ತನ್ನ ಕಾಮದ ಸುಖಕ್ಕಾಗಿ ಪಕ್ಕದ್ಮನೆ ಯುವಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ. ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಪತ್ನಿ ಕೊಂದು ಹೈಡ್ರಾಮಾ ಮಾಡಿ ಸಿಕ್ಕಿಬಿದ್ದಿದ್ದಾಳೆ.
ಮೈಸೂರು, (ಜುಲೈ.09): ಮನೆಯಲ್ಲಿ ಹೆಂಡತಿ ಇದ್ರೂ ಊರು ತುಂಬೆಲ್ಲಾ ರಸಿಕನಂತೆ ಓಡಾಡಿಕೊಂಡಿದ್ದ. ಒಂದು ದಿನ ಹೆಂಡತಿಗೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡುಬಿಟ್ಟ. ಅಲ್ಲಿಂದ ಶುರುವಾದ ಇವರಿಬ್ಬರ ಅಕ್ರಮ ಸಂಬಂಧದ ವಾರ್ ಹೆಂಡತಿಯ ಕೊಲೆಯೊಂದಿಗೆ ಅಂತ್ಯವಾಗಿದೆ.
ಹೀಗೆ ಗಂಡನ ಕಾಮದಾಟಕ್ಕೆ ಬಲಿಯಾದ ಹೆಂಡತಿಯ ದುರಂತ ಕಥೆ ಮಂಡ್ಯ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ಮೈಸೂರು ಜಿಲ್ಲೆಯಲ್ಲೂ ಸಹ ಇದೇ ರೀತಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಪತ್ನಿ ತನ್ನ ಗಂಡನನ್ನೇ ಕೊಂದಿದ್ದಾಳೆ.
ಪರಿಚಯವಾದ ಕೆಲವೇ ದಿನಗಳಲ್ಲಿ ಅವನು ರೂಮ್‌ಗೆ ಕರೆದಿದ್ದ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ
ಹೌದು.... ಅಕ್ರಮ ಸಂಬಂಧ ಅಡ್ಡಿಯಾಗುತ್ತದೆ ಎಂದು ಪತ್ನಿ ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಹುಂಡಿಮಾಳ ಗ್ರಾಮದಲ್ಲಿ ನಡೆದಿದೆ.
36 ವರ್ಷದ ಲೋಕಮಣಿ ಕೊಲೆಯಾದ ದುರ್ದೈವಿ. 9 ವರ್ಷಗಳ ಹಿಂದೆ ಎಚ್.ಡಿ.ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ಶಿಲ್ಪಾಳ ಜೊತೆ ಲೋಕಮಣಿ ಮದುವೆಯಾಗಿತ್ತು. ಪಕ್ಕದ ಮನೆ ಯುವಕನ ಜೊತೆ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಈ ಬಗ್ಗೆ ಮನೆಯಲ್ಲಿ ಗಲಾಟೆ ನಡೆದಿತ್ತು. ಯಾರಿಗೂ ಹೇಳಬೇಡಿ ಅಂತಾ ಕ್ಷಮೆಯಾಚಿಸಿದ್ದ ಶಿಲ್ಪಾ ನಂತರ ಊಟದಲ್ಲಿ ವಿಷ ಹಾಕಿ ಕೊಂದಿದ್ದಾಳೆ.
ಪ್ರೇಯಸಿಗಾಗಿ ಹೆಂಡ್ತಿಯನ್ನೇ ಕೊಂದ ಪಾಪಿ ಪತಿ, ಪತ್ನಿಗೆ ಅಕ್ರಮ ಸಂಬಂಧ ಕಟ್ಟಲು ಗೆಳೆಯನನ್ನು ಕಳಿಸಿದ್ದ!
ಲೋಕಮಣಿ ಹಾಗೂ ಶಿಲ್ಪಾ ಮದುವೆಯಾಗಿ 9 ವರ್ಷಗಳೇ ಆಗಿದೆ. ದಂಪತಿಗೆ ಇಬ್ಬರು ಪುಟ್ಟ ಮಕ್ಕಳೂ ಇವೆ. ಆದರೆ ಮೋಹಕ್ಕೆ ಬಿದ್ದ ಪತ್ನಿ ಶಿಲ್ಪಾ 9 ವರ್ಷಗಳಿಂದಲೂ ಪಕ್ಕದ ಮನೆಯ ಪ್ರಿಯಕರ 32 ವರ್ಷದ ಅಭಿನಂದನ್ ಜೊತೆಗೆ ಲವ್ವಿಡವಿ ನಡೆಸಿದ್ದಾಳೆ. ಮೂಲತಃ ಎಚ್.ಡಿ.ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ಶಿಲ್ಪಾ 9 ವರ್ಷಗಳಿಂದಲೂ ಗಂಡನ ಮನೆಯಲ್ಲೇ ಇದ್ದಳು. ಗಂಡನ ಮನೆಯಲ್ಲೇ ಇದ್ದುಕೊಂಡು ಪಕ್ಕದ ಮನೆಯ ಪ್ರಿಯಕರನ ಜೊತೆ ಕಳ್ಳಾಟ ನಡೆಸಿದ್ದಾಳೆ.
ಬಳಿಕ ಹೃದಯಘಾತದಿಂದ ನಿಧನ ಹೊಂದಿದ್ದಾರೆಂದು ಬಿಂಬಿಸಿ ಅಂತ್ಯಕ್ರಿಯೆ ನಡೆಸಿದ್ದರು. ತನಿಖೆ ವೇಳೆ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಶಿಲ್ಪಾಳನ್ನು ಹುಣಸೂರು ಪೊಲೀಸರು ವಶಕ್ಕೆ ಪಡೆದಿದ್ದು, ನಾಪತ್ತೆಯಾಗಿರುವ ಯುವಕನಿಗಾಗಿ ಬಲೆ ಬೀಸಿದ್ದಾರೆ.
ಮಗನ ನೆನೆದು ಬಿಕ್ಕಿ ಬಿಕ್ಕಿ ಅತ್ತ ತಾಯಿ.
ಕೈಯಲ್ಲಿ ಸತ್ತುಹೋದ ತನ್ನ ಒಬ್ಬನೇ ಮಗನ ಪೋಟೋ. ದುಖಃ ಉಮ್ಮಳಿಸಿಬರುತ್ತಿರುವ ಕಣ್ಣೀರು. ಕಣ್ಣತುಂಬ ಸೋಸೆ ಮೇಲಿನ ಆಕ್ರೋಶದ ಸಿಟ್ಟು. ಮನೆ ಬೆಳಗಳು ಬಂದ ಸೋಸೆಯೇ ತನ್ನ ಮಗನನ್ನು ಕೊಂದ ಆಘಾತಕ್ಕೆ ಒಳಗಾದ ಅತ್ತೆ ಮನೆ ಮುಂದೆ ರೋಧಿಸುತ್ತಿದ ಪರಿ ಇದು. ಲೋಕಮಣಿ ತಾಯಿ ರಾಜಮ್ಮ ಅಳಲು ಇನ್ನಾದರೂ ನಿಂತಿಲ್ಲ. ಘಟನೆ ನಡೆದು ಒಂದು ತಿಂಗಳಾದರೂ ಮನೆ ಮುಂದೆ ಮಗನ ಪೋಟೋ ಹಿಡಿದು ರೋದಿಸತೊಡಗಿದ್ದಾಳೆ.
ಇನ್ನು ಇಬ್ಬರ ಕಳ್ಳಾಟ ಗಂಡನಿಗೆ ಗೊತ್ತಾಗುತ್ತಿದ್ದಂತೆ ಮನೆಯಲ್ಲಿ ಗಲಾಟೆ ಆಗಿದೆ. ಅತ್ತೆ ಮುಂದೆ ತಪ್ಪು ಒಪ್ಪೊಕೊಂಡ ಶಿಲ್ಪಾ ಮುಂದೆ ತಪ್ಪು ಮಾಡದಂತೆ ಒಪ್ಪಿಕಿಂಡಿದ್ದಾಳೆ. ಆದರೆ ಜೂನ್ 9 ರಂದು ಜೋರು ಗಲಾಟೆ ಮಾಡಿದ ಗಂಡ ರಾತ್ರಿ ಊಟ ಮಾಡುವ ವೇಳೆ ವಿಷವಿಕ್ಕಿ ಕೊಂದಿರುವ ಸತ್ಯ ತಿಂಗಳ ನಂತರ ಬಯಲಾಗಿದೆ. ಜೂನ್ 9ರಂದು ಊಟ ಮಾಡಿ ಮಲಗಿದ ಲೋಕಮಣಿ, ಬೆಳಗ್ಗೆ ಆಗುವಷ್ಟರಲ್ಲಿ ಹಾಸಿಗೆಯಲ್ಲೇ ಸಾವನಪ್ಪಿದ್ದ. ಆಗ ಹೆಂಡತಿ ಶಿಲ್ಪಾ ಹೃದಯಾಘಾತದಿಂದ ಪತಿ ಸತ್ತಿದ್ದಾನೆ ಅಂತ ಎಲ್ಲರನ್ನೂ ನಂಬಿಸಿದ್ದಾಳೆ. ಆದರೆ ಗಂಡ ಸತ್ತ ಮಾರನೇ ದಿನವೇ ಶಿಲ್ಪಾ ವರ್ತನೆ ಬದಲಾಗಿದ್ದು, ಅನುಮಾನ ಬಂದ ಅತ್ತೆ ನೀಡಿದ ದೂರಿನಿಂದ ಐನಾತಿಯ ಮೋಸದಾಟ ಬಯಲಾಗಿದೆ.
ಅಕ್ಕನಿಗೆ ಪೋನ್ ಮಾಡಿದ ದಿನವೇ ಹೆಣ
ಶಿಲ್ಪಾ ಮತ್ತು ಆಬಿ ನಡುವಿನ ಲವ್ವಿಡವ್ವಿ ಜೋರಾಗುತ್ತಿದ್ದಂತೆ ಗಂಡ ಲೋಕಮಣಿ ರೋಸಿ ಹೋಗಿದ್ದ. ಇದಕ್ಕೆ ಒಂದು ತೀರ್ಮಾನ ಮಾಡಲೇಬೇಕು ಅಂತ ಕೊಯಮತ್ತೂರಿನಲ್ಲಿರೋ ಅಕ್ಕ ಸಾವಿತ್ರಿಗೆ ಜೂನ್ 9 ರ ರಾತ್ರಿ 9 ಗಂಟೆಗೆ ಪೋನ್ ಮಾಡಿ ಊರಿಗೆ ಬರಲು ಹೇಳಿದ್ದ. ಆದರೆ ಬೆಳಿಗ್ಗೆ 5.30ಕ್ಕೆ ಊರಿಗೆ ಬಂದ ಅಕ್ಕನಿಗೆ ದರ್ಶನವಾಗಿದ್ದು ಮಾತ್ರ ತಮ್ಮನ ಹೆಣ. ಈಗ ಅಭಿನಂದನ್ ಮತ್ತು ಶಿಲ್ಪಾ ನಡುವೆ ಅಕ್ರಮ ಸಂಬಂಧ ಬಯಲಾಗಿದ್ದು, ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ ಎಂದು ಶಿಲ್ಪಾ ಒಪ್ಪಿಕೊಂಡಿದ್ದಾಳೆ. ಸದ್ಯ ಶಿಲ್ಪಾ ಪೊಲೀಸರ ಅತಿಥಿಯಾಗಿದ್ದು ಪ್ರಿಯಕರ ಅಭಿನಂದನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಡೀ ಗ್ರಾಮದ ಜನ ಇಬ್ಬರ ವಿರುದ್ಧ ತಿರುಗಿ ಬಿದ್ದಿದ್ದಾರೆ. ನೊಂದ ತಾಯಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.