ಕನ್ನಡತಿ ಧಾರಾವಾಹಿ ನಟಿ ಮದುವೆ ಪ್ರಸ್ತಾಪಕ್ಕೆ ಹೆದರಿ ಪ್ರಾಣ ಬಿಟ್ಟ ಯುವಕ

Published : Oct 02, 2024, 01:03 PM ISTUpdated : Oct 02, 2024, 02:54 PM IST
ಕನ್ನಡತಿ ಧಾರಾವಾಹಿ ನಟಿ ಮದುವೆ ಪ್ರಸ್ತಾಪಕ್ಕೆ ಹೆದರಿ ಪ್ರಾಣ ಬಿಟ್ಟ ಯುವಕ

ಸಾರಾಂಶ

ಕನ್ನಡತಿ ಧಾರಾವಾಹಿಯ ನಟಿಯ ಮದುವೆ ಪ್ರಸ್ತಾಪದಿಂದ ಬೇಸತ್ತ ಯುವಕ, ಪ್ರೇಯಸಿಯೊಂದಿಗೆ ಮದುವೆ ಮಾಡಿಕೊಳ್ಳುವುದಕ್ಕಿಂತ ಸಾಯುವುದೇ ಮೇಲೆಂದು ಜೀವವನ್ನೇ ತೊರೆದಿದ್ದಾನೆ.

ಬೆಂಗಳೂರು (ಅ.02): ಕನ್ನಡತಿ ಧಾರಾವಾಹಿಯ ನಟಿಯನ್ನು ಕೆಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದ ಯುವಕ, ನಟಿಯ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾನೆ. ಆದರೂ ಬೆನ್ನುಬಿಡದೇ ಮದುವೆಗೆ ಪೀಡಿಸಿದ್ದ ಯುವತಿಯ ಕಾಟಕ್ಕೆ ಬೇಸತ್ತು ಇದೀಗ ಪ್ರಾಣವನ್ನೇ ಬಿಟ್ಟಿದ್ದಾನೆ.

ಹೌದು, ಸಿರಿಯಲ್ ನಟಿಯ ಪ್ರೇಮ ಪಾಶಕ್ಕೆ ಯುವಕ ಜೀವ ತೊರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಮದನ್ (25) ಎಂದು ಗುರುತಿಸಲಾಗಿದೆ. ಸಿರಿಯಲ್ ನಟಿ ವೀಣಾ ಮೋಹಕ್ಕೆ ಬಿದ್ದಿದ್ದ ಮದನ್ ಆಕೆಯನ್ನು ಪ್ರೀತಿ ಮಾಡುತ್ತಾ ಕೆಲವು ದಿನಗಳಿಂದ ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರೂ ನಿನ್ನೆ ರಾತ್ರಿ ಇಬ್ಬರು ಒಂದೇ ರೂಮಿನಲ್ಲಿ ಪಾರ್ಟಿ ಮಾಡಿದ್ದರು. ಯುವಕ ಮದನ್‌ನನ್ನು ಮನೆಗೆ ಕರೆಸಿಕೊಂಡು ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಜಗಳ ನಡೆದಿದೆ. ಯುವತಿ ನೀನು ನನ್ನನ್ನು ಮದುವೆ ಮಾಡಿಕೊಳ್ಳುವಂತೆ ಹೇಳಿದ್ದಾಳೆ. ಆದರೆ, ಈತನಿಗೆ ನಟಿಯ ನಡತೆಯ ಮೇಲೆ ನಂಬಿಕೆ ಇರಲಿಲ್ಲ. ಆದ್ದರಿಂದ ಮದುವೆ ನಿರಾಕರಣೆ ಮಾಡಿದ್ದಾನೆ.

ಇದನ್ನೂ ಓದಿ: ಷಡಕ್ಷರಿ ಮಠದ ಸ್ವಾಮೀಜಿ ರಾಸಲೀಲೆ ವಿಡಿಯೋ: 6 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಬಂಧನ

.ಇನ್ನು ಪ್ರಿಯಕರನಿಂದಿಗೆ ಈಕೆಯೂ ಮದ್ಯ ಸೇವನೆ ಅಭ್ಯಾಸ ಇದ್ದುದರಿಂದ ನಮ್ಮ ಮನೆಗೆ ಈಕೆ ತಕ್ಕ ಸೊಸೆಯಲ್ಲ ಎಂದು ಮದುವೆಯನ್ನು ನಿರಾಕರಣೆ ಮಾಡಿದ್ದಾನೆ. ಆದರೂ, ನೀನು ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕು ಎಂದು ಹಠ ಮಾಡಿದ್ದಾಳೆ. ಇದರಿಂದ ಮನನೊಂದ ಯುವಕ ಮದನ್ ಬಾತ್ ರೂಮಿಗೆ ಹೋಗಿ ಬರುವುದಾಗಿ ಹೋಗಿ ಅಲ್ಲಿಯೇ ಸಾವಿಗೀಡಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇವರಿಬ್ಬರೂ ಹಲವು ದಿನಗಳಿಂದ ಲೀವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು. ಇನ್ನು ಯುವಕ ಮದನ್ ಇವೆಂಟ್ ಮ್ಯಾನೇಜ್ ಮೆಂಟ್‌ನಲ್ಲಿ ಡೆಕೊರೇಟ್ ಕೆಲಸ ಮಾಡಿಕೊಂಡಿದ್ದನು. ವೀಣಾ ಸೀರಿಯಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು.

ಯುವತಿ ವೀಣಾ ಸಹ ನಟಿಯಾಗಿ  ಸೀರಿಯಲ್ ಹಾಗೂ ಸಿನೆಮಾದಲ್ಲಿ ನಟನೆ ಮಾಡುತ್ತಿದ್ದರಿಂದ ಆಕೆಗೆ ಹಲವು ಹುಡುಗರ ಪರಿಚಯವಿತ್ತು. ಇದರಿಂದ ಆಕೆಯ ಕ್ಯಾರೆಕ್ಟರ್ ಮೇಲೆ ಯುವಕ ಅನುಮಾನ ಪಟ್ಟಿದ್ದನು. ಆದ್ದರಿಂದ ಮದುವೆಯಾಗಲು ನಿರಾಕರಿಸಿದ್ದಳು. ಆದರೂ, ಫೋನಿನ ಮೂಲಕ ಯುವಕನಿಗೆ ಮದುವೆ ಮಾಡಿಕೊಳ್ಳಲು ಟಾರ್ಚರ್ ನೀಡುತ್ತಿದ್ದಳು. ಸಿಕೆ ಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ ಯುವತಿ, ಮದನ್‌ನನ್ನು ಮನೆಗೆ ಕರೆಸಿಕೊಂಡು ಪಾರ್ಟಿ ಮಾಡಿದ್ದಾರೆ. ಇದಾದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಕರ್ತವ್ಯನಿರತ ಪೊಲೀಸ್ ಪೇದೆಗೆ ಹಾರ್ಟ್ ಅಟ್ಯಾಕ್; ಆಸ್ಪತ್ರೆಯಲ್ಲಿ ಕೊನೆಯುಸಿರು!

ಈ ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡತಿ ಸೀರಿಯಲ್ ನಟಿ ವೀಣಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ವೀಣಾ ಧಾರಾವಾಹಿ ಜೊತೆಗೆ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ