ಅನೈತಿಕ ಸಂಬಂಧ ರಟ್ಟಾಗುತ್ತಿದ್ದಂತೆ ವಿದ್ಯುತ್ ಕಂಬ ಹತ್ತಿದ ಪತ್ನಿ, ಹೈಡ್ರಾಮಕ್ಕೆ ಗ್ರಾಮಸ್ಥರು ಸುಸ್ತು!

By Suvarna News  |  First Published Apr 4, 2024, 3:54 PM IST

ಪತ್ನಿಯ ಅನೈತಿಕ ಸಂಬಂಧವನ್ನು ಪತಿ ಪತ್ತೆ ಹಚ್ಚಿದ್ದಾನೆ. ಬರೋಬ್ಬರಿ 7 ವರ್ಷಗಳಿಂದ ನಡೆಯುತ್ತಿದ್ದ ಈ ಅನೈತಿಕ ಸಂಬಂಧ ರಟ್ಟಾದ ಬೆನ್ನಲ್ಲೇ ಪತ್ನಿ ಟೈಟೆನ್ಶನ್ ವೈಯರ್‌ನ ವಿದ್ಯುತ್ ಕಂಬಕ್ಕೆ ಹತ್ತಿ ಹೈಡ್ರಾಮಾ ಮಾಡಿದ್ದಾಳೆ. ಈಕೆಯ ಅನೈತಿಕ ಸಂಬಂಧ ಹಾಗೂ ಬೇಡಿಕೆಯಿಂದ ಇಡೀ ಗ್ರಾಮಸ್ಥರೇ ಸುಸ್ತಾಗಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. 
 


ಗೋರಖ್‌ಪುರ(ಏ.04) ಪತಿ-ಪತ್ನಿ ಹಾಗೂ ಮೂವರು ಮಕ್ಕಳ ಸಂಸಾರ ಹೆಚ್ಚಿನ ಸಮಸ್ಯೆಗಳಿಲ್ಲದೆ ಸಾಗಿತ್ತು. ಆದರೆ ಪತ್ನಿ ಕಳೆದ 7 ವರ್ಷಗಳಿಂದ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇತ್ತೀಚೆಗೆ ಅನುಮಾನಗೊಂಡ ಪತಿ ಈ ಅನೈತಿಕ ಸಂಬಂಧವನ್ನು ಪತ್ತೆ ಹಚ್ಚಿದ್ದಾನೆ. ಪತಿಗೆ ತನ್ನ ಅಕ್ರಮ ಸಂಬಂಧ ಮಾಹಿತಿ ತಿಳಿಯುತ್ತಿದ್ದಂತೆ ಪತ್ನಿ ರಂಪಾಟ ಶುರುಮಾಡಿದ್ದಾಳೆ. ವಾಕಮ್ಸರ, ಸಣ್ಣ ಯುದ್ಧವೇ ನಡೆದುಹೋಗಿದೆ. ಬಳಿಕ ಮನೆಯಿಂದ ಹೊರಬಿದ್ದ ಪತ್ನಿ ಪಕ್ಕದಲ್ಲಿದ್ದ ಹೈಟೆನ್ಶನ್ ವೈಯರ್‌ನ ವಿದ್ಯುತ್ ಕಂಬ ಹತ್ತಿ ಹೈಡ್ರಾಮ ನಡೆಸಿದ್ದಾಳೆ. ಈಕೆಯ ಅಕ್ರಮ ಸಂಬಂಧಿಂದ ಇಡೀ ಗ್ರಾಮಸ್ಥರೇ ಸುಸ್ತಾಗಿದ್ದಾರೆ. ಇತ್ತ ಪೊಲೀಸರು, ವಿದ್ಯುತ್ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಕೆಳಗಿಳಿಸಲು ಹರಸಾಹಸ ಮಾಡಿದ್ದಾರೆ. ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದ ಈ ಘಟನೆ ವಿಡಿಯೋ ವೈರಲ್ ಆಗಿದೆ.

ಪೈಪರಾಚ್ ಗ್ರಾಮದ ರಾಮ್ ಗೋವಿಂದ್ ಪತ್ನಿ 34 ವರ್ಷದ ಮಹಿಳೆ ಮೂವರು ಮಕ್ಕಳ ತಾಯಿ. ಕಳೆದ 7 ವರ್ಷಗಳಿಂದ ಈಕೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಇವರಿಬ್ಬರ ಲವ್ವಿ ಡವ್ವಿ ಹೇಗೆ ಸಾಗಿತ್ತು. ಆದರೆ ಪತಿಗೆ ಗೊತ್ತೇ ಆಗಲಿಲ್ಲ. ಇತ್ತೀಚೆಗೆ ಪತ್ನಿಯ ನಡೆಗಳು ಅನುಮಾನ ತಂದಿತ್ತು.  ಹೀಗಾಗಿ ಪತ್ನಿಯನ್ನು ಪ್ರಶ್ನಿಸಿದ್ದಾನೆ. ಆದರೆ ತಾನು ಪತಿವೃತೆ ಅನ್ನೋದನ್ನು ಎಲ್ಲಿಬೇಕಾದರು ಸಾಬೀತುಪಡಿಸುತ್ತೇನೆ ಎಂದು ಹೇಳಿ ಗದರಿಸಿದ್ದಳು. ಹೀಗಾಗಿ ಪತಿ ರಾಮ್ ಗೋವಿಂದ್ ಸುಮ್ಮನಾಗಿದ್ದ. ಇತ್ತೀಚೆಗೆ ಪತ್ನಿಯ ಅನೈತಿಕ ಸಂಬಂಧವನ್ನು ರೆಡ್ ಹ್ಯಾಂಡ್ ಆಗಿ ಪತಿ ಪತ್ತೆ ಹಚ್ಚಿದ್ದಾನೆ. 

Tap to resize

Latest Videos

12 ವರ್ಷದ ಮೊದಲೇ ಮತ್ತೊಂದು ಮದ್ವೆಯಾಗಿದ್ದ ಗಂಡ, ಸಂಸಾರ ರಹಸ್ಯದ ಗುಟ್ಟು ರಟ್ಟಾಯ್ತು!

ಪತ್ನಿಯ ರಹಸ್ಯ ಸಂಬಂಧ ಗುಟ್ಟು ಬಯಲಾಗಿದೆ. ಆಕ್ರೋಶಗೊಂಡ ರಾಮ್ ಗೋವಿಂದ್ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಈ ವೇಳೆ ಪತ್ನಿಯ ಬೇಡಿಕೆ ಕೇಳಿ ಮತ್ತಷ್ಟು ಕೆಳಿದ್ದಾನೆ. ಅನೈತಿಕ ಸಂಬಂಧ ಇಟ್ಟುಕೊಂಡಿರುವ ವ್ಯಕ್ತಿಯನ್ನು ಇದೇ ಮನೆಯಲ್ಲಿ ಇಟ್ಟುಕೊಳ್ಳಲು ಬೇಡಿಕೆ ಇಟ್ಟಿದ್ದಾಳೆ. ಇಷ್ಟೇ ಅಲ್ಲ ಆತನಿಕೆಗ ಕೆಲಸವಿಲ್ಲ, ಹೀಗಾಗಿ ಒಂದಿಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. 

 

मोहब्बत का ऐसा सिला...', 3 बच्चों की मां को चढ़ा 'इश्क का बुखार',
प्रेमी को साथ रखने की बात पर पति से नाराज, खंभे पर चढ़ करने लगी तांडव !! के से एक हैरान कर देने वाला मामला सामने आया है। यहां तीन बच्चो की माँ को प्यार का खुमार चढ़ा है और प्यार का खुमार भी इस कदर… pic.twitter.com/J6XQ4FMxRh

— MANOJ SHARMA LUCKNOW UP🇮🇳🇮🇳🇮🇳 (@ManojSh28986262)

 

ಈಕೆಯ ಮಾತಿಗೆ ಆಕ್ರೋಶಗೊಂಡ ಪತಿ ಆಕೆಯನ್ನು ಮನೆಯಿದಂ ಹೊರದಬ್ಬಿದ್ದಾನೆ. ಇತ್ತ ಪತ್ನಿ ಮನೆಯ ಪಕ್ಕದಲ್ಲಿದ್ದ ಹೈಟೆನ್ಶನ್ ವೈಯರ್ ಇರುವ ವಿದ್ಯುತ್ ಕಂಬ ಹತ್ತಿದ್ದಾಳೆ. ಮಹಿಳೆ ವಿದ್ಯುತ್ ಕಂಬ ಹತ್ತುತ್ತಿದ್ದಂತೆ ಸ್ಥಳೀಯರು ಆಗಮಿಸಿ ಕೆಳಗಿಳಿಯಲು ಸೂಚಿಸಿದ್ದಾರೆ. ಪತಿಗೆ ಬೈಯುತ್ತಾ ವಿದ್ಯುಕ್ ಕಂಬ ಹತ್ತುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ವಿದ್ಯುತ್ ಇಲಾಖೆ ಅಧಿಕಾರಿಗಳಿಗ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾದರೆ.

ಮದುವೆಯಾದ್ರೂ ಮೂವರು ಬಾಯ್ ಫ್ರೆಂಡ್! ಸುಖಿ ಸಂಸಾರದ ಗುಟ್ಟು ಬಿಚ್ಚಿಟ್ಟ ಮಹಿಳೆ

ವಿದ್ಯುಕ್ ಕಂಬ್ ಮೇಲೇರಿ ವೈಯರ್ ಹಿಡಿದು ಕುಳಿತ ಈಕೆಯನ್ನು ಕೆಳಗಿಳಿಸಲು ಸ್ಥಳೀಯರು ಪೊಲೀಸರು ಹಾಗೂ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಹರಸಾಹಸ ಮಾಡಿದ್ದಾರೆ. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಎದುರಿಸುತ್ತಿದ್ದಾರೆ.
 

click me!