
ಹಾವೇರಿ(ಅ.02): ತನ್ನ ಕಾಮದಾಹಕ್ಕೆ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಪತ್ನಿ ಹತ್ಯೆಗೈದ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಲಿಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ. ಸಾಧಿಕ್ ಮತ್ತೂರು(30) ಕೊಲೆಯಾದ ದುರ್ದೈವಿ, ಸಲ್ಮಾ (26) ಹಾಗೂ ಜಾಫರ್ (28) ಆರೋಪಿಗಳು.
ಗಂಡ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಸತ್ತ ಎಂದು ಕಥೆ ಕಟ್ಟಿದ್ದಳು ಸಲ್ಮಾ, ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆಗೈದಿದ್ದಾಳೆ. ಕಳೆದ ಸೆಪ್ಟೆಂಬರ್ 25 ರಂದು ಕೊಲೆ ಮಾಡಿದ್ದಾರೆ. ಸಲ್ಮಾ ಜಾಫರ್ ಎಂಬುವವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಸಲ್ಮಾ - ಜಾಫರ್ ಸರಸ ಸಲ್ಲಾಪ ನೋಡಿ ಸಾಧಿಕ್ ಬೇಸತ್ತಿದ್ದನು. ಪತ್ನಿ ಸಲ್ಮಾಗೆ ಸಾಕಲಷ್ಟು ಸಲ ಸಾಧಿಕ್ ವಾರ್ನಿಂಗ್ ಕೂಡ ಮಾಡಿದ್ದನಂತೆ. ನಿಮ್ಮಿಬ್ಬರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಸಾಧಿಕ್ ವಾರ್ನಿಂಗ್ ಮಾಡಿದ್ದನು.
ಯುವಕನ ಜತೆ ವಿವಾಹಿತ ಮಹಿಳೆಯ ಲವ್ವಿ ಡವ್ವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ್ಲು ಅಂತ ತಾಯಿಯನ್ನೇ ಕೊಂದ ಮಗಳು..!
ಹೆಸರು ಬರೆದಿಟ್ಟು ಸಾಧಿಕ್ ಆತ್ಮಹತ್ಯೆ ಮಾಡಿಕೊಂಡರೆ ನಾವು ಜೈಲು ಪಾಲಾಗಬಹುದು ಎಂಬ ಆತಂಕ ಉಂಟಾದ ಹಿನ್ನಲೆಯಲ್ಲಿ ಪ್ರಿಯಕರ ಜಾಫರ್ ಜೊತೆ ಸೇರಿ ಸಾಧಿಕ್ ಸಾವಿಗೆ ಸಲ್ಮಾ ಮಹೂರ್ತ ಫಿಕ್ಸ್ ಮಾಡಿದ್ದಳು. ರಾತ್ರೋ ರಾತ್ರಿ ಸಾಧಿಕ್ ಕುತ್ತಿಗೆಗೆ ಹಗ್ಗ ಬಿಗಿದು, ತಲೆ ದಿಂಬು ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ಸಾಧಿಕ್ ಇನ್ನೂ ಜೀವಂತ ಇರಬಹುದು ಎಂಬ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಸಲ್ಮಾ ಹಾಗೂ ಜಾಫರ್ ಮಚ್ಚಿನಿಂದ ಸಾಧಿಕ್ ತಲೆಗೆ ಹೊಡೆದಿದ್ದರು. ಬಳಿಕ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಗಂಡ ಸತ್ತಿರೋದಾಗಿ ಐನಾತಿ ಸಲ್ಮಾ ಕಥೆ ಕಟ್ಟಿದಳು. ತನಿಖೆ ಕೈಗೊಂಡಿದ್ದ ಪೊಲೀಸರ ವಿಚಾರಣೆ ವೇಳೆ ಗಂಡನ ಮರ್ಡರ್ ಬಗ್ಗೆ ಸಲ್ಮಾ ಹಾಗೂ ಜಾಫರ್ ಕಥೆ ಬಿಚ್ಚಿಟ್ಟಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ