* ಇಬ್ಬರು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದ ಗಂಡ-ಹೆಂಡತಿ
* ಜೀವನಾಂಶ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳೆ
* ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಶಿವಮೊಗ್ಗ(ಜೂ.04): ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಪತಿಯೇ ತನ್ನ ಪತ್ನಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ಆರ್‌ಎಂಎಲ್ ನರಗದ ನಿವಾಸಿಯೊಬ್ಬ ತನ್ನ ಪತ್ನಿ ತನ್ನ ವಿರುದ್ಧ ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ್ದಕ್ಕೆ ಆಕೆಯನ್ನು ಅಡ್ಡಗಟ್ಟಿಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.
ಏನಿದು ಪ್ರಕರಣ?:
1993ರಲ್ಲಿ ಸೈಯದ್ ಅಜ್ಗರ್ ಎಂಬಾತನನ್ನು ಮಹಿಳೆ ಮದುವೆಯಾಗಿದ್ದರು. ಅನಂತರ ದಿನದಲ್ಲಿ ಸಂಸಾರದಲ್ಲಿ ಮನಸ್ತಾಪ ಉಂಟಾದ ಕಾರಣ ಇಬ್ಬರು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಜೀವನಾಂಶ ಕೋರಿ ಮಹಿಳೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕಳೆದ ಮೇ 29ರಂದು ಮಂಜುನಾಥ ಬಡಾವಣೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ ಅಜ್ಗರ್ ಹಾಗೂ ಆತನ ಜೊತೆಗಿದ್ದವರು ಮಹಿಳೆ ಮೇಲೆ ಹಲ್ಲೆ ನಡೆಸಲು ಮುಂದಾಗಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಪೊಲಿಸರಿಗೇ ಚಳ್ಳೆಹಣ್ಣು ತಿನ್ನಿಸಿ ಖದೀಮರ ಕಳ್ಳತನ: ಮುಸಗುಗಳ್ಳರ ಕಾಟಕ್ಕೆ ಬೆಸ್ತುಬಿದ್ದ ಬಳ್ಳಾರಿ ಜನತೆ..!
ನ್ಯಾಯಾಲಯದಲ್ಲಿ ದಾಖಲಿಸಿರುವ ಅರ್ಜಿ ಹಿಂಪಡೆಯದೇ ಹೋದರೆ ಖಾಸಗಿ ವೀಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಆದ್ದರಿಂದ ಅಜ್ಗರ್ ಹಾಗೂ ಆತನ ಜತೆಗಿದ್ದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ನೊಂದ ಮಹಿಳೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.