ವ್ಯಕ್ತಿಯೊಬ್ಬರು ತಮ್ಮ ಮನೆಯ ನಾಯಿಗೆ ಬೈಯ್ದಿರುವುದನ್ನು ತಪ್ಪಾಗಿ ಅರ್ಥೈಸಿಕೊಂಡು ಪಕ್ಕದ ಮನೆಯ ದಂಪತಿ ಆತನ ಮುಖಕ್ಕೆ ಆಸಿಡ್ ಎರಚಿರುವ ಘಟನೆ ತಾಲೂಕಿನ ಕಡಹಿನಬೈಲು ಗ್ರಾಮದ ಹಾಳು ಕರುಗುಂದ ಎಂಬಲ್ಲಿ ಭಾನುವಾರ ಸಂಜೆ 7 ಗಂಟೆಯ ಹೊತ್ತಿಗೆ ನಡೆದಿದೆ.
ನರಸಿಂಹರಾಜಪುರ (ಡಿ.6) ವ್ಯಕ್ತಿಯೊಬ್ಬರು ತಮ್ಮ ಮನೆಯ ನಾಯಿಗೆ ಬೈಯ್ದಿರುವುದನ್ನು ತಪ್ಪಾಗಿ ಅರ್ಥೈಸಿಕೊಂಡು ಪಕ್ಕದ ಮನೆಯ ದಂಪತಿ ಆತನ ಮುಖಕ್ಕೆ ಆಸಿಡ್ ಎರಚಿರುವ ಘಟನೆ ತಾಲೂಕಿನ ಕಡಹಿನಬೈಲು ಗ್ರಾಮದ ಹಾಳು ಕರುಗುಂದ ಎಂಬಲ್ಲಿ ಭಾನುವಾರ ಸಂಜೆ 7 ಗಂಟೆಯ ಹೊತ್ತಿಗೆ ನಡೆದಿದೆ.
ಸುಂದರರಾಜ್ ಎಂಬುವವರೇ ಆ್ಯಸಿಡ್ ದಾಳಿಗೆ ತುತ್ತಾದವರು. ಅವರು ತಮ್ಮ ಮನೆಯ ನಾಯಿ ಬೊಗಳುತ್ತಿರುವುದನ್ನು ಕಂಡು ನಾಯಿಗೆ ಬಯ್ಯಲು ಶುರು ಮಾಡಿದಾಗ, ಪಕ್ಕದ ಮನೆಯ ಜೇಮ್ಸ್ ಹಾಗೂ ಮರಿಯಮ್ಮ ಅವರು ನಾಯಿಯ ಹೆಸರಿನಲ್ಲಿ ನಮಗೆ ಬಯ್ಯುತ್ತಿದ್ದೀಯ? ಎಂದು ಸುಂದರ್ ರಾಜ್ ಅವರನ್ನು ಮನೆಯ ಗೇಟಿನಿಂದ ಹೊರಗೆ ಬರುವಂತೆ ಹೇಳಿ, ಅವರ ಮೇಲೆ ಹಲ್ಲೆ ಮಾಡಿ, ಮುಖಕ್ಕೆ ಆಸಿಡ್ ಎರಚಿಸಿದ್ದಾರೆ. ಸುಂದರ್ ಮುಖಕ್ಕೆ ಹಾನಿಯಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಜೇಮ್ಸ್‌ನನ್ನು ಬಂಧಿಸಲಾಗಿದೆ. ಮರಿಯಮ್ಮ ತಲೆ ಮರೆಸಿಕೊಂಡಿದ್ದಾರೆ.
ಉಪ್ಪಿನಕಾಯಿ ಕೇಳುವ ನೆಪದಲ್ಲಿ ವಿಧವೆ ಗಲ್ಲ ಕಚ್ಚಿ ರೇಪ್ ಮಾಡಲು ಯತ್ನಿಸಿದ ಕಾಮುಕ!
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ
ಹೂವಿನಹಡಗಲಿ:: ತಾಲೂಕಿನ ವ್ಯಾಪ್ತಿಯ ಗ್ರಾಮವೊಂದರಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾರುತಿ ಹರಿಜನ ಎಂಬ ಆರೋಪಿಯಾಗಿದ್ದು, 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಆರೋಪಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂಬ ಪೋಷಕರ ದೂರಿನ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ಚಿನ್ನ ಖರೀದಿಸುವ ನೆಪದಲ್ಲಿ ಮಾಂಗಲ್ಯ ಸರ ಎಗರಿಸಿದ ಖತರ್ನಾಕ್ ಮಹಿಳೆಯರು