸವಿದ್ದ ಮಹಿಳೆಯನ್ನು ಪುಸಲಾಯಿಸಿದ ವ್ಯಕ್ತಿ, ಆಕೆಯನ್ನು ಹಾಗೂ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಮದುವೆ ಮಾಡಿಕೊಂಡಿದ್ದಾನೆ. ಆದರೆ, ಬರಬರುತ್ತಾ ಪತ್ನಿಯ ಮೇಲೆ ಅನೈತಿಕ ಸಂಬಂಧದ ಶಂಕೆಯನ್ನು ವ್ಯಕ್ತಪಡಿಸಿ ಆಕೆಯ ಮೊದಲ ಪತಿಯ ಮಗನನ್ನು ಕೊಲೆ ಮಾಡಿ ಕೆರೆಗೆ ಬೀಸಾಡಿದ್ದಾನೆ.
ಇದನ್ನೂ ಓದಿ: ಕಡಿಮೆ ಕೂಲಿಗೆ ಮನೆಗೆಲಸಕ್ಕೆ ಸೇರಿದ ನೇಪಾಳಿ ಪೋರಿ: ಮಾಲೀಕನ ಮನೆಗೆ ಕನ್ನ ಹಾಕಿ ಪರಾರಿ
ಎರಡನೇ ಪತಿಯಿಂದ ಪತ್ನಿಯ ಮೊದಲ ಮಗನ ಹತ್ಯೆ: ಕಳೆದ ಒಂದು ವರ್ಷದ ಹಿಂದೆ ಗಂಡನನ್ನು ಬಿಟ್ಟು ಪ್ರತ್ಯೇಕವಾಗಿ ಮಕ್ಕಳೊಂದಿಗೆ ವಾಸವಿದ್ದ ಪುಷ್ಪ ಎಂಬಾಕೆ ಸಂಪತ್ ಎಂಬಾತನನ್ನು ಎರಡನೇ ಮದುವೆ ಅಗಿದ್ದಳು. ಆಕೆಗೆ ಮೊದಲ ಪತಿಯೊಡನೆ ಸಂಸಾರ ನಡೆಸಿದ್ದರ ಫಲವಾಗಿ ಇಬ್ಬರು ಮಕ್ಕಳಿದ್ದರು. ಆ ಮಕ್ಕಳ ಪೈಕಿ ಮೊದಲ ಮಗ ಚೇತನ್ ಎಂಬ ಬಾಲಕನನ್ನು ಪತಿ ಸಂಪತ್ ಹತ್ಯೆ ಮಾಡಿದ್ದಾನೆ. ಪುಷ್ಪ ಮತ್ತು ಸಂಪತ್ ನಡುವೆ ಆಗಿಂದಾಗ್ಗೆ ಗಲಾಟೆ ನಡೆಯುತ್ತಿತ್ತು. ಪತ್ನಿ ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಿಂದ ಆಗಿಂದಾಗ್ಗೆ ಪತಿ ಸಂಪತ್ ಗಲಾಟೆ ಮಾಡುತ್ತಿದ್ದನು.
ಎರಡನೇ ಪತಿ ಕಿರುಕುಳ ತಾಳಲಾರದೇ ಪ್ರತ್ಯೇಕ ವಾಸ: ಈ ಕಾರಣಕ್ಕೆ ಎರಡನೇ ಪತಿಯಿಂದಲೂ ಮಹಿಳೆ ದೂರವಾಗಿ ಬೆಂಗಳೂರಿನ ಹೊರಭಾಗದಲ್ಲಿ ವಾಸವಾಗಿದ್ದಳು. ಇದರಿಂದ ಪತ್ನಿ ಪುಷ್ಪಾಳ ಮೇಲೆ ಕೋಪ ಮಾಡಿಕೊಂಡಿದ್ದ ಸಂಪತ್ ಆಕೆಯನ್ನು ತನ್ನೊಂದಿಗೆ ಬಂದು ಜೀವನ ಮಾಡುವಂತೆ ಕಿರುಕುಳ ನೀಡುತ್ತಿದ್ದನು. ಆದರೆ, ಗಂಡ- ಹೆಂಡತಿಯ ಜಗಳ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರಬಾರದು ಎಂದು ಪುಷ್ಪಾ ತನ್ನ ಹಿರಿಯ ಮಗನನ್ನು ಬಾಗಲೂರಿನ ವಸತಿ ಶಾಲೆಯಲ್ಲಿ ಇರಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಳು.
ಹಾಸ್ಟೆಲ್‌ನಿಂದ ಕರೆತಂದು ಬಿರಿಯಾನಿ ತಿನ್ನಿಸಿ ಕೊಲೆ: ಇನ್ನು ಪತ್ನಿ ತನ್ನೊಂದಿಗೆ ಇರದೇ ಬೇರೆಡೆ ಹೋಗಿ ಜೀವನ ಮಾಡುತ್ತಿದ್ದುದನ್ನು ಸಹಿಸಿಕೊಳ್ಳದ ಪತಿ ಸಂಪತ್ ಕಳೆದ ಫೆ.25ರಂದು ಪುಷ್ಪಾಳ ಮೊದಲ ಪತಿಯ ಮಗ ಚೇತನ್ ಇರುವ ಬಾಗಲೂರಿನ ಹಾಸ್ಟೆಲ್‌ಗೆ ಹೋಗಿ, ಅಲ್ಲಿಂದ ಆಕೆಯ ಮಗನನ್ನು ಕರೆದುಕೊಂಡು ಹೋಗಿದ್ದಾನೆ. ಇನ್ನು ಮಗನಿಗೆ ಹೋಸಕೋಟೆ ಪಟ್ಟಣದ ಬಳಿ ಹೋಟೆಲ್ ಒಂದರಲ್ಲಿ ಬಿರಿಯಾನಿ ಕೊಡಿಸಿದ್ದಾನೆ. ನಂತರ, ಪತ್ನಿ ಪುಷ್ಪಾಳಿಗೆ ಕರೆ ಮಾಡಿ ನೀನು ನನ್ನೊಂದಿಗೆ ಬರಬೇಕು ಎಂದು ಬೆದರಿಕೆ ಹಾಕಿದ್ದಾನೆ. ಇದಕ್ಕೆ ಪುಷ್ಪಾ ಸ್ಪಧಿಸದಿದ್ದಾಗ ಆಕೆಯ ಮಗ ಚೇತನ್‌ನನ್ನು ಕೊಲೆ ಮಾಡಿದ್ದಾನೆ.
ಬಾಯ್‌ಫ್ರೆಂಡ್ ನೋಡಲು ದುಬೈನಿಂದ ಬಂದಿದ್ದ ಗಗನಸಖಿ ಸೂಸೈಡ್, ರೂಮ್‌ಅಲ್ಲಿ ಆಗಿದ್ದೇನು?
ರಾಮಪುರ ಕೆರೆಯಲ್ಲಿ ಮೃತದೇಹ ಎಸೆದು ಪರಾರಿ: ಪತ್ನಿ ಪುಷ್ಪಾಳ ಮೇಲಿನ ಕೋಪದಿಂದಾಗಿ ಆಕೆಯ ಮಗನನ್ನು ಕೊಲೆ ಮಾಡಿದ ಆರೋಪಿ ಸಂಪತ್ ಮಗನ ಮೃತದೇಹವನ್ನು ಕೆ ಜಿ ಎಫ್ ಬಳಿಯ ಕ್ಯಾಸಂಬಳ್ಳಿಯ ರಾಮಪುರ ಕೆರೆಗೆ ಬಿಸಾಡಿದ್ದಾನೆ. ನಂತರ ಈ ಬಗ್ಗೆ ಪಪತ್ನಿ ಪುಷ್ಪಾ ಸಂಪತ್‌ನನ್ನು ಹಿಡಿದು ತರಾಟೆಗೆ ತೆಗೆದುಕೊಂಡು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಸಂಪತ್ ಅತ್ಮಹತ್ಯೆ ಮಾಡಿಕೊಳ್ಳಲು ಯತ್ನ ಮಾಡಿದ್ದಾನೆ. ವಿಷ ಕುಡಿದವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆತ ಗುಣಮುಖನಾದ ನಂತರ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಮಾಡಿ ಕೆರೆಗೆ ಮೃತದೇಹವನ್ನು ಬೀಸಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೊಲೆ ಆರೋಪಿ ಸಂಪತ್‌ನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.