ಪೊಲಿಸರಿಗೇ ಚಳ್ಳೆಹಣ್ಣು ತಿನ್ನಿಸಿ ಖದೀಮರ ಕಳ್ಳತನ: ಮುಸಗುಗಳ್ಳರ ಕಾಟಕ್ಕೆ ಬೆಸ್ತುಬಿದ್ದ ಬಳ್ಳಾರಿ ಜನತೆ..!

By Girish Goudar  |  First Published Jun 4, 2022, 11:36 AM IST

*   ರಾತ್ರಿಯಾದ್ರೇ ಸಾಕು ಕಳ್ಳತನ ಮಾಡೋದೇ ಇವರ ಖಯಾಲಿ
*  ಆಂಧ್ರದ ಮೂಲದ ಕಳ್ಳರ ತಂಡ ಎನ್ನಲಾಗುತ್ತಿದೆ
*  ಪೊಲಿಸರಿಗೆ ತಲೆನೋವಾಗಿರೋ ಸರಣಿ ಕಳ್ಳರ ಗ್ಯಾಂಗ್‌ನ ಕೃತ್ಯ
 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ

ಬಳ್ಳಾರಿ(ಜೂ.04): ಮುಸುಕುದಾರಿ ಕಳ್ಳರ ಕಾಟಕ್ಕೆ ಬಳ್ಳಾರಿ ಜನರು ಸುಸ್ತಾಗಿದ್ದಾರೆ. ಅಂಗಡಿಯ ಬಾಗಿಲು ಹಾಕಿದ್ರೇ, ಸಾಕು ರಾತ್ರೋರಾತ್ರಿ ಅಂಗಡಿ ಬೀಗ ಒಡೆಯೊದು ಕಳ್ಳತನ ಮಾಡೋದೇ ಇವರ ಕಾಯಕ. ವಿಶೇಷವೇಂದ್ರೆ ಇವರ ಕಳ್ಳತನ ಮಾಡೋದಕ್ಕೂ ಸಮಯ‌ ನಿಗದಿ ಮಾಡಿದ್ದು, ಪೊಲೀಸ್ ಗಸ್ತು‌ ಮುಗಿಸಿಕೊಂಡು ಹೋಗೋದನ್ನೇ ಕಾಯುವ ಕಳ್ಳರು ರಾತ್ರಿ ಎರಡರಿಂದ ಎರಡುವರೆ ಮಧ್ಯೆ ಕಳ್ಳತನ ಮಾಡ್ತಾರೆ. ಇನ್ನೂ ಜನರೇ ಹೇಳೋ ಪ್ರಕಾರ ಇವರೆಲ್ಲರೂ ಆಂಧ್ರದಿಂದ ಬರೋ ತಂಡ ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಬರೋದು ಈ ರೀತಿ ನಾಲ್ಕಾರು ಅಂಗಡಿಗಳಲ್ಲಿ ಕಳ್ಳತನ ಮಾಡೋದು ನಂತರ ಊರು ಬಿಟ್ಟು ಹೋಗುತ್ತಾರೆ. ಹೀಗಾಗಿ ಇವರನ್ನು ಹಿಡಿಯೋ ಕಷ್ಟ ಎನ್ನುತ್ತಿದ್ದಾರೆ.

Tap to resize

Latest Videos

undefined

ಸರಣಿ ಕಳ್ಳತನ ಮಾಡೋ ಗ್ಯಾಂಗ್

ಇನ್ನೂ ಕಳ್ಳತನಕ್ಕೂ ಮುನ್ನ ಇಂದು ಇದೆ ರಸ್ತೆಯಲ್ಲಿರೋ ಮನೆ ಅಥವಾ ಅಂಗಡಿಯನ್ನು ಕಳ್ಳತನ ಮಾಡಬೇಕೆಂದು ಟಾರ್ಗೇಟ್ ಮಾಡಿಕೊಂಡು ಸರಣಿ ಕಳ್ಳತನ ಮಾಡುತ್ತಾರೆ. ಯಾಕಂದ್ರೇ ಒಂದು ಅಂಗಡಿ ಓಪನ್ ಆಗದೇ ಇದ್ರೇ ಮತ್ತೊಂದು ಅಂಗಡಿಯನ್ನು ಓಪನ್ ಮಾಡೋದು ಇವರ ಕೆಲಸ. ಹೀಗಾಗಿ ಒಮ್ಮೆ ಕಳ್ಳತನ ಮಾಡಿದ್ರೇ ಕನಿಷ್ಟ ನಾಲ್ಕಕ್ಕೂ ಹೆಚ್ಚು ಅಂಗಡಿ ಅಥವಾ ಮನೆಯನ್ನು ಕಳ್ಳತನ ಮಾಡುತ್ತಾರೆ. ಒಂದು ರಾತ್ರಿ ಪ್ರಯತ್ನ ಪಟ್ಟರೆ ಕನಿಷ್ಠ ಒಂದಾದ್ರೂ ಅಂಗಡಿ ಅಥವಾ ಮನೆಯನ್ನು ಗುಡಿಸಿಗುಂಡಾಂತರ ಮಾಡೋದೇ ಈ ಖಧೀಮರ ಕೆಲಸ. ಇನ್ನೂ ಮೈಮೇಲಿನ ಬಟ್ಟೆ ಸೇರಿದಂತೆ ಮುಖಕ್ಕೆ ಹಾಕೋ ಮುಖಗವಸನ್ನು ಕೂಡ ಬಿಳಿ ಬಟ್ಟೆದ್ದೇ ಬಳಸಿ ಇವರು ಕಳ್ಳತನ ಮಾಡುತ್ತಾರೆ.  

ಕಂಬ ಏರಿ ಗೋಡೆ ಹಾರಿ ಸ್ಪೈಡರ್‌ಮ್ಯಾನ್ ಸ್ಟೈಲಲ್ಲಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆರು ಅಂಗಡಿಯಲ್ಲಿ ಕಳ್ಳತನ ಯತ್ನ ಒಂದರಲ್ಲಿ ಸಫಲ

ನಿನ್ನೆ ರಾತ್ರಿ ಕೂಡ ಮೋಕಾ ರಸ್ತೆಯಲ್ಲಿರೋ ನಾಲ್ಕಕ್ಕೂ ಹೆಚ್ಚು ಅಂಗಡಿಗಳ ಶಟರ್ ನ ಬೀಗ ಮುರಿದು ಕಳ್ಳತನ ಯತ್ನಿಸಿದ್ದಾರೆ. ಆದ್ರೇ, ನಾಲ್ಕು ಕಡೆ ಫೇಲಾದ ಕಳ್ಳತನ ಯತ್ನ ಒಂದು ಕಡೆ ಭರ್ಜರಿ ಕಳ್ಳತನ ಮಾಡಿದ್ದಾರೆ. ನಂದಿನಿ ಪಾರ್ಲರ್ ನಲ್ಲಿದ್ದ 36 ಸಾವಿರ ರೂಪಾಯಿ ನಗದು, 5 ಗ್ರಾಂನ ಬಂಗಾರ ಕಳ್ಳತನ ಮಾಡಿದ್ದಾರೆ. ಇನ್ನೂ ನಂದಿನಿ ಪಾರ್ಲರ್ಗೂ ಮುನ್ನ ನಂದಾಸ್ ಸೂಪರ್ ಮಾರ್ಟ್. ಲಕ್ಷ್ಮೀ ಪದ್ಮಾವತಿ ಎಜೆನ್ಸಿಸ್. ಜೆರಾಕ್ಸ್ ಶಾಪ್, ಸೇರಿದಂತೆ ಇನ್ನಿತರ ಸಣ್ಫಪುಟ್ಟ ಅಂಗಡಿಯಲ್ಲಿ ವಿಫಲ ಯತ್ನ ನಡೆಸಿದ್ದಾರೆ. 

ಕಳ್ತನದ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಇನ್ನೂ ಮೊದಲಿಗೆ ನಂದಾಸ್ ಸೂಪರ್ ಮಾರ್ಟ್. ಮತ್ತು  ಲಕ್ಷ್ಮೀ ಪದ್ಮಾವತಿ ಎಜೆನ್ಸಿಸ್ ನಲ್ಲಿ ಕಳ್ಳತನಕ್ಕೆ ಯತ್ನ ಮಾಡಿದ ಎಲ್ಲ ದೃಶ್ಯವಳಿಗಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದ್ರೇ, ಜೆರಾಕ್ಸ್ ಶಾಪ್, ನಂದಿನ ಪಾರ್ಲರ್ನಲ್ಲಿ ಕರೆಂಟ್ ಇಲ್ಲದ ಕಾರಣ ಸಿಸಿ ಟಿವಿಯಲ್ಲಿನ ದೃಶ್ಯ ಸೆರೆಯಾಗಿಲ್ಲ. ಇನ್ನೂ ಕಳೆದ ವಾರವೂ ಕೂಡ ಇದೇ ರೀತಿ ಬಳ್ಳಾರಿಯ ವಿವಿಧ ಬಡಾವಣೆಯಲ್ಲಿ ಇದೇ ರೀತಿ ನಡೆದಿದೆ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.  
 

click me!