ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

By Kannadaprabha News  |  First Published Mar 12, 2023, 7:37 AM IST

ನಗರದ ಪಡೀಲ್‌ ದರ್ಬಾರ್‌ ಗುಡ್ಡೆಯ ಬಳಿ ಶುಕ್ರವಾರ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆಯಾಗಿದೆ. 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಹಗ್ಗ ಬಳಸಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿದೆ


ಮಂಗಳೂರು (ಮಾ.12):  ಮಂಗಳೂರು: ನಗರದ ಪಡೀಲ್‌ ದರ್ಬಾರ್‌ ಗುಡ್ಡೆಯ ಬಳಿ ಶುಕ್ರವಾರ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆಯಾಗಿದೆ. ಅಶೋಕ ಶೆಟ್ಟಿಅವರ ಜಾಗವನ್ನು ಫಾರೂಕ್‌ ಖರೀದಿಸಿದ್ದು ಅದಕ್ಕೆ ಆವರಣ ಗೋಡೆ ಕಟ್ಟುತ್ತಿದ್ದ ಕೆಲಸಗಾರರಿಗೆ ಪಕ್ಕದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಜಾಗದ ಗಿಡಗಳ ನಡುವೆ ವಾಸನೆ ಬರುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಸುಮಾರು 35ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಹಗ್ಗ ಬಳಸಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಸಂಪೂರ್ಣ ಕೊಳೆತ ಮೃತದೇಹ ಪತ್ತೆಯಾಗಿದೆ.

ಸುಮಾರು 5 ಅಡಿ ಎತ್ತರವಿದ್ದು ಬೂದು ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ. ಮಾಹಿತಿ ಇದ್ದವರು ಕಂಕನಾಡಿ ನಗರ ಪೊಲೀಸ್‌ ಠಾಣೆ (0824-2220529) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

ಬಂಟ್ವಾಳ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಇನ್ನೊಂದು ಶವ ಪತ್ತೆ:

ಪಡೀಲ್‌ ಮಸೀದಿ(Padil Masjid) ಬಳಿ ಶುಕ್ರವಾರ ಸುಮಾರು 45ರಿಂದ 50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. 5.5 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಕಪ್ಪು ತಲೆಕೂದಲು, ಮೀಸೆ, ಬಿಳಿ ಬಣ್ಣದ ಕುರುಚಲು ಗಡ್ಡ ಹೊಂದಿದ್ದಾರೆ. ಗೆರೆಗಳಿರುವ ಮಾಸಲು ಬಿಳಿ ಬಣ್ಣದ ಅರ್ಧ ತೋಳಿನ ಶರ್ಚ್‌ ಹಾಗೂ ಕೇಸರಿ ಬಣ್ಣದ ಲುಂಗಿ ಧರಿಸಿದ್ದಾರೆ. ಮಾಹಿತಿ ಇರುವವರು ಕಂಕನಾಡಿ ನಗರ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಮಹಿಳೆಯನ್ನು ಯಾಮರಿಸಿ ಹಣ ಎಗರಿಸಿದ್ದ ನಕಲಿ ಪೊಲೀಸ್‌ ಸೆರೆ  

ಮಂಗಳೂರು : ಪೊಲೀಸ್‌ ಎಂದು ಬೆದರಿಸಿ ಮಹಿಳೆಯಿಂದ ಹಣ ವಸೂಲಿ ಮಾಡಿದಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಕಾವೂರು ಈಶ್ವರ ನಗರ ಸರಕಾರಿ ಗುಡ್ಡೆಯ ನಿವಾಸಿ ಶಿವರಾಜ್‌ ದೇವಾಡಿಗ(Shivaraj devadiga fake police) ಬಂಧಿತ ನಕಲಿ ಪೊಲೀಸ್‌.

Crime News: ಮನೆಯಲ್ಲೇ ವೇಶ್ಯಾವಾಟಿಕೆ; ಮಹಿಳಾ ಪಿಂಪ್‌ ಅರೆಸ್ಟ್

ಆರೋಪಿಯು ತಾನು ಪೊಲೀಸ್‌ ಎಂದು ಹೇಳಿಕೊಂಡು ಮಹಿಳೆ(woman)ಯೊಬ್ಬರಿಂದ ಬೆದರಿಸಿ ಹಣ ವಸೂಲಿ ಮಾಡಿದ್ದನು. ಅನಧಿಕೃತವಾಗಿ ಮಸಾಜ್‌ ಪಾರ್ಲರ್‌ ನಡೆಸುತ್ತಿರುವುದು ಹಾಗೂ ಹೆಚ್ಚು ಬಂಗಾರ ಮತ್ತು ಹಣವನ್ನು ಇರಿಸಿಕೊಂಡ ಬಗ್ಗೆ ನಮಗೆ ದೂರು ಬಂದಿದೆ. ಪ್ರಕರಣ ಮುಚ್ಚಿಹಾಕಲು ಹಣ ಕೊಡಬೇಕು. ಇಲ್ಲಿದ್ದರೆ ಮಸಾಜ್‌ ಪಾರ್ಲರ್‌ ಹಾಗೂ ಮನೆಗೆ ದಾಳಿ ನಡೆಸುವುದಾಗಿ ಆರೋಪಿ ಬೆದರಿಸಿದ್ದ. ಇದರಿಂದ ಬೆದರಿದ ಮಹಿಳೆ ಆತ ನೀಡಿದ ಮೊಬೈಲ್‌ ನಂಬರಿಗೆ 18,000 ರು. ಹಾಗೂ 20,000 ರು.ನಂತೆ ಎರಡು ಬಾರಿ ಒಟ್ಟು 38,000 ರು. ಹಣ ಪಾವತಿಸಿದ್ದರು. ಬಳಿಕ ಆತನ ಬಗ್ಗೆ ಸಂಶಯಗೊಂಡ ಮಹಿಳೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿತ್ತು. ನಂತರ ಕಾವೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

click me!