
ದೆಹಲಿ (ನ.3): ಉತ್ತರ ದೆಹಲಿಯಲ್ಲಿ ಮದ್ಯ ಸೇವಿಸಿ ಜಗಳವಾಡಿದ ಗಂಡನ ಮರ್ಮಾಂಗವನ್ನೇ ಪತ್ನಿ ಕತ್ತರಿಸಿದ್ದಾಳೆ. ಘಟನೆ ಶನಿವಾರ ರಾತ್ರಿ ನಡೆದಿದೆ. ಬಿಹಾರ ಮೂಲದ ಯುವಕನ ಮೇಲೆ ಪತ್ನಿ ಈ ಹಲ್ಲೆ ನಡೆಸಿದ್ದಾಳೆ. ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಆರೋಗ್ಯ ಸ್ಥಿತಿ ಈಗ ಉತ್ತಮವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರ ಮೂಲದ ದಂಪತಿಗಳು ಎರಡು ತಿಂಗಳ ಹಿಂದೆ ದೆಹಲಿಗೆ ಸ್ಥಳಾಂತರಗೊಂಡಿದ್ದರು.
ಶಕ್ತಿ ನಗರದ ಹೋಂ ಸ್ಟೇಯೊಂದರಲ್ಲಿ ಸಹಾಯಕನಾಗಿ ಯುವಕ ಕೆಲಸ ಮಾಡುತ್ತಿದ್ದ. ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಇಬ್ಬರ ನಡುವೆ ಜಗಳ ನಡೆದಿತ್ತು. ಘಟನೆ ನಡೆದ ದಿನವಾದ ಶನಿವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದ ಯುವಕ ಪತ್ನಿಯೊಂದಿಗೆ ಜಗಳವಾಡಿದ. ಜಗಳದ ನಂತರ ಪತ್ನಿ ಮನೆಯಿಂದ ಹೊರ ಹೋಗಿದ್ದಳು. ಮದ್ಯದ ಅಮಲಿನಲ್ಲಿ ಯುವಕ ಮನೆಯಲ್ಲಿ ಮಲಗಿದ್ದ. ನಂತರ ಮನೆಗೆ ಹಿಂದಿರುಗಿದ ಪತ್ನಿ ಚೂಪಾದ ವಸ್ತುವಿನಿಂದ ಗಂಡನ ಮರ್ಮಾಂಗವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈವಾಹಿಕ ಅತ್ಯಾಚಾರ ಅಪರಾಧ ಅಲ್ಲ: ಸುಪ್ರೀಂಗೆ ಕೇಂದ್ರ ಹೇಳಿಕೆ
ಘಟನೆಯ ನಂತರ ಆಕೆ ಮನೆಯಿಂದ ಪರಾರಿಯಾಗಿದ್ದಾಳೆ. ಗಾಯಾಳುವನ್ನು ಮೊದಲು ಬಾರಾ ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಕೃತ್ಯ ಎಸಗಿ ಪರಾರಿಯಾಗಿರುವ ಮಹಿಳೆ ಇನ್ನೂ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರಿಗೂ ಇದು ಮೂರನೇ ವಿವಾಹ ಎಂದು ತಿಳಿದುಬಂದಿದೆ.
ಆಕೆಗೆ ಒಪ್ಪಿಗೆ ಇಲ್ಲದಿದ್ದರೂ ಪತ್ನಿಯೊಂದಿಗೆ ಅಸಹಜ ಸಂಭೋಗ ಅತ್ಯಾಚಾರವಲ್ಲ!: ಮಧ್ಯ ಪ್ರದೇಶ ಹೈಕೋರ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ