ಉಪ್ಪಿನಕಾಯಿ ಕೇಳುವ ನೆಪದಲ್ಲಿ ವಿಧವೆ ಗಲ್ಲ ಕಚ್ಚಿ ರೇಪ್‌ ಮಾಡಲು ಯತ್ನಿಸಿದ ಕಾಮುಕ!

By Kannadaprabha News  |  First Published Dec 6, 2023, 4:18 AM IST

ಉಪ್ಪಿನ ಕಾಯಿ ಕೇಳುವ ನೆಪದಲ್ಲಿ ಮನೆಗೆ ಕಿಡಿಗೇಡಿಯೊಬ್ಬ ನುಗ್ಗಿ ಮಹಿಳೆಯೊಬ್ಬರ ಕಣ್ಣಿನ ಕೆಳ ಭಾಗದ ಗಲ್ಲವನ್ನು ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಹಳೆ ಬಾತಿ ಗ್ರಾಮದ ಗುಡ್ಡದ ಕ್ಯಾಂಪ್ ನಲ್ಲಿ ವರದಿಯಾಗಿದೆ.


ದಾವಣಗೆರೆ (ಡಿ.6) :  ಉಪ್ಪಿನ ಕಾಯಿ ಕೇಳುವ ನೆಪದಲ್ಲಿ ಮನೆಗೆ ಕಿಡಿಗೇಡಿಯೊಬ್ಬ ನುಗ್ಗಿ ಮಹಿಳೆಯೊಬ್ಬರ ಕಣ್ಣಿನ ಕೆಳ ಭಾಗದ ಗಲ್ಲವನ್ನು ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಹಳೆ ಬಾತಿ ಗ್ರಾಮದ ಗುಡ್ಡದ ಕ್ಯಾಂಪ್ ನಲ್ಲಿ ವರದಿಯಾಗಿದೆ.

ತಾಲೂಕಿನ ಹಳೆ ಬಾತಿ ಗ್ರಾಮದ ಗುಡ್ಡದ ಕ್ಯಾಂಪ್‌ನಲ್ಲಿ 34 ವರ್ಷದ ವಿಧವಾ ಮಹಿಳೆಯೊಬ್ಬರು ಟೈಲರಿಂಗ್ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಡಿ.1ರಂದು ಸಂಜೆ ವೇಳೆ ವಿಧವಾ ಮಹಿಳೆ ತನ್ನ ಮನೆಯಲ್ಲಿ ಬಟ್ಟೆ ಹೊಲೆಯುತ್ತಿದ್ದ ವೇಳೆ ದಾಸರ ಮಂಜಪ್ಪ(47 ವರ್ಷ) ಎಂಬಾತ ಉಪ್ಪಿನ ಕಾಯಿ ಕೇಳಿಕೊಂಡು ಆಕೆಯ ಮನೆ ಬಳಿಗೆ ಧಾವಿಸಿದ್ದಾನೆ.

Tap to resize

Latest Videos

ಮನೆಯ ಬಾಗಿಲಲ್ಲಿ ನಿಂತು, ಯಾರೋ ಉಪ್ಪಿನ ಕಾಯಿ ಬೇಕೆಂದು ಕೂಗಿದ್ದರಿಂದ ವಿಧವಾ ಮಹಿಳೆ ಬಾಗಿಲ ಬಳಿ ಬಂದು ತಾವು ಉಪ್ಪಿನಕಾಯಿ ಮಾರುವುದಿಲ್ಲವೆಂದು ಹೇಳಿ, ಒಳಹೋಗಿದ್ದಾರೆ. ಅಷ್ಟರಲ್ಲಿ ದಾಸರ ಮಂಜಪ್ಪ ಆಕೆಯ ಹಿಂದೆಯೇ ಮನೆ ಒಳಗೆ ನುಗ್ಗಿದ್ದಾನೆ. ಅಷ್ಟರಲ್ಲೇ ಮಂಜಪ್ಪನು ಆ ಮಹಿಳೆ ಹಿಡಿದುಕೊಂಡು, ಮೈ-ಕೈ ಮುಟ್ಟಿ, ಆಕೆಯ ಮೈಮೇಲಿನ ಬಟ್ಟೆ ಎಳೆದಾಡಿ, ಅನುಚಿತ ವರ್ತನೆ ತೋರಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕಾಂಗ್ರೆಸ್‌ನವರೇ ಕೋಮುವಾದಿಗಳು; ಸಿದ್ದರಾಮಯ್ಯ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ

ವಿಧವಾ ಮಹಿಳೆ ಕಿಡಿಗೇಡಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಜೋರಾಗಿ ಕೂಗಿ, ಮನೆ ಹೊರಗಡೆ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಆಕೆಯನ್ನು ನೆಲಕ್ಕೆ ಬೀಳಿಸಿ, ಕೈಯಿಂದ ಬಾಯಿಯನ್ನು ಮುಚ್ಚಿದ ಆರೋಪಿಯು ಬಲಾತ್ಕಾರ ಮಾಡಲು ಮುಂದಾಗಿದ್ದಾರೆ. ಸಂತ್ರಸ್ತೆಯ ಎಡಗಣ್ಣಿನ ಕೆಳ ಭಾಗಕ್ಕೆ ಕಚ್ಚಿ, ಅತ್ಯಾಚಾರಕ್ಕೆ ಯತ್ನಿಸಿದಾಗ ಕೊಸರಾಡಿ ತನ್ನ ಬಾಯಿ ಬಿಡಿಸಿಕೊಂಡ ಮಹಿಳೆ ಜೋರಾಗಿ ಕೂಗಲಾರಂಭಿಸಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮಹಿಳೆಯ ಕೂಗಾಟ ಕೇಳಿಸಿಕೊಂಡ ಸಂತ್ರಸ್ತೆಯ ಅಳಿಯ, ನೆರೆ ಹೊರೆಯವರು ಬಾಯಿ ಮಾಡಿಕೊಂಡು ಮನೆಯತ್ತ ಬರುತ್ತಿದ್ದಂತೆಯೇ ಕಿಡಿಗೇಡಿ ದಾಸರ ಮಂಜಪ್ಪ ವಿಧವಾ ಮಹಿಳೆಗೆ ಈ ವಿಚಾರವನ್ನು ಯಾರ ಬಳಿಯಾದರೂ ಬಾಯಿ ಬಿಟ್ಟರೆ, ನಿನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟರಲ್ಲಿ ಸಂತ್ರಸ್ತೆಯ ಸಂಬಂಧಿ ಯುವಕ ಹಾಗೂ ನೆರೆ ಹೊರೆಯ ಜನರು ಬರುತ್ತಿದ್ದಂತೆ ದಾಸರ ಮಂಜಪ್ಪ ಅಲ್ಲಿಂದ ಓಡಿ ಹೋಗಿದ್ದಾನೆಂದು ದೂರು ನೀಡಲಾಗಿದೆ.

 

ಕರ್ನಾಟಕದಲ್ಲಿ ಹೆಚ್ಚಿದ ಮಹಿಳಾ ದೌರ್ಜನ್ಯ, ಕೊಲೆ ಪ್ರಕರಣ: ಬೆಂಗಳೂರು ನಂ. 3

ಮಹಿಳೆಯಿಂದ ದೂರು ದಾಖಲು:

ಹಳೆ ಬಾತಿ ಗ್ರಾಮದ ದಾಸರ ಮಂಜಪ್ಪನು ಉಪ್ಪಿನ ಕಾಯಿ ಕೇಳಿಕೊಂಡು ತಮ್ಮ ಮನೆ ಬಳಿ ಬಂದು, ಏಕಾಏಕಿ ಮನೆಯೊಳಗೆ ನುಗ್ಗಿ ತಮ್ಮ ಸೀರೆಯನ್ನು ಹಿಡಿದು, ಎಳೆದಾಡಿ ಬಾಯಿಯಿಂದ ಕಚ್ಚಿ, ಬಲಾತ್ಕಾರಕ್ಕೆ ಪ್ರಯತ್ನಿಸಿದ್ದಾನೆ. ತಮಗೆ ಪ್ರಾಣ ಬೆದರಿಕೆಯನ್ನು ಹಾಕಿರುವ ಆರೋಪಿ ದಾಸರ ಮಂಜಪ್ಪನನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೊಂದ ವಿಧವಾ ಮಹಿಳೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಸದ್ಯ ತಲೆ ಮರೆಸಿಕೊಂಡಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್‌ 354(ಎ) ಮತ್ತು (ಬಿ), 448, 376, 506ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.

..............

click me!