ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೊಲೆ-ಸುಲಿಗೆ ದರೋಡೆಯಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಯಾವುದೇ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗುತ್ತಿಲ್ಲ.
ವರದಿ: ಗುರುರಾಜ್ ಹೂಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹುಬ್ಬಳ್ಳಿ (ಜು.09): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೊಲೆ-ಸುಲಿಗೆ ದರೋಡೆಯಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಯಾವುದೇ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗುತ್ತಿಲ್ಲ. ಇದರಿಂದಾಗಿ ಅಪರಾಧ ಪ್ರಕರಗಳು ಹೆಚ್ಚುತ್ತಿದ್ದು, ಸಮಾಜ ಘಾತುಕ ಶಕ್ತಿಗಳನ್ನು ಬಂಧಿಸಿಲು ಜೈಲುಗಳು ಸಾಲುತ್ತಿಲ್ಲ, ಇದರಿಂದಾಗಿ ಹುಬ್ಬಳ್ಳಿ ಸಬ್ ಜೈಲಿನಲ್ಲಿ ಹೆಚ್ಚುವರಿಯಾಗಿ 4 ಬ್ಯಾರಕ್ ನಿರ್ಮಾಣ ಮಾಡಲು ಬಂಧಿಖಾನೆ ಇಲಾಖೆ ಮುಂದಾಗಿದೆ.
ಹೌದು! 72.53 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಉಪ ಖಾರಗೃಹದಲ್ಲಿ ನಾಲ್ಕು ಬ್ಯಾರಕ್ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು, ಹೆಚ್ಚುವರಿ 185 ಕೈದಿಗಳನ್ನು ಇರಿಸಿಕೊಳ್ಳಲು ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗುತ್ತಿದೆ. ಹದಿನೈದು ವರ್ಷದ ಬಳಿಕ ಹುಬ್ಬಳ್ಳಿ ಉಪ ಕಾರಾಗೃಹವನ್ನು ಪುನಃ ವಿಸ್ತರಣೆ ಮಾಡಲಾಗುತ್ತಿದೆ. 185 ಕೈದಿಗಳನ್ನು ಇರಿಸಿಕೊಳ್ಳಲು ಅನುವಾಗುವಂತೆ ಹೆಚ್ಚುವರಿ ನಾಲ್ಕು ಬ್ಯಾರಕ್‌ಗಳ ನಿರ್ಮಾಣಕ್ಕೆ ಕಾಮಗಾರಿ ಶುರುವಾಗಿದೆ.
ಹುಬ್ಬಳ್ಳಿ: ಗುರೂಜಿ ಹತ್ಯೆ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ
ಇತ್ತಿಚೆಗೆ ನಡೆದ ಹಳೇ ಹುಬ್ಬಳ್ಳಿ ಗಲಭೆ ಸೇರಿದಂತೆ ನಗರದಲ್ಲಿ ನಿತ್ಯ ನಡೆಯುತ್ತಿರುವ ಕೊಲೆ- ಸುಲಿಗೆ , ದರೋಡೆಯಂತ ಪ್ರಕರಣದಲ್ಲಿ ಬಂಧಿಯಾಗುವ ಆರೋಪಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏಕಾಏಕಿ ಹೆಚ್ಚಾಗುತ್ತಿದ್ದು, ಅಲ್ಲದೇ ಹುಬ್ಬಳ್ಳಿಯಲ್ಲಿ ಕ್ರೈಂ ರೇಟ್ ಹೆಚ್ಚುತ್ತಿದೆ. ಸಾಮಾನ್ಯವಾಗಿ ಜೈಲಿನ ಸಾಮರ್ಥ್ಯಕ್ಕಿಂತ 10-20 ವಿಚಾರಣಾಧೀನ ಕೈದಿಗಳ ಸಂಖ್ಯೆ ಇಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಕಳೆದ ವರ್ಷಗಳಲ್ಲಿ ಉಪಕಾರಾಗೃಹದ ಅಧಿಕಾರಿಗಳು ಬ್ಯಾರಕ್ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರನ್ವಯ 22.53 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ಇದೀಗ ಕೆಲಸ ಆರಂಭಿಸಲಾಗಿದೆ.
ಒಟ್ಟಾರೆ 55 ವರ್ಷಗಳಲ್ಲಿ ಹುಬ್ಬಳ್ಳಿ ಉಪಕಾರಾಗೃಹ ಎರಡನೇ ಬಾರಿ ವಿಸ್ತರಣೆ ಆಗುತ್ತಿದೆ. 1967 ರಲ್ಲಿ ಹುಬ್ಬಳ್ಳಿ ಉಪಕಾರಾಗೃಹ ನಿರ್ಮಾಣಗೊಂಡಿದೆ, ಆಗ ಏಳು ಬ್ಯಾರಕ್‌ಗಳಿದ್ದವು. 2007ರಲ್ಲಿ ಹೊಸದಾಗಿ ಒಂದು ಬ್ಯಾರಕ್ ನಿರ್ಮಿಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಸುಮಾರು 105 ಕೈದಿಗಳನ್ನು ಇರಿಸಿಕೊಳ್ಳುವ ಸಾಮರ್ಥ್ಯ ಈ ಉಪಕಾರಾಗೃಹಕ್ಕೆ ಇತ್ತು. ಒಂದು ಬ್ಯಾರಕ್‌ನಲ್ಲಿ 10-15 ಕೈದಿಗಳಂತೆ ಸಾಮಾನ್ಯವಾಗಿ 120-125 ಕೈದಿಗಳು ಇದ್ದೇ ಇರುತ್ತಿದ್ದರು. ಹೀಗಾಗಿ ಬ್ಯಾರಕ್ ಗಳ ಸಂಖ್ಯೆ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಇದೀಗ ಸುಮಾರು ,40 ಕೈದಿಗಳು ಇರಲು ಅನುಕೂಲವಾಗುವಂತೆ ನಾಲ್ಕು ಬ್ಯಾರಕ್ ನಿರ್ಮಾಣ ಮಾಡಲಾಗುತ್ತಿದೆ. 105ರಿಂದ 185 ಕೈದಿಗಳವರೆಗೆ ಇಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಲಿದೆ.
ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಕೊಲೆಗೆ ಹೋಟೆಲ್ ಭದ್ರತಾ ವೈಫಲ್ಯ ಕಾರಣವೇ?
ಪರಸ್ಪರ ಅಂತರದೊಂದಿಗೆ ಬಂಧಿಗಳನ್ನು ಇರಿಸಲು ಹಾಗೂ ಭವಿಷ್ಯದ ದೃಷ್ಟಿಯಿಂದ ಅನುಕೂಲ ಆಗುವಂತೆ ಬ್ಯಾರಕ್ ಕಟ್ಟಲಾಗುತ್ತಿದೆ. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಮಾರ್ಗಸೂಚಿ ಅನುಸಾರ ಕಾಮಗಾರಿ ನಡೆಯಲಿದೆ. ಒಂದು ವರ್ಷದಲ್ಲಿ ಹೊಸ ಬ್ಯಾರಕ್‌ಗಳು ತಲೆ ಎತ್ತಲಿವೆ. ಕೈದಿಗಳ ಕೇಂದ್ರ ಸುಧಾರಣಾ ಭಾಗವಾಗಿ ಹೆಚ್ಚುವರಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕೈದಿಗಳ ಸಂಖ್ಯೆ ಹೆಚ್ಚದಿದ್ದರೂ ಈಗಿನ ಸಂಖ್ಯೆಯ ಕೈದಿಗಳನ್ನು ಹೊಸ ಬ್ಯಾರಕ್‌ನಲ್ಲಿ ಇಡುವುದರಿಂದ ಇಕ್ಕಟ್ಟಿನ ಸ್ಥಿತಿ ನಿವಾರಿಸಬಹುದಾಗಿದೆ.