ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಣಿ ನೇಣು ಬಿಗಿದು ಆತ್ಮ*ತ್ಯೆ

By Ravi Janekal  |  First Published Nov 3, 2024, 9:22 AM IST

ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಗೀತಾ(37) ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ.


ಬೆಂಗಳೂರು (ನ.3): ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಗೀತಾ(37) ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ. 17 ವರ್ಷಗಳ ಹಿಂದೆ ಮುರಳಿಮೋಹನ್ ಎಂಬಾತನ ಜೊತೆಗೆ ಮದುವೆ ಮಾಡಿಕೊಟ್ಟಿದ್ದ ಪೋಷಕರು. ಮದುವೆ ಬಳಿಕ ಕೆಲ ವರ್ಷಗಳು ಚೆನ್ನಾಗಿದ್ದ ದಂಪತಿ  ಬಳಿಕ ವಿನಾಕಾರಣ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಆರೋಪಿಸಲಾಗಿದೆ. ಕಳೆದ ಕೆಲ ತಿಂಗಳಿಂದ ಪ್ರತಿನಿತ್ಯ ಗಲಾಟೆ ಮಾಡಿಕೊಂಡು ಬೇಸತ್ತಿದ್ದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ.

Tap to resize

Latest Videos

undefined

ಕೊಪ್ಪಳ: ಬರೀ ಹೆಣ್ಣು ಹೆತ್ತಳು ಅಂದಿದ್ದಕ್ಕೆ ಆತ್ಮಹತ್ಯೆ, 4 ತಿಂಗಳ ಹಸುಗೂಸು ಸೇರಿ 3 ಮಕ್ಕಳು ತಬ್ಬಲಿ!

ಪತಿಯಿಂದಲೇ ಕೊಲೆ; ಆರೋಪ: 

ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಪತಿಯೇ ನೇಣುಬಿಗಿದು ಪತ್ನಿಯನ್ನು ಕೊಂದಿದ್ದಾನೆಂದು ಗೀತಾ ಪೋಷಕರು ಆರೋಪ ಮಾಡಿದ್ದಾರೆ. ಪೋಷಕರ ಆರೋಪ ಹಿನ್ನೆಲೆ ಗೀತಾ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವರದಿ ಬಳಿಕವೇ ಸತ್ಯಾಂಶ ಹೊರಬರಲಿದೆ. ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!