
ಆನೇಕಲ್ (ಡಿ.6) : ದಂಪತಿಯ ನಡುವೆ ನಡೆದ ಜಗಳ ತಾರಕಕ್ಕೇರಿ ಬೇಸರಗೊಂಡ ಪತ್ನಿಯು ಪ್ರಿಯಕರನ ಮಾತಿನಂತೆ ಪತಿಯ ಮೊಬೈಲ್‌ನಿಂದ ಅರ್‌ಡಿಎಕ್ಸ್ ಸ್ಫೋಟಗೊಳಿಸುವುದಾಗಿ ತನಿಖಾ ಸಂಸ್ಥೆಗಳಿಗೆ ಬೆದರಿಕೆ ಮೆಸೇಜ್ ಕಳಿಸಿದ್ದ ಘಟನೆ ಅನೇಕಲ್ ಠಾಣಾ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ಘಟಿಸಿದೆ.
ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ವಾಸವಿದ್ದಾರೆ. ವಿದ್ಯಾರಾಣಿಗೆ ರಾಮ್‌ಪ್ರಸಾದ್ ಎಂಬಾತ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದು, ನಿರಂತರ ಚ್ಯಾಟಿಂಗ್ ನಲ್ಲಿ ನಿರತರಾಗಿದ್ದರು. ವಿದ್ಯಾರಾಣಿಯ ಗಂಡ ಕಿರಣ್‌ಗೆ ವಿಷಯ ಗೊತ್ತಾಗಿ ಜಗಳ ನಡೆದು ಪತ್ನಿಯ ಮೊಬೈಲನ್ನು ನೆಲಕ್ಕೆ ಎಸೆದು ಒಡೆದು ಹಾಕಿದ್ದರು.
ಉಪ್ಪಿನಕಾಯಿ ಕೇಳುವ ನೆಪದಲ್ಲಿ ವಿಧವೆ ಗಲ್ಲ ಕಚ್ಚಿ ರೇಪ್ ಮಾಡಲು ಯತ್ನಿಸಿದ ಕಾಮುಕ!
ಈ ವಿಚಾರವನ್ನು ಬೇರೆ ನಂಬರ್ ಮೂಲಕ ರಾಮ್‌ಪ್ರಸಾದ್‌ಗೆ ತಿಳಿಸಿದ್ದ ವಿದ್ಯಾರಾಣಿ ತನ್ನ ಗಂಡ ಕಿರಣ್‌ಗೆ ಬುದ್ಧಿ ಕಲಿಸಲು ಸಂಚು ಮಾಡಿ ಪ್ರಿಯಕರ ಕಳುಹಿಸಿದ ‘ಡಿಸೆಂಬರ್ 5ರಂದು ಆರ್‌ಡಿಎಸ್ ಬಾಂಬ್ ಹಾಕುತ್ತೇನೆ’ ಎಂಬ ಬೆದರಿಕೆ ಮೆಸೇಜನ್ನು ಗಂಡನ ಮೊಬೈಲ್ ಮೂಲಕ ಪ್ರಿಯಕರನಿಗೆ ಮರಳಿ ಫಾರ್ವಡ್ ಮಾಡಿದಳು. ಹಾಗೆಯೇ ಇದೇ ಮೆಸೇಜನ್ನು ಕಿರಣ್ ನಂಬರ್‌ನಿಂದ ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೂ ಕಳುಹಿಸಿದ್ದಳು.
ಚಿನ್ನ ಖರೀದಿಸುವ ನೆಪದಲ್ಲಿ ಮಾಂಗಲ್ಯ ಸರ ಎಗರಿಸಿದ ಖತರ್ನಾಕ್ ಮಹಿಳೆಯರು!
ಬಳಿಕ ಗಂಡನ ಮೊಬೈಲ್‌ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಮೂಲ ಹುಡುಕಿ ಹೊರಟಿದ್ದ ತನಿಖಾ ಸಂಸ್ಥೆಗಳು ಕಿರಣ್ ಮನೆಗೆ ಬಂದು ವಿಚಾರಣೆಗೆ ಒಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿತು.
ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಠಾಣೆಗೆ ಭೇಟಿ ನೀಡಿದ್ದರು. ಶೀಘ್ರದಲ್ಲೇ ವಿದ್ಯಾ ರಾಣಿಯ ಪ್ರಿಯಕರ ರಾಮಪ್ರಸಾದ್ ನನ್ನ ಬಂದಿಸಲಾಗುವುದೆಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ